AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಕೆಂಪೇಗೌಡ ಏರ್​​​ಪೋರ್ಟ್​ಗೆ ಒಂದೇ ವಾರದಲ್ಲಿ 2ನೇ ಬಾರಿಗೆ ಹುಸಿ ಬಾಂಬ್​ ಮೇಲ್ ಬೆದರಿಕೆ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಒಂದೇ ವಾರದಲ್ಲಿ ಎರಡನೇ ಬಾರಿಗೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ಶೌಚಾಲಯದ ಪೈಪ್‌ಲೈನ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಲಾಗಿದೆ. ಪರಿಶೀಲನೆ ಬಳಿಕ ಇವು ಹುಸಿ ಬೆದರಿಕೆ ಎಂದು ತಿಳಿದುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಬೆಂಗಳೂರು ಕೆಂಪೇಗೌಡ ಏರ್​​​ಪೋರ್ಟ್​ಗೆ ಒಂದೇ ವಾರದಲ್ಲಿ 2ನೇ ಬಾರಿಗೆ ಹುಸಿ ಬಾಂಬ್​ ಮೇಲ್ ಬೆದರಿಕೆ
ಹುಸಿ ಬಾಂಬ್​ ಇ-ಮೇಲ್
ನವೀನ್ ಕುಮಾರ್ ಟಿ
| Edited By: |

Updated on:Jun 19, 2025 | 11:52 AM

Share

ಬೆಂಗಳೂರು, ಜೂನ್​ 19: ಕಳೆದು ಒಂದು ತಿಂಗಳಿಂದ ಕರ್ನಾಟಕದ ಹಲವೆಡೆ ಕಿಡಿಗೇಡಿಗಳಿಂದ ಹುಸಿ ಬಾಂಬ್​ ಬೆದರಿಕೆಯ ಇ-ಮೇಲ್​ಗಳು (Bomb threat) ಬಂದಿವೆ. ಇತ್ತೀಚೆಗೆ ಹಾಸನದ ಮೂರು ಖಾಸಗಿ ಶಾಲೆಗೆ, ಮೈಸೂರಿನ ಖಾಸಗಿ ಶಾಲೆಗೆ, ಬೆಂಗಳೂರಿನ ಹಲವು ಶಾಲೆಗಳು ಮತ್ತು ಪ್ರತಿಷ್ಠಿತ ಹೋಟೆಲ್​​ಗಳಿಗೂ ಬಾಂಬ್​​ ಬೆದರಿಕೆ ಬಂದಿತ್ತು. ಅಷ್ಟೇ ಅಲ್ಲದೆ ಒಂದೇ ವಾರದಲ್ಲಿ ಎರಡೆರಡು ಬಾರಿಗೆ ಕೆಂಪೇಗೌಡ ಏರ್​​​ಪೋರ್ಟ್​ಗೆ (Kempegowda Airport) ಹುಸಿ ಬಾಂಬ್​ ಮೇಲ್​ ಬಂದಿದೆ. ಹೀಗಾಗಿ ಜನರಲ್ಲಿ ಆತಂಕ ಶುರುವಾಗಿದೆ.

ಒಂದೇ ವಾರದಲ್ಲಿ ಎರಡನೇ ಬಾರಿ ಹುಸಿ ಬಾಂಬ್​

ನಗರದಲ್ಲಿ ಕಳೆದ ಕೆಲ ದಿನಗಳಿಂದ ಸೈಲೆಂಟ್ ಆಗಿದ್ದ ಹುಸಿ ಬಾಂಬ್ ಮೇಲ್​ಗಳು ಮತ್ತೆ ಆಕ್ಟೀವ್​ ಆಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರ ಮತ್ತೊಂದು ಹುಸಿ ಬಾಂಬ್​ ಮೇಲ್​ ಬಂದಿದೆ. ಒಂದೇ ವಾರದಲ್ಲಿ ಇದು ಎರಡನೇ ಹುಸಿ ಬಾಂಬ್​ ಮೇಲ್ ಆಗಿದೆ. ಜೂ.13, 16ರಂದು ಎರಡು ಬಾಂಬ್​ ಬೆದರಿಕೆ ಇ-ಮೇಲ್ ಬಂದಿತ್ತು.

ಇದನ್ನೂ ಓದಿ: ಅತ್ಯಾಚಾರ ಪ್ರಕರಣ: ಮೈಸೂರಿನ ಖಾಸಗಿ ವಸತಿ ಶಾಲೆಗೆ ಬಾಂಬ್​ ಬೆದರಿಕೆ

ಇದನ್ನೂ ಓದಿ
Image
ಬೆಂಗಳೂರಿನ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ: ಹೈ ಅಲರ್ಟ್
Image
ಹಾಸನ: ಮೂರು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ
Image
ಪಾಸ್​​ಪೋರ್ಟ್​ ಕಚೇರಿ, ಸಿಎಂ ಮನೆಗೆ ಬಾಂಬ್ ಇಡುವುದಾಗಿ ಬೆದರಿಕೆ ಸಂದೇಶ
Image
ಬೆಂಗಳೂರಿನ ಪ್ರತಿಷ್ಠಿತ ​ಹೋಟೆಲ್​ಗೆ ಬಾಂಬ್ ಬೆದರಿಕೆ ಸಂದೇಶ

ಏರ್​​ಪೋರ್ಟ್​ ಭದ್ರತಾ ಪಡೆಗೆ ಮೇಲ್​ ಬಂದಿದ್ದು, ‘ಉಗ್ರ ಅಜ್ಮಲ್ ಕಸಬ್​ ಗಲ್ಲಿಗೆ ಹಾಕಿದ್ದು ಸರಿಯಿಲ್ಲ. ಶೌಚಾಲಯದ ಪೈಪ್​ಲೈನ್​ನಲ್ಲಿ ಬಾಂಬ್ ಇಟ್ಟಿದ್ದು, ಪಝಲ್ ಗೇಮ್ ರೀತಿ ಎರಡು ಕಡೆ ಬಾಂಬ್ ಇಟ್ಟಿದ್ದು ಪ್ಲ್ಯಾನ್​ ಎ ಫೇಲ್​​ ಆದರೆ ಪ್ಲ್ಯಾನ್ ಬಿ’ ಎಂದು ಬೆದರಿಕೆ ಸಂದೇಶ ರವಾನಿಸಲಾಗಿದೆ.

ಇದನ್ನೂ ಓದಿ: ಹಾಸನ: ಮೂರು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ

ಬೆದರಿಕೆ ಮೇಲ್ ಹಿನ್ನೆಲೆ‌ ಎಲ್ಲೆಡೆ ಪರಿಶೀಲನೆ ಮಾಡಿದ ಅಧಿಕಾರಿಗಳು ಬಳಿಕ ಇದೊಂದು ಹುಸಿ ಬಾಂಬ್ ಮೇಲ್ ಎಂದು ತಿಳಿಸಿದ್ದಾರೆ. ಸದ್ಯ ಕೆಂಪೇಗೌಡ ಏರ್​​​ಪೋರ್ಟ್ ಪೊಲೀಸರು ಮತ್ತು ಅಧಿಕಾರಿಗಳಿಗೆ ಈ ಹುಸಿ‌ ಬಾಂಬ್ ಮೇಲ್ ಮತ್ತು ಕರೆಗಳು ತಲೆ ನೋವಾಗಿದ್ದು, ಹುಸಿ‌ ಬಾಂಬ್ ಬೆದರಿಕೆ ಬಂದ ಮೇಲ್ ಐಡಿಗಳ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:51 am, Thu, 19 June 25

ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ