ದುಬೈನಲ್ಲಿ ವಾಸವಾಗಿದ್ದ ಕುಂದಾಪುರ ಮೂಲದ ಯುವಕ ಸಾವು
ದುಬೈನಲ್ಲಿ ವಾಸವಾಗಿದ್ದ ಕುಂದಾಪುರದ ಮೂಲದ ಯುವಕ ಬಿಸಿಲಿನ ಝಳ ತಾಳಲಾರದೆ ಮೃತಪಟ್ಟಿದ್ದಾರೆ. ಕುಂದಾಪುರದ ವಿಠಲವಾಡಿ ನಿವಾಸಿ ಯುವಕ ಶಾನ್ ಡಿಸೋಜಾ ಮೃತ ದುರ್ದೈವಿ. ಯುವಕ ಶಾನ್ ಡಿಸೋಜಾ ಅವರಿಗೆ ತಂದೆ, ತಾಯಿ ಮತ್ತು ಇಬ್ಬರು ಸಹೋದರರು ಇದ್ದಾರೆ.
ಉಡುಪಿ, ಸೆಪ್ಟೆಂಬರ್ 16: ದುಬೈನಲ್ಲಿ (Dubai) ವಾಸವಾಗಿದ್ದ ಕುಂದಾಪುರದ (Kundapur) ಮೂಲದ ಯುವಕ ಬಿಸಿಲಿನ ಝಳ ತಾಳಲಾರದೆ ಮೃತಪಟ್ಟಿದ್ದಾರೆ. ಕುಂದಾಪುರದ ವಿಠಲವಾಡಿ ನಿವಾಸಿ ಯುವಕ ಶಾನ್ ಡಿಸೋಜಾ (19 ವರ್ಷ) ಮೃತ ದುರ್ದೈವಿ. ದುಬೈಯಿಂದ ಸುಮಾರು 115 ಕಿ.ಮೀ. ದೂರದಲ್ಲಿರುವ ರಾಸ್ ಅಲ್ ಖೈಮಾದ ಸೈಂಟ್ ಮೆರೀಸ್ ಚರ್ಚ್ ಬಳಿ ಮನೆಯಲ್ಲಿ ವಾಸವಾಗಿದ್ದರು. ಖಾಸಗಿ ಕಂಪೆನಿಯಲ್ಲಿ ಮ್ಯಾನೆಜರ್ ಆಗಿದ್ದ ಶಾನ್, ಅಲ್ಲಿಯೇ ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದರು. ಬಿಸಿಲಿನ ತಾಪ ಮೂರ್ಚೆ ಹೋಗಿ ಆರ್‌ಎಕೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ರವಿವಾರ ಮೃತರಾಗಿದ್ದಾರೆ. ಯುವಕ ಶಾನ್ ಡಿಸೋಜಾ ಅವರಿಗೆ ತಂದೆ, ತಾಯಿ ಮತ್ತು ಇಬ್ಬರು ಸಹೋದರರು ಇದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಹೆಚ್ಚಿನ ಮಾಹಿತಿ ಅಪ್ಡೇಟ್ ಮಾಡಲಾಗುತ್ತಿದೆ..