ಬೆಂಗಳೂರು, ಏಪ್ರಿಲ್ 06: ಯುಗಾದಿ (Ugadi) ಹಬ್ಬಕ್ಕೆ ಸಾಲು ಸಾಲು ರಜೆಯಿದೆ ಅಂತ ಮನೆ ಕಡೆ ಹೊಗಲು ಸಜ್ಜಾದವರಿಗೆ ಖಾಸಗಿ ಬಸ್ ದರ (Private Bus Price) ಏರಿಕೆ ಶಾಕ್ ಎದುರಾಗಿದೆ. ಯುಗಾದಿ ರಜೆ ಬೆಲ್ಲವಾದರೆ ಖಾಸಗಿ ಬಸ್ಗಳ ಪ್ರಯಾಣದ ದರ ಏರಿಕೆ ಪ್ರಯಾಣಿಕರಿಗೆ ಬೇವು ಆಗಿದೆ.
ಏಪ್ರಿಲ್ 7 ರಂದು ಭಾನುವಾರ, 9 ರಂದು ಮಂಗಳವಾರ ಯುಗಾದಿ ಬರುತ್ತೆ. ಹೀಗಾಗಿ ಸೋಮವಾರ ರಜೆ ಹಾಕಿ ನಾಳೆಯೇ ಊರಿಗೆ ತೆರಳಲು ಜನರ ಪ್ಲಾನ್ ಮಾಡಿದ್ದಾರೆ. ಇನ್ನೂ ಕೆಲವರು ಇಂದು (ಏ.06) ಆಫೀಸ್ಗೆ ರಜೆ ಹಾಕಿ ಬೆಂಗಳೂರಿನಿಂದ ಹೊರಟಿದ್ದಾರೆ. ಅಲ್ಲದೆ ಯುಗಾದಿ ರಜೆ ಒಂದು ದಿನ ಬಿಟ್ಟು ಗುರುವಾರ ರಂಜಾನ್ ರಜೆ ಬರುತ್ತೆ. ಅಲ್ಲದೆ 13 ರಂದು ಎರಡನೇ ಶನಿವಾರ ರಜೆ ಹಾಗೂ 14 ರಂದು ಭಾನುವಾರ ರಜೆ ಇದೆ. ಏಪ್ರಿಲ್ 7 ರಿಂದ ಏಫ್ರಿಲ್ 14ರ ವರೆಗೆ ಬರೊಬ್ಬರಿ 5 ರಜೆಗಳು ಇವೆ. ಹೀಗಾಗಿ ಕೆಲವರು ನಾಳೆಯಿಂದ ವಾರಪೂರ್ತಿ ಆಫೀಸ್ಗೆ ರಜೆ ಹಾಕಲು ಪ್ಲಾನ್ ಮಾಡಿಕೊಂಡು ಬೆಂಗಳೂರು ಬಿಟ್ಟು ಊರಿಗೆ ಹೊರಡುತ್ತಿದ್ದಾರೆ.
ಅಲ್ಲದೆ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಶುರುವಾದ ಕಾರಣ ಮಕ್ಕಳ ಜೊತೆ ಪ್ರವಾಸಕ್ಕೆ ಅಥವಾ ತಮ್ಮ ತಮ್ಮ ಊರಿಗೆ ತೆರಳಲು ಪೋಷಕರು ಯೋಚಿಸಿ, ಬಸ್ ಟಿಕೆಟ್ ಬುಕ್ ಮಾಡಲು ಮುಂದಾದರೆ ದರ ಏರಿಕೆಯ ಶಾಕ್ ನೀಡಿದೆ. ಖಾಸಗಿ ಬಸ್ ಮಾಲೀಕರು 2-3 ಪಟ್ಟು ದರ ಏರಿಕೆ ಮಾಡಿದ್ದಾರೆ.
ಬೆಂಗಳೂರು-ಶಿವಮೊಗ್ಗ
ಸಾಮಾನ್ಯ ದಿನದ ದರ: 450 – 600 ರೂ.
ಇವತ್ತಿನ ಟಿಕೆಟ್ ದರ: 950 – 1250 ರೂ.
ಬೆಂಗಳೂರು- ಹುಬ್ಬಳ್ಳಿ
ಸಾಮಾನ್ಯ ದಿನದ ದರ: 600 – 1000 ರೂ.
ಇಂದಿನ ಟಿಕೆಟ್: 1200 – 1600 ರೂ.
ಬೆಂಗಳೂರು-ಮಂಗಳೂರು
ಸಾಮಾನ್ಯ ದಿನದ ದರ: 500 – 1000 ರೂ.
ಇಂದಿನ ದರ: 1000 – 1400 ರೂ.
ಬೆಂಗಳೂರು-ಕಲಬುರುಗಿ
ಸಾಮಾನ್ಯ ದಿನದ ದರ: 900 – 1300 ರೂ.
ಇಂದಿನ ದರ: 1400 – 1900 ರೂ.
ಬೆಂಗಳೂರು-ಮಡಿಕೇರಿ
ಸಾಮಾನ್ಯ ದಿನದ ದರ: 500 – 600 ರೂ.
ಇಂದಿನ ದರ: 950 – 1200 ರೂ.
ಬೆಂಗಳೂರು – ಉಡುಪಿ
ಸಾಮಾನ್ಯ ದಿನದ ದರ: 600 – 950 ರೂ.
ಇಂದಿನ ದರ: 1700 – 2200 ರೂ.
ಬೆಂಗಳೂರು-ಧಾರವಾಡ
ಸಾಮಾನ್ಯ ದಿನದ ದರ: 650 – 800 ರೂ.
ಇಂದಿನ ದರ: 1350 – 1750 ರೂ.
ಬೆಂಗಳೂರು-ಬೆಳಗಾವಿ
ಸಾಮಾನ್ಯ ದಿನದ ದರ: 500-800 ರೂ.
ಇಂದಿನ ದರ: 1300 – 1800 ರೂ.
ಬೆಂಗಳೂರು – ದಾವಣಗೆರೆ
ಸಾಮಾನ್ಯ ದಿನದ ದರ: 450-600 ರೂ.
ಇಂದಿನ ದರ: 900 – 1300 ರೂ.
ಬೆಂಗಳೂರು – ಚಿಕ್ಕಮಗಳೂರು
ಸಾಮಾನ್ಯ ದಿನದ ದರ: 550-600 ರೂ.
ಇಂದಿನ ದರ: 1100 – 1300 ರೂ.
ಬೆಂಗಳೂರು – ಬೀದರ್
ಸಾಮಾನ್ಯ ದಿನದ ದರ: 850 – 1200 ರೂ.
ಇಂದಿನ ದರ: 1600 – 1800 ರೂ.
ಬೆಂಗಳೂರು – ರಾಯಚೂರು
ಸಾಮಾನ್ಯ ದಿನದ ದರ: 600-900 ರೂ.
ಇಂದಿನ ದರ: 1250 – 1600 ರೂ.
ಮನಸಿಗೆ ಬಂದಂತೆ ದರ ಏರಿಕೆ ಮಾಡಿದ್ರು ಸಾರಿಗೆ ಇಲಾಖೆಯಿಂದ ಪದೇ ಪದೇ ನಿರ್ಲಕ್ಷ ಮಾಡುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಟಿಕೆಟ್ ದರ ದುಪ್ಪಟ್ಟಾದರೂ ಖಾಸಗಿ ಬಸ್ಗಳು ಮಾತ್ರ ಬಹುತೇಕ ಭರ್ತಿಯಾಗಿವೆ.
ಇದನ್ನೂ ಓದಿ: Ugadi in 2024: ಯುಗಾದಿ ಹಬ್ಬಕ್ಕೆ ಕೆಎಸ್‌ಆರ್‌ಟಿಸಿಯಿಂದ ಹೆಚ್ಚುವರಿ ಬಸ್, ಪ್ರಯಾಣಿಕರಿಗೆ ಗುಡ್ ನ್ಯೂಸ್
ಇನ್ನು ಈ ದರ ಏರಿಕೆಯ ಬಗ್ಗೆ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಮಾತನಾಡಿ, ಕೆಎಸ್ಆರ್ಟಿಸಿ ಬಸ್ಗಳಲ್ಲಿ ಪ್ರತಿ ಶನಿವಾರ ಭಾನುವಾರ ಸೇರಿದಂತೆ ಎಲ್ಲ ಹಬ್ಬಗಳಲ್ಲೂ ದರ ಏರಿಕೆ ಮಾಡುತ್ತಾರೆ. ಸರ್ಕಾರಿ ಬಸ್ಗಳಿಗೆ ಟ್ಯಾಕ್ಸ್ ಇಲ್ಲ, ಜಿಎಸ್ಟಿ ಇಲ್ಲ, ಟಯರ್ ಕಡಿಮೆ ಬೆಲೆಗೆ ಸಿಗುತ್ತದೆ. ಇದು ಪ್ರಯಾಣಿಕರಿಗೆ ಗೊತ್ತಾಗುವುದಿಲ್ಲ. ಖಾಸಗಿ ಬಸ್ಗಳಲ್ಲಿ 100-200 ದರ ಏರಿಕೆ ಮಾಡಿದರೆ ನಮ್ಮನ್ನು ಪ್ರಶ್ನೆ ಮಾಡುತ್ತಾರೆ. ಖಾಸಗಿ ಬಸ್ಗಳು ನಿಮ್ಮ ಏರಿಯಾಗಳಿಂದ ಪಿಕ್ ಮಾಡುತ್ತವೆ. ಪ್ರತಿದಿನ ಖಾಲಿಯಾಗಿ ಸಂಚಾರ ಮಾಡುತ್ತವೆ ಇದರ ಬಗ್ಗೆ ಪ್ರಯಾಣಿಕರು ಮಾತಾಡುವುದಿಲ್ಲ ಎಂದು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮ ಹೇಳಿದರು.
ಇನ್ನು ಕೆಎಸ್‌ಆರ್‌ಟಿಸಿಯಿಂದ ಯುಗಾದಿ ಹಬ್ಬಕ್ಕೆ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ನಾಲ್ಕು ನಿಗಮದಿಂದ ಬರೊಬ್ಬರಿ 2000ಕ್ಕೂ ಅಧಿಕ ವಿಶೇಷ ಬಸ್‌ಗಳನ್ನು ರಸ್ತೆಗಿಳಿಸಲು ಮುಂದಾಗಿದೆ. ಕೆಎಸ್‌ಆರ್‌ಟಿಸಿಯಿಂದ 1,750 ಬಸ್, ಎನ್ಡಬ್ಲೂಕೆಎಸ್ಆರ್ಟಿಸಿಯಿಂದ 145 ಬಸ್ ಮತ್ತು ಕೆಕೆಆರ್‌ಟಿಸಿಯ 200 ಬಸ್ ಹಾಗೂ ಬಿಎಂಟಿಸಿಯ 180 ಸೇರಿ 2275 ಹೆಚ್ಚುವರಿ ಬಸ್ ನಿಯೋಜನೆ ಮಾಡಲಾಗಿದೆ.
ಖಾಸಗಿ ಬಸ್ಗಳಲ್ಲಿ ದರ ಏರಿಕೆ ಮಾಡುತ್ತಾರೆ. ಕೆಎಸ್ಆರ್ಟಿಸಿಯ ಸಾಮಾನ್ಯ ಬಸ್ಗಳಲ್ಲಿ ದರ ಕಡಿಮೆ ಇದೆ. ಎಸಿ ಬಸ್ಗಳ ದರ ಹೆಚ್ಚಾಗಿದೆ ಎಂದು ಪ್ರಯಾಣಿಕ ಪೃಥ್ವಿ ಪ್ರಕಾಶ್ ಹೇಳಿದರು.
ಒಟ್ಟಾರೆ ಬ್ಯಾಕ್ ಟು ಬ್ಯಾಕ್ ರಜೆ ಬಂದಾಗ ಪದೇ ಪದೇ ದರ ಏರಿಕೆಯಾದರೂ ಸಾರಿಗೆ ಇಲಾಖೆ ಮೌನಾವಾಗಿದೆ ಯಾಕೆ ಎಂಬ ಪ್ರಶ್ನೆ ಮೂಡಿದೆ. ಸಾರಿಗೆ ಇಲಾಖೆ ಇನ್ನೂ ಕೂಡ ಈ ಹಗಲು ದರೋಡೆಗೆ ಬ್ರೇಕ್ ಹಾಕದೆ ಇರುವುದು ಜನರ ಕಂಗೆಣ್ಣಿಗೆ ಗುರಿಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ