ರಾಮನಗರ: ಕನ್ನಡ ಜಾನಪದಕ್ಕೆ ವಿಶ್ವ ನಿಬ್ಬೆರಗು: ವರ್ಲ್ಡ್ ಹೆರಿಟೇಜ್ ಗರಿ

ರಾಮನಗರದ ಜಾನಪದ ಲೋಕವು ಯುನೆಸ್ಕೋದಿಂದ ವಿಶ್ವ ಪರಂಪರೆ ತಾಣವಾಗಿ ಗುರುತಿಸಲ್ಪಟ್ಟಿದೆ. ಕನ್ನಡ ಮತ್ತು ಕರ್ನಾಟಕದ ಜಾನಪದ ಕಲೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಈ ಸ್ಥಳವು ಜನಪದ ಗೀತೆಗಳು, ನೃತ್ಯಗಳು, ಕರಕುಶಲ ವಸ್ತುಗಳು ಮತ್ತು ಗ್ರಾಮೀಣ ಜೀವನದ ಅಮೂಲ್ಯ ಸಂಗ್ರಹವಾಗಿದೆ. ಇದು ಬೆಂಗಳೂರಿನಿಂದ ಸುಲಭವಾಗಿ ತಲುಪಬಹುದಾದ ಪ್ರಮುಖ ಪ್ರವಾಸಿ ತಾಣವಾಗಿದೆ.

ರಾಮನಗರ: ಕನ್ನಡ ಜಾನಪದಕ್ಕೆ ವಿಶ್ವ ನಿಬ್ಬೆರಗು: ವರ್ಲ್ಡ್ ಹೆರಿಟೇಜ್ ಗರಿ
ರಾಮನಗರ: ಕನ್ನಡ ಜಾನಪದಕ್ಕೆ ವಿಶ್ವ ನಿಬ್ಬೆರಗು: ವರ್ಲ್ಡ್ ಹೆರಿಟೇಜ್ ಸ್ಥಾನ
Edited By:

Updated on: Dec 11, 2024 | 10:11 PM

ರಾಮನಗರ, ಡಿಸೆಂಬರ್​ 11: ಅದು ಬೆಂಗಳೂರು ಮೈಸೂರು ರಸ್ತೆಯ ಬಹು ಆಕರ್ಷಣೀಯ ಪ್ರವಾಸಿ ತಾಣ. ಮಕ್ಕಳಿಂದ ಹಿಡಿದು ವೃದ್ಧವರೆಗೂ ಖುಷಿ ಕೊಡುವ ಬಹು ಅಪರೂಪದ ಜಾಗ. ಇದೀಗ ರಾಮನಗರ (Ramanagara) ತಾಲೂಕಿನ ಜಾನಪದ ಲೋಕಕ್ಕೆ ವಿಶ್ವಮಾನ್ಯತೆ ಸಿಕ್ಕಿದ್ದು, ವರ್ಲ್ಡ್ ಹೆರಿಟೇಜ್ ಸ್ಥಳವೆಂದು ಯುನೆಸ್ಕೋ ಮಾನ್ಯತೆ ಕೊಟ್ಟಿದೆ.

ವಿಶ್ವದ ಅತ್ಯಂತ ಪಾರಂಪರಿಕ ತಾಣಗಳಲ್ಲಿ ಜಾನಪದ ಲೋಕ

ರಾಮನಗರ ತಾಲೂಕಿನ ಜಾನಪದ ಲೋಕಕ್ಕೆ ಅದರದ್ದೇ ಆದ ಇತಿಹಾಸವಿದೆ.‌ ರಾಜ್ಯದಲ್ಲಿ ಅತ್ಯಂತ ಅಪರೂಪದ, ಕನ್ನಡ ಹಾಗೂ ಕರ್ನಾಟಕದ‌ ಕಲೆಗಳು ಹಾಗೂ ಮೂಲಸ್ವರೂಪವನ್ನು ಹರಡುವ ಈ ತಾಣಕ್ಕೆ ವಿಶ್ವ ಸಂಸ್ಥಯೇ ಗೌರವ ಕೊಟ್ಟಿದ್ದು, ವಿಶ್ವದ ಅತ್ಯಂತ ಪಾರಂಪರಿಕ ತಾಣಗಳಲ್ಲಿ ಜಾನಪದ ಲೋಕ ಕೂಡ ಒಂದಾಗಿದೆ.

ಇದನ್ನೂ ಓದಿ: ಗೌಡಗೆರೆ ಚಾಮುಂಡೇಶ್ವರಿ ದೇವಸ್ಥಾನ‌ದಲ್ಲಿ ಹೊಸ ಪ್ರಯೋಗ: ಮಕ್ಕಳಿಗಾಗಿ ಹೊಸ ಪ್ರಪಂಚ ಸೃಷ್ಟಿ

ಬೆಂಗಳೂರಿನಿಂದ 55 ಕಿಮಿ ದೂರದಲ್ಲಿರುವ ರಾಮನಗರ ಪಟ್ಟಣದಿಂದ ಕೇವಲ 5 ಕಿ.ಮಿ ದೂರದಲ್ಲಿರುವ ಜಾನಪದ ಲೋಕ ಮಕ್ಕಳಿಗಾಗಿ ಒಂದು ದಿನಕ್ಕೆ ಮಾಡಿದ ಒಂದು ಸುಂದರ ಪ್ರವಾಸಿ ತಾಣ. ಆದರೆ ಇದೀಗ ಇದು ಪ್ರವಾಸಿ ತಾಣವಾಗಿ‌ ಉಳಿಯದೇ ವಿಶ್ವಸಂಸ್ಥೆಯ ಗುರುತಿಸಿದ ಹಂತಕ್ಕೆ ತಲುಪಿ ಇಡೀ ದೇಶಕ್ಕೊಂದು ಗರಿ ತಂದಿದೆ.

ಹಾಗಾದರೆ ಏಕೆ ಈ ವರ್ಲ್ಡ್‌ ಹೆರಿಟೇಜ್ ಸ್ಪಾಟ್ ಅಂತ ಕರೆಯಲಾಯಿತು ಅಂತ ನೋಡುವುದಾರೆ, ಇಲ್ಲಿ ಸಾವಿರಕ್ಕೂ ಹೆಚ್ಚು ತಾಸುಗಳ ಕಾಲ ಕೇಳಬಹುದಾದ ಜನಪದ ಗೀತೆಗಳು, 800 ಗಂಟೆ ವೀಕ್ಷಿಸಬಹುದಾದ ಜಾನಪದ ಕಲೆಗಳ ವಿಡಿಯೋ ಮತ್ತು ಗ್ರಾಮೀಣ ಬದುಕಿನ ಹಳ್ಳಿಗಳಲ್ಲಿ ಬಳಸುವ ವಸ್ತುಗಳು, ನಾಗೇಗೌಡರ ಬದುಕು ಮತ್ತು ಸಾಧನೆ ಹೇಳುವ ಬದುಕು ಚಿತ್ರಕುಟೀರ ಇದೆ.

ಇದನ್ನೂ ಓದಿ: ಇತಿಹಾಸ ಪ್ರಸಿದ್ಧ ವಂಡಾರು ಕಂಬಳ: ಕೇವಲ ಮನೋರಂಜನೆಯಲ್ಲ, ಜನರ ನಂಬಿಕೆ

ಇತಿಹಾಸವನ್ನು ಹೇಳುವ ಶಿಲ್ಪಮಾಳ, ಹಬ್ಬಗಳ ಆಚರಣೆ, ಸಾಂಸ್ಕೃತಿಕ ಪರಿಕರಗಳ ದರ್ಶನದ ಲೋಕಮಹಲ್, ಜನಪದರ ಕರಕುಶಲತೆ ಹಾಗೂ ಬದುಕು ಹೇಳುವ ಆಯಗಾರರ ಮಾಳ, ಜಾನಪದ ಕಲೆಗಳಿಗೆ ಸಂಬಂಧಿಸಿದ ಲೋಕಸಿರಿ, ಕಲಾ ಪ್ರದರ್ಶನಕ್ಕೆ ಬಯಲು ರಂಗಮಂದಿರ, ವಿಡಿಯೋ ಸ್ಕೋಪ್ ಥಿಯೇಟರ್, ಜಾನಪದ ಗ್ರಂಥಾಲಯ, ದೊಡ್ಡಮನೆ, ಬುಡಕಟ್ಟು ಸಮುದಾಯಗಳ ಬದುಕು ಪರಿಚಯಿಸುವ ಗಿರಿಜನ ಲೋಕದ‌ ಆ ಗುಡಿಸಲುಗಳು ಇವೆಲ್ಲವೂ ಗತಕಾಲ‌‌ಜೀವನವನ್ನು ನಮ್ಮ‌ಕಣ್ಣ ಮುಂದೆ ತೆರೆದಿಡುತ್ತವೆ. ಇಂಥಾದ್ದೊಂದ ತಾಣ ನಮ್ಮಲ್ಲಿದೆ ಎಂಬುದು ಕೂಡ ಕನ್ನಡಿಗಳು ಬಹಳ ಖುಷಿ ಪಡಬೇಕಾದ ವಿಚಾರ.

ಜಾನಪದ ಲೋಕವೂ ನಮ್ಮ ಜಾನಪದ ಸಾಹಿತ್ಯದ ಕಲೆ, ದೊಡ್ಡಾಡ, ಬಯಲಾಟ, ಕೋಲಾಟ, ಲಾಮಾಣಿ ಪದ್ಯ,‌ದಾಸ ಸಾಹಿತ್ಯ ಹಾಗೂ ಜನರ ಬಾಯಿಯಿಂದ ಬಾಯಿಗೆ ಬಂದ ಹಲವು ಪ್ರಕಾರದ ಕಲೆಗಳನ್ನು ನಶಿಸಿ ಹೋಗದಂತೆ ತಡೆಯುವ ಒಂದು ಪ್ರಯತ್ನ. ಹಲವು ಜಾನಪದ ಗೀತೆಗಳನ್ನು ಸಿನಿಮಾದಲ್ಲಿ ತೆಗೆದುಕೊಂಡು ಅದಕ್ಕೆ ಅವರದ್ದೇ ಆದ ಟ್ಯೂನ್ ಕೊಟ್ಟು ಬಿಡುಗಡೆ ಮಾಡಿದ್ರೂ, ಜಾನಪದದಲ್ಲಿ ಮಾತ್ರ ನೂರು ವರ್ಷಗಳ‌ ಹಿಂದೆ ಯಾವ ರೀತಿಯ ವಾದ್ಯ ತಾಳ‌ರಾಗವಿತ್ತೋ ಈಗಲೂ ಅದೇ ಥರ ತೆಗೆದುಕೊಂಡು ಹೋಗಬೇಕು ಎನ್ನುವುದು ಈ ಸಂಸ್ಥೆಯ ಆಶಯವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Syed Nizamuddin

ಕಳೆದ ನಾಲ್ಕು ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, ಹಲವು ಬಗೆಯ ಡಿಪಾರ್ಟ್ಮೆಂಟ್ ಗಳಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಪ್ರಥಮದಲ್ಲಿ ಟಿವಿ9 ಮುಖ್ಯ ಕಚೇರಿಯಲ್ಲಿಯೇ ಕೆಲಸ ಮಾಡಿ,‌ಮೆಟ್ರೋ,ಪೊಲಿಟಿಕಲ್, ಕ್ರೈಂ ಹಾಗೂ ಲೈಫ್ ಸ್ಟೈಲ್ ನ ವಿಭಾಗದಲ್ಲೂ ಕೆಲಸ ಮಾಡುವ ಅವಕಾಶ ದೊರಕಿತ್ತು. ಕೊರೊನಾ ಸಂದರ್ಭದಲ್ಲಿ ಮಾಡಿದ ಕೇಸ್ ಸ್ಟಡಿಸ್, ನಂತರ ಬ್ಲ್ಯಾಕ್ ಫಂಗಸ್ ಗಾಗಿ ಒಂದು ತಿಂಗಳು ವಿಜಯಪುರ ಜಿಲ್ಲೆ, ಬಳಿಕ ಎರಡು ವರ್ಷ ಆನೆಕಲ್‌ ನಲ್ಲಿ ಕೆಲಸ ಮಾಡಿ ಕಳೆದ ಆರು ತಿಂಗಳಿನಿಂದ ರಾಮನಗರ ಜಿಲ್ಲೆಯಲ್ಲಿ ಕೆಲಸ ನಿಭಾಯಿಸುತ್ತಿದ್ದೇನೆ. ಖುಷಿ ಕೊಟ್ಟ ಸಾವಿರಾರು ಸುದ್ದಿಗಳ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಿಟ್ ಚಾಟ್ ಬಹಳ ತೃಪ್ತಿ ತಂದ ಹೈಲೇಟ್.. ಆನೇಕಲ್‌ ನ ಡ್ರಗ್ಸ್ ಸ್ಟೋರಿ, ಪರಪ್ಪನ ಅಗ್ರಹಾರದ ಆಫಿಸರ್ಸ್ ಸ್ಕ್ಯಾಂಡಲ್, ಎಲೆಕ್ಟ್ರಾನಿಕ್ ಸಿಟಿ ಯ ಟೋಯಿಂಗ್ ಬಂದ್, ಸರ್ಜಾಪುರದ ಪ್ರವಾಹ ಸಂದರ್ಭ,ಹೀಗೆ ಹತ್ತು ಹಲವು ಸುದ್ದಿಗಳು ಖಷಿ ಕೊಟ್ಟಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಹಲವು ರಾಜ್ಯಗಳಿಗೆ ತೆರಳಿ ಹಿಂದಿ‌ಹಾಗೂ ಕನ್ನಡಕ್ಕೆ ಕೆಲಸ ಮಾಡೋ ಅವಕಾಶ ನನ್ನ ಇನ್ಪುಟ್ ಟೀಂ ಕೊಟ್ಟಿದೆ. ಇನ್ನು ಹವ್ಯಾಸ ಗ್ಗೆ ಹೇಳೋದಾದ್ರೆ, ಸಂಗೀತ,ಕೇಳೊದು,ಹಾಡೋದು ಇಷ್ಟ. ಕ್ರೀಡೆ ವಿಚಾರಕ್ಕೆ ಬಂದ್ರೆ ಕ್ರಿಕೆಟ್ ಅಂಡ್ ಕಬ್ಬಡ್ಡಿ ಸ್ವಿಮಿಂಗ್. ಸ

Read More
Follow Us