AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೌಡಗೆರೆ ಚಾಮುಂಡೇಶ್ವರಿ ದೇವಸ್ಥಾನ‌ದಲ್ಲಿ ಹೊಸ ಪ್ರಯೋಗ: ಮಕ್ಕಳಿಗಾಗಿ ಹೊಸ ಪ್ರಪಂಚ ಸೃಷ್ಟಿ

ಗೌಡಗೆರೆಯ ಶ್ರೀ ಚಾಮುಂಡೇಶ್ವರಿ ದೇವಾಲಯವು ಧಾರ್ಮಿಕ ಕೇಂದ್ರವಾಗಿರುವುದರ ಜೊತೆಗೆ, ಈಗ ಮಕ್ಕಳಿಗಾಗಿ ಶೈಕ್ಷಣಿಕ ಪ್ರದರ್ಶನವನ್ನು ಹೊಂದಿದೆ. ಮಂಗಳ ಗ್ರಹ, ಚಂದ್ರಲೋಕ, ರಾಕೆಟ್ ಉಡಾವಣೆ ಮುಂತಾದ ವಿಷಯಗಳನ್ನು ವೈಜ್ಞಾನಿಕವಾಗಿ ಪ್ರದರ್ಶಿಸಲಾಗಿದೆ. ಲಕ್ಷ ದೀಪೋತ್ಸವದ ಸಂದರ್ಭದಲ್ಲಿ ಈ ಪ್ರದರ್ಶನ ಮಕ್ಕಳಿಗೆ ಆಕರ್ಷಕವಾಗಲಿದೆ. ಹಿಂದೂ ಧರ್ಮದ ಕಲಾಕೃತಿಗಳನ್ನು ಒಳಗೊಂಡ ಈ ಪ್ರದರ್ಶನವು ಮಕ್ಕಳಿಗೆ ಉಚಿತವಾಗಿದೆ.

ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Edited By: |

Updated on: Nov 26, 2024 | 6:42 PM

Share
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಗೌಡಗೆರೆಯಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಾಲಯ ರಾಮನಗರ ಜಿಲ್ಲೆಯ ಸುಪ್ರಸಿದ್ಧ ಪುಣ್ಯಕ್ಷೇತ್ರ. ರಾಜ್ಯದ ಮೂಲೆ ಮೂಲೆಗಳಿಂದ ಜನ ಆ ದೇವಿ ದರ್ಶನಕ್ಕೆ ಆಗಮಿಸುತ್ತಾರೆ. ಧಾರ್ಮಿಕ ಕ್ಷೇತ್ರವಾಗಿದ್ದರೂ ಮಕ್ಕಳ ಜ್ಞಾನಕ್ಕೆ ನೆರವಾಗಲು ನಿಂತಿರುವ ಆ ಜಾಗದಲ್ಲಿ ಈಗ ಹೊಸ ಪ್ರಪಂಚವನ್ನೇ ಸೃಷ್ಟಿ ಮಾಡಲಾಗಿದೆ. ಆ ಕುರಿತಾದ ಫೋಟೋಗಳು ಇಲ್ಲಿವೆ. 

1 / 6
ಗೌಡಗೆರೆಯ ಚಾಮುಂಡೇಶ್ವರಿ ದೇವಾಲಯಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರ ದಂಡು ಆಗಮಿಸುತ್ತಿದೆ. ಆ ದೇವಿಯ ಪವಾಡವೋ ಮಹಿಮೆಯೋ, ಭಕ್ತರು ಅಂದುಕೊಂಡಿದ್ದೆಲ್ಲಾ ಘಟಿಸುತ್ತದೆ ಎಂಬ ಪ್ರತೀತಿ ಇದೆ. ಹೀಗಾಗಿ ದಿನಗಳೆದಂತೆ ಭಕ್ತರ ದಂಡು ದುಪ್ಪಟ್ಟಾಗುತ್ತಿದೆ. 

2 / 6
ಹಾಗಾಗಿ ದೇವಸ್ಥಾನದಲ್ಲಿ ವಿಶೇಷವಾಗಿ ಏನಾದರು ಮಾಡಬೇಕು ಎಂಬ ಉದ್ದೇಶ ಚಾಮುಂಡೇಶ್ವರಿ ದೇವಸ್ಥಾನದ ಮಂಡಳಿಗೂ ಇತ್ತು. ಹೀಗಾಗಿ ತಂದೆ, ತಾಯಿ ಜೊತೆ ಬರುವ ಮಕ್ಕಳಿಗೆ ಏನಾದ್ರೂ ಒಂದು ವಿಶೇಷ ಸಂಗತಿ ಮಾಡಬೇಕು ಎಂದುಕೊಂಡ ಮಲ್ಲೇಶ್ ಗುರೂಜಿ, ಚಾಮುಂಡೇಶ್ವರಿ ಪಾದದ ಕೆಳಗೆ ಒಂದು ಇಡೀ ಜಗತ್ತನ್ನೇ ಸೃಷ್ಟಿ ಮಾಡಿದ್ದಾರೆ.‌

3 / 6
ಮಕ್ಕಳಿಗೆ ಇದು ಶೈಕ್ಷಣಿಕ ಸ್ಥಳವಾಗಬೇಕು ಎಂಬ ದೃಷ್ಟಿಕೋನದಿಂದ ಧಾರ್ಮಿಕ ಕ್ಷೇತ್ರವಾಗಿದ್ರೂ ವೈಜ್ಞಾನಿಕ ರೀತಿ, ನೀತಿಗಳ ಮಾದರಿಯನ್ನು ದೇವಸ್ಥಾನದಲ್ಲಿ ಸೃಷ್ಡಿ ಮಾಡಲಾಗಿದೆ. ಮಂಗಳ ಗ್ರಹ, ಚಂದ್ರಲೋಕ, ರಾಕೇಟ್ ಉಡಾವಣೆಯಿಂದ ಹಿಡಿದು ಭೌಗೋಳಿಕವಾಗಿ ಮಕ್ಕಳು ಕಲಿಯಬಹುದಾದ ಹಲವು ಆಚಾರ ವಿಚಾರವಳನ್ನು ದೇವಸ್ಥಾನದಲ್ಲಿ ಅಳವಡಿಕೆ ಮಾಡಲಾಗಿದೆ.

4 / 6
ಡಿಸಂಬರ್ 1ರಂದು ಚಾಮುಂಡೇಶ್ವರಿ ದೇವಾಸ್ಥಾನದಲ್ಲಿ ಲಕ್ಷ ದೀಪೋತ್ಸವ ನಡೆಯಲಿದ್ದು, ಕೇರಳದ ತಂಡವೊಂದು ವಿಶೇಷವಾಗಿ ಈ ಕಾರ್ಯಕ್ರಮ ನಡೆಸಿಕೊಡಲು ಬರುತ್ತಿದೆ. ದೇಶದ ಹಲವು ರಾಜ್ಯಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ. ಹೀಗಾಗಿ ಸರ್ವ ರೀತಿಯ ತಯಾರಿಗಳನ್ನು ದೇವಸ್ಥಾನದಲ್ಲಿ ಮಾಡಿಕೊಂಡಿದ್ದು, ಪೋಷಕರ ಜೊತೆ ಬರುವ ಮಕ್ಕಳು ಖುಷಿಯಾಗಲು ಒಂದು ರೀತಿಯ ಎಕ್ಸಿಬಿಷನ್ ಇಲ್ಲಿ ತೆರೆದಂತಾಗಿದೆ.

5 / 6
ಅಲ್ಲದೇ ಇಡೀ ದೇವಾಸ್ಥಾನದಲ್ಲಿ ಹಿಂದೂ ದೇವರ ವಿಗ್ರಹವೂ ಸೇರಿದಂತೆ ಅನೇಕ ಕಲಾಕೃತಿಗಳನ್ನು ಪಠಾಣ್ ಎನ್ನುವವರು ಇದರ ಕೆಲಸ ಮಾಡಿದ್ದು, ಹಿಂದೂ ಧರ್ಮದ ಅನುಸಾರ ಕೆಲ ನಿಯಮಗಳನ್ನು ಪಾಲಿಸಿ ವಿಗ್ರಹಗಳ ನಿರ್ಮಾಣ ಮಾಡಿದ್ದಾರೆ. ವರ್ಷ ವರ್ಷ ನಡೆಯುವ ಲಕ್ಷ ದೀಪೋತ್ಸವದ ಪ್ರತಿ ವರ್ಷವೂ ವಿಶೇಷವಾದುದ್ದನ್ನು ಮಾಡುವ ಚಾಮುಂಡೇಶ್ವರಿ ದೇವಾಲಯ ಈ ಬಾರಿ ಶಾಶ್ವತವಾಗಿರುವಂತಹ ಅನೇಕ ಕಲಾಕೃತಿಗಳನ್ನು ನಿರ್ಮಿಸಿ ಮಕ್ಕಳಿಗೆ ಉಚಿತವಾಗಿ ನೋಡಲು ಅವಕಾಶ ಮಾಡಿಕೊಟ್ಟಿದ್ದಾರೆ.

6 / 6
Syed Nizamuddin
Syed Nizamuddin

ಕಳೆದ ನಾಲ್ಕು ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, ಹಲವು ಬಗೆಯ ಡಿಪಾರ್ಟ್ಮೆಂಟ್ ಗಳಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಪ್ರಥಮದಲ್ಲಿ ಟಿವಿ9 ಮುಖ್ಯ ಕಚೇರಿಯಲ್ಲಿಯೇ ಕೆಲಸ ಮಾಡಿ,‌ಮೆಟ್ರೋ,ಪೊಲಿಟಿಕಲ್, ಕ್ರೈಂ ಹಾಗೂ ಲೈಫ್ ಸ್ಟೈಲ್ ನ ವಿಭಾಗದಲ್ಲೂ ಕೆಲಸ ಮಾಡುವ ಅವಕಾಶ ದೊರಕಿತ್ತು. ಕೊರೊನಾ ಸಂದರ್ಭದಲ್ಲಿ ಮಾಡಿದ ಕೇಸ್ ಸ್ಟಡಿಸ್, ನಂತರ ಬ್ಲ್ಯಾಕ್ ಫಂಗಸ್ ಗಾಗಿ ಒಂದು ತಿಂಗಳು ವಿಜಯಪುರ ಜಿಲ್ಲೆ, ಬಳಿಕ ಎರಡು ವರ್ಷ ಆನೆಕಲ್‌ ನಲ್ಲಿ ಕೆಲಸ ಮಾಡಿ ಕಳೆದ ಆರು ತಿಂಗಳಿನಿಂದ ರಾಮನಗರ ಜಿಲ್ಲೆಯಲ್ಲಿ ಕೆಲಸ ನಿಭಾಯಿಸುತ್ತಿದ್ದೇನೆ. ಖುಷಿ ಕೊಟ್ಟ ಸಾವಿರಾರು ಸುದ್ದಿಗಳ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಿಟ್ ಚಾಟ್ ಬಹಳ ತೃಪ್ತಿ ತಂದ ಹೈಲೇಟ್.. ಆನೇಕಲ್‌ ನ ಡ್ರಗ್ಸ್ ಸ್ಟೋರಿ, ಪರಪ್ಪನ ಅಗ್ರಹಾರದ ಆಫಿಸರ್ಸ್ ಸ್ಕ್ಯಾಂಡಲ್, ಎಲೆಕ್ಟ್ರಾನಿಕ್ ಸಿಟಿ ಯ ಟೋಯಿಂಗ್ ಬಂದ್, ಸರ್ಜಾಪುರದ ಪ್ರವಾಹ ಸಂದರ್ಭ,ಹೀಗೆ ಹತ್ತು ಹಲವು ಸುದ್ದಿಗಳು ಖಷಿ ಕೊಟ್ಟಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಹಲವು ರಾಜ್ಯಗಳಿಗೆ ತೆರಳಿ ಹಿಂದಿ‌ಹಾಗೂ ಕನ್ನಡಕ್ಕೆ ಕೆಲಸ ಮಾಡೋ ಅವಕಾಶ ನನ್ನ ಇನ್ಪುಟ್ ಟೀಂ ಕೊಟ್ಟಿದೆ. ಇನ್ನು ಹವ್ಯಾಸ ಗ್ಗೆ ಹೇಳೋದಾದ್ರೆ, ಸಂಗೀತ,ಕೇಳೊದು,ಹಾಡೋದು ಇಷ್ಟ. ಕ್ರೀಡೆ ವಿಚಾರಕ್ಕೆ ಬಂದ್ರೆ ಕ್ರಿಕೆಟ್ ಅಂಡ್ ಕಬ್ಬಡ್ಡಿ ಸ್ವಿಮಿಂಗ್. ಸ

Read More
Follow Us