ಕಬ್ಬು ಬೆಳೆಗಾರರ ಹಿತ ಕಾಯಲು ಮುಂದಾದ ಸಿದ್ದರಾಮಯ್ಯ ಸರ್ಕಾರ, ಏನದು?

| Updated By: ಗಂಗಾಧರ​ ಬ. ಸಾಬೋಜಿ

Updated on: Dec 11, 2024 | 11:06 PM

ಕರ್ನಾಟಕದಲ್ಲಿ ಕಬ್ಬು ತೂಕದಲ್ಲಿ ವ್ಯಾಪಕ ಮೋಸ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಬ್ಬು ಬೆಳೆಗಾರರು ಪ್ರತಿಭಟಿಸಿದ್ದರು. ಈ ಸಮಸ್ಯೆಗೆ ಪರಿಹಾರವಾಗಿ, ಸರ್ಕಾರವು ಎಲ್ಲಾ ಸಕ್ಕರೆ ಕಾರ್ಖಾನೆಗಳ ಬಳಿ ವೇ ಬ್ರಿಡ್ಜ್‌ಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಎಎಪಿಎಂಸಿ ಮೂಲಕ ಈ ಯೋಜನೆ ಜಾರಿಗೆ ತರಲಾಗುತ್ತಿದೆ. ಇದರಿಂದ ಕಬ್ಬು ಬೆಳೆಗಾರರಿಗೆ ನ್ಯಾಯ ದೊರೆಯಲಿದೆ ಮತ್ತು ಮೋಸವನ್ನು ತಡೆಯಲು ಸಹಾಯವಾಗಲಿದೆ.

ಕಬ್ಬು ಬೆಳೆಗಾರರ ಹಿತ ಕಾಯಲು ಮುಂದಾದ ಸಿದ್ದರಾಮಯ್ಯ ಸರ್ಕಾರ, ಏನದು?
ಕಬ್ಬು ಬೆಳೆಗಾರರ ಹಿತ ಕಾಯಲು ಮುಂದಾದ ಸಿದ್ದರಾಮಯ್ಯ ಸರ್ಕಾರ, ಏನದು?
Follow us on

ಬೆಂಗಳೂರು, ಡಿಸೆಂಬರ್​ 11: ತೂಕದಲ್ಲಾಗುತ್ತಿದ್ದ ಮೋಸ ಹಿನ್ನಲೆ ಕಬ್ಬು (sugarcane) ಬೆಳೆಗಾರರು, ಕಾರ್ಖಾನೆಗಳ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ಹಿತ ಕಾಯಲು ಸರ್ಕಾರ ಮುಂದಾಗಿದೆ. ಆ ಮೂಲಕ ಕಬ್ಬು ತೂಕದಲ್ಲಾಗುವ ಮೋಸ ತಡೆಗಟ್ಟಲು ಸರ್ಕಾರದಿಂದ ಕ್ರಮಕೈಗೊಳ್ಳಲಾಗುತ್ತಿದೆ.

ಕರ್ನಾಟಕದ ಸಕ್ಕರೆ ಕಾರ್ಖಾನೆಗಳ ಬಳಿ ವೇ ಬ್ರಿಡ್ಜ್ ಸ್ಥಾಪಿಸಲು ನಿರ್ಧಾರ ಮಾಡಲಾಗಿದೆ. ತೂಕದ ಯಂತ್ರವನ್ನ ಎಎಪಿಎಂಸಿ ಮೂಲಕ ವೇ ಬ್ರಿಡ್ಜ್ ಸ್ಥಾಪಿಸಲು ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ.

ಎಫ್​ಆರ್​ಪಿ ಅಡಿಯಲ್ಲಿ ದರ ನಿಗದಿ ಮಾಡಿದ್ದು ಸರಿಯಲ್ಲ

ಕರ್ನಾಟಕ ರಾಜ್ಯದಲ್ಲಿ ಕಬ್ಬು ಬೆಳೆಯೋದರಲ್ಲಿ ವಿಜಯಪುರ ಜಿಲ್ಲೆಯಲ್ಲಿ 4 ಅಥವಾ 5 ನೇ ಸ್ಥಾನದಲ್ಲಿದೆ. ಹೆಚ್ಚಿನ ಪ್ರಮಾಣದಲ್ಲಿ ವಿಜಯಪುರ ಜಿಲ್ಲೆಯಲ್ಲಿ ಕಬ್ಬು ಬೆಳೆಯಲಾಗುತ್ತದೆ. ಆದರೆ ಕಬ್ಬು ಬೆಳೆಗಾರರಿಗೆ ಮಾತ್ರ ಕಬ್ಬು, ನಷ್ಟದ ಬೆಳೆ ಆಗುತ್ತಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಎಫ್​ಆರ್​ಪಿ ಅಡಿಯಲ್ಲಿ ಕಬ್ಬಿನ ದರ ನಿಗದಿ ಮಾಡಿತ್ತು. ಆದರೆ ಅದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಕೇಂದ್ರ ಸರ್ಕಾರ ಎಫ್​ಆರ್​ಪಿ ಅಡಿಯಲ್ಲಿ ದರ ನಿಗದಿ ಮಾಡಿದ್ದು ಸರಿಯಿಲ್ಲ. ಅದನ್ನು ನಾವು ಒಪ್ಪಲ್ಲ. ಸರ್ಕಾರ ನಿಗದಿ ಮಾಡಿರುವ ದರದಿಂದ ಕಬ್ಬು ಲಾಭದಾಯಕವಾಗಲ್ಲ. ನಮಗೆ ನಷ್ಟವಾಗುತ್ತದೆ ಎಂದು ರೈತರು ಕಿಡಿಕಾರಿದ್ದರು.

ಇದನ್ನೂ ಓದಿ: ಕೃಷಿ ಸಚಿವರ ತವರಲ್ಲೇ ಅನ್ನದಾತರಿಗೆ ತಪ್ಪದ ಸಂಕಷ್ಟ: ಸಂಪೂರ್ಣ ಕಬ್ಬು ಅರೆಯುವ ಮುನ್ನವೇ ಮೈಶುಗರ್ ಕಾರ್ಖಾನೆ ಬಂದ್

ನಿಗದಿ ಮಾಡಿರುವ ದರದಲ್ಲೇ ಕಬ್ಬಿನ ಕಟಾವು ಹಾಗೂ ಸಾಗಾಣೆ ವೆಚ್ಚವನ್ನೂ ಸೇರಿಸಿದ್ದಾರೆ. ಇದು ಸಕ್ಕರೆ ಕಾರ್ಖಾನೆಗಳಿಗೆ ಲಾಭ ಮಾಡುವ ಹುನ್ನಾರವೆಂದು ರೈತ ಸಂಘಟನೆಗಳು ವ್ಯಕ್ತಪಡಿಸಿವೆ. ಕಬ್ಬಿನಿಂದ ಕೇವಲ ಸಕ್ಕರೆ ಮಾತ್ರ ಉತ್ಪಾದನೆ ಮಾಡುತ್ತಿಲ್ಲ. ಸ್ಪಿರಿಟ್ ಹಿಡಿದು ಇತರೆ 9 ಉಪ ಉತ್ಪನ್ನಗಳನ್ನು ಉತ್ಪಾದನೆ ಮಾಡಲಾಗುತ್ತಿದೆ. ಒಂದು ಟನ್ ಕಬ್ಬಿನಿಂದ ಹಾಗೂ ಕಬ್ಬಿನ ಉತ್ಪಾದನೆಗಳಿಂದ ಸರ್ಕಾರಕ್ಕೆ 4 ರಿಂದ 5 ಸಾವಿರ ಹೋಗುತ್ತಿದೆ. ಆದ ಕಾರಣ ರೈತರ ಒಂದು ಟನ್ ಕಬ್ಬಿಗೆ ಕಾರ್ಖಾನೆಯವರು 3 ಸಾವಿರ ಹಾಗೂ ಸರ್ಕಾರದಿಂದ 2 ಸಾವಿರ ಸೇರಿ ಒಟ್ಟು ಒಂದು ಟನ್ ಕಬ್ಬಿಗೆ ರೈತರಿಗೆ 5 ಸಾವಿರ ರೂಪಾಯಿ ಸಿಗಬೇಕು. ಇಲ್ಲವಾದರೆ ಸಕ್ಕರೆ ಸಚಿವ ಶಿವಾನಂದ ಪಾಟೀಲರ ನಿವಾಸದ ಎದುರು ಹೋರಾಟ ಮಾಡುತ್ತೇವೆಂದು ರೈತ ಸಂಘಟನೆಗಳು ನಿರ್ಧಾರ ಮಾಡಿದ್ದವು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:44 pm, Wed, 11 December 24