AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಅದೊಂದು ಕುಟುಂಬದ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದ ಇಂಡಿಗೋ ವಿಮಾನ ಪ್ರಯಾಣ: ಏಕೆ ಗೊತ್ತಾ?

ಕಳೆದ ಗುರುವಾರದಂದು ಚಂಡೀಗಢ ಟು ಬೆಂಗಳೂರಿಗೆ ಬಂದ ಇಂಡಿಗೋ ವಿಮಾನ ಬೆಂಗಳೂರಿನ ಅದೊಂದು ಕುಟುಂಬಕ್ಕೆ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಅತುಲ್ ಚೌಧರಿ ವಿಮಾನದ ಕ್ಯಾಪ್ಟನ್ ಆಗಿ ಮೊದಲ ಬಾರಿಗೆ ವಿಮಾನ ಹಾರಾಟ ನಡೆಸಿದರು. ಈ ಪ್ರಯಾಣ ಅವರ ಪೋಷಕರಿಗೆ ಅವಿಸ್ಮರಣೀಯವಾಗಿದೆ. ಅತುಲ್ ಅವರ ತಂದೆ ತಮ್ಮ ಮಗನ ಸಾಧನೆಯನ್ನು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದಾರೆ.

ಬೆಂಗಳೂರಿನ ಅದೊಂದು ಕುಟುಂಬದ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದ ಇಂಡಿಗೋ ವಿಮಾನ ಪ್ರಯಾಣ: ಏಕೆ ಗೊತ್ತಾ?
ಚೌಧರಿ ಕುಟುಂಬ
ಗಂಗಾಧರ​ ಬ. ಸಾಬೋಜಿ
|

Updated on:May 26, 2025 | 8:28 AM

Share

ಬೆಂಗಳೂರು, ಮೇ 26: ಮಕ್ಕಳು ಒಂದು ಒಳ್ಳೆಯ ಕೆಲಸ ಮಾಡಿಕೊಂಡು ಜೀವನದಲ್ಲಿ ಆರಾಮವಾಗಿದ್ದರೆ ಸಾಕು ಎನ್ನುವುದು ಅದೆಷ್ಟೋ ಪೋಷಕರ (parents) ಆಸೆ. ಅದರಲ್ಲೂ ಮಕ್ಕಳು ಸಾಧನೆ ಮಾಡಿದರೆ ಪೋಷಕರ ಖುಷಿಗೆ ಪಾರವೇ ಇರಲ್ಲ. ಬೆಂಗಳೂರಿನ ಅದೊಂದು ಪೋಷಕರಿಗೆ (Bengaluru family) ಇಂತಹದೊಂದು ಖುಷಿಗೆ ಕಾರಣರಾಗಿದ್ದಾರೆ. ನೆಲದಿಂದ ಸುಮಾರು 30 ಸಾವಿರ ಅಡಿ ಎತ್ತರದಲ್ಲಿ ಚಂಡೀಗಢ ಟು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ ವಿಮಾನ ಭಾವನಾತ್ಮಕ ಕ್ಷಣಕ್ಕೆ ಕಾರಣವಾಗಿತ್ತು.

ಉಳಿದ ಪ್ರಯಾಣಿಕರಿಗೆ ಅದೊಂದು ಸಾಮಾನ್ಯ ವಿಮಾನ ಪ್ರಯಾಣವಾಗಿತ್ತು. ಆದರೆ ಅನಿಲ್ ಮತ್ತು ಅರ್ಚನಾ ಚೌಧರಿ ದಂಪತಿಗೆ ಮರೆಯಲಾಗದ ದಿನವಾಗಿತ್ತು. ಏಕೆಂದರೆ ಅವರ ಮಗ ಅತುಲ್ ಚೌಧರಿ, ವಿಮಾನ ಹಾರಾಟ ನಡೆಸುವುದು ಮಾತ್ರವಲ್ಲದೇ, ಮೊದಲ ಬಾರಿಗೆ ಕ್ಯಾಪ್ಟನ್ ಆಗಿ ಕಮಾಂಡ್ ಮಾಡುತ್ತಿದ್ದರು.

ಇದನ್ನೂ ಓದಿ: 3 ಸಾವಿರ ಕೋಟಿ ರೂ. ಪಿಎಫ್ ಬಾಕಿ ಉಳಿಸಿಕೊಂಡ ಕೆಎಸ್​ಆರ್​ಟಿಸಿ, ಬಿಎಂಟಿಸಿ: ಪಿಎಫ್ ಸಿಗದೆ ಸಂಕಷ್ಟದಲ್ಲಿ ಸಾರಿಗೆ ನೌಕರರು

ಇದನ್ನೂ ಓದಿ
Image
ಬೆಂಗಳೂರು ಮಂಗಳೂರು ವಾಹನ ಸವಾರರೇ ಗಮನಿಸಿ: ಶಿರಾಡಿ ಘಾಟ್​ನ ಹಲವೆಡೆ ಭೂಕುಸಿತ
Image
3 ಸಾವಿರ ಕೋಟಿ ಪಿಎಫ್ ಬಾಕಿ ಉಳಿಸಿಕೊಂಡ ಸಾರಿಗೆ ನಿಗಮಗಳು: ನೌಕರರಿಗೆ ಸಂಕಷ್ಟ
Image
ವಾಡಿಕೆಗಿಂತ ಮೊದಲೇ ಮುಂಗಾರು ಆಗಮನ, ಕರ್ನಾಟಕ, ಕೇರಳದಲ್ಲಿ ಭಾರಿ ಮಳೆ
Image
ಕರಾವಳಿ ಕರ್ನಾಟಕ, ಮಲೆನಾಡು ಭಾಗದಲ್ಲಿ ಭಾರಿ ಮಳೆ; ಎಲ್ಲೆಲ್ಲಿ ಏನೇನಾಯ್ತು?

ಈ ಹೃದಯಸ್ಪರ್ಶಿ ಕ್ಷಣವನ್ನು ಸತ್ವಃ ಅತುಲ್ ಅವರ ತಂದೆ ಅನಿಲ್ ಕಾಂತ್ ಚೌಧರಿ ಅವರು ತಮ್ಮ ಲಿಂಕ್ಡ್‌ಇನ್​ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಮಗ ಹೇಗೆ ಪೈಲಟ್​ ಸ್ಥಾನದಿಂದ ಕ್ಯಾಪ್ಟನ್​​ ಸ್ಥಾನಕ್ಕೇರಿದರು ಎಂಬುವುದನ್ನು ಹೇಳಿದ್ದಾರೆ.

‘ಒಬ್ಬ ವ್ಯಕ್ತಿಯು ತನ್ನ ನಿಯಮಿತ ಸ್ಥಾನದಿಂದ ಮತ್ತೊಂದು ಸ್ಥಾನಕ್ಕೇರಿದಾಗ ಆತನ ಜವಾಬ್ದಾರಿಗಳು ಕೂಡ ಬದಲಾಗುತ್ತವೆ. ಈ ಗಮನಾರ್ಹ ಬದಲಾವಣೆಯೂ ನಂಬಿಕೆ ಮತ್ತು ಗೌರವಕ್ಕೆ ಒಂದು ಮಹತ್ವದ ಹೆಜ್ಜೆಯಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ಕಾಕ್‌ಪಿಟ್‌ನಲ್ಲಿ ಬಲ ಸೀಟಿನಿಂದ ಎಡ ಸೀಟಿಗೆ ವರ್ಗಾವಣೆಗೊಳ್ಳುವವರು ಸೀನಿಯರ್ ಫಸ್ಟ್ ಆಫೀಸರ್ (SFO) ಕ್ಯಾಪ್ಟನ್ ಆಗುತ್ತಾರೆ. ಸಹ-ಪೈಲಟ್‌ಗಳು ಮತ್ತು ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡುವುದು, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮತ್ತು ಮುಖ್ಯವಾಗಿ ಪ್ರಯಾಣಿಕರ ವಿಶ್ವಾಸವನ್ನು ಕಾಪಾಡುವುದು  ಇವರ ಹೊಣೆಯಾಗಿರುತ್ತದೆ. ಕ್ಯಾಪ್ಟನ್ ತನ್ನ ವಿಮಾನದಲ್ಲಿರುವ ಪ್ರಯಾಣಿಕರ ರಕ್ಷಕನಾಗಿರುತ್ತಾನೆ ಎಂದಿದ್ದಾರೆ.

‘ಪ್ರತಿಯೊಬ್ಬ ಪೈಲಟ್‌ಗೆ ಇದೊಂದು ದೊಡ್ಡ ಕ್ಷಣ, ಅದರಲ್ಲೂ ಆ ಪೈಲಟ್‌ನ ಪೋಷಕರಿಗೆ ಇದು ಇನ್ನೂ ತುಂಬಾ ದೊಡ್ಡ ಕ್ಷಣ. ಕಳೆದ ಗುರುವಾರ ಅರ್ಚನಾ ಚೌಧರಿ ಮತ್ತು ನಾನು ಈ ಬದಲಾವಣೆಯನ್ನು ಕಂಡೆವು. ನಮ್ಮ ಮಗ ಕ್ಯಾಪ್ಟನ್ ಆಗುವುದರ ಮೂಲಕ ಮೊದಲ ಬಾರಿಗೆ ಪ್ರಯಾಣಿಕರನ್ನು ಉದ್ದೇಶಿಸಿ ಮಾತನಾಡಿದ. ಇದು ನಮಗೆ ಖುಷಿಯ ವಿಚಾರ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Karnataka Rains: ಕರವಾಳಿ ಕರ್ನಾಟಕ, ಮಲೆನಾಡು ಭಾಗದಲ್ಲಿ ಭಾರಿ ಮಳೆ; ಎಲ್ಲೆಲ್ಲಿ ಏನೇನಾಯ್ತು? ಇಲ್ಲಿದೆ ವಿವರ

‘ಮುಂದಿನ ದಿನಗಳಲ್ಲಿ ಕ್ಯಾಪ್ಟನ್ ಅತುಲ್ ಚೌಧರಿ ಪರಿಣಾಮಕಾರಿಯಾಗಿ ತಮ್ಮ ಕಾರ್ಯವನ್ನ ನಿರ್ವಹಿಸುತ್ತಾರೆ ಮತ್ತು ಪ್ರಯಾಣಿಕರು ಸೇರಿದಂತೆ ಎಲ್ಲರ ವಿಶ್ವಾಸವನ್ನು ಗಳಿಸುತ್ತಾರೆ ಎಂಬ ನಂಬಿಕೆ ಇದೆ. ಯಾವಾಗಲೂ ಹಾರುತ್ತಲೇ ಇರಿ, ಖುಷಿಯಾಗಿ ಇರುವಂತೆ’ ತಮ್ಮ ಮಗನಿಗೆ ಚೌಧರಿ ದಂಪತಿ ಶುಭಾಶಯ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:20 am, Mon, 26 May 25

Follow Us
Gangadhar Saboji
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು