ಕೃಷಿ ಸಚಿವರ ತವರಲ್ಲೇ ಅನ್ನದಾತರಿಗೆ ತಪ್ಪದ ಸಂಕಷ್ಟ: ಸಂಪೂರ್ಣ ಕಬ್ಬು ಅರೆಯುವ ಮುನ್ನವೇ ಮೈಶುಗರ್ ಕಾರ್ಖಾನೆ ಬಂದ್

ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆ, ರಾಜ್ಯದ ಏಕೈಕ ಸರ್ಕಾರಿ ‌ಸಾಮ್ಯದ ಕಾರ್ಖಾನೆ.‌ ಜಿಲ್ಲೆಯ ‌ಕಬ್ಬು ಬೆಳೆಗಾರರ ಜೀವನಾಡಿ. ಈ ವರ್ಷದ ಕಬ್ಬು ಅರೆಯುವಿಕೆಯನ್ನು ಏಕಾಏಕಿ ಕಾರ್ಖಾನೆ ನಿಲ್ಲಿಸಿದ್ದು, ಜಿಲ್ಲೆಯ ಕಬ್ಬು‌ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿವಂತೆ ಮಾಡಿದೆ. ಸರ್ಕಾರದ ನಡೆಗೆ ಅನ್ನದಾತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೃಷಿ ಸಚಿವರ ತವರಲ್ಲೇ ಅನ್ನದಾತರಿಗೆ ತಪ್ಪದ ಸಂಕಷ್ಟ: ಸಂಪೂರ್ಣ ಕಬ್ಬು ಅರೆಯುವ ಮುನ್ನವೇ ಮೈಶುಗರ್ ಕಾರ್ಖಾನೆ ಬಂದ್
ಮೈ ಶುಗರ್ ಸಕ್ಕರೆ ಕಾರ್ಖಾನೆ
Follow us
ಪ್ರಶಾಂತ್​ ಬಿ.
| Updated By: Ganapathi Sharma

Updated on: Nov 27, 2024 | 2:03 PM

ಮಂಡ್ಯ, ನವೆಂಬರ್ 27: ಕರ್ನಾಟಕದ ಸರ್ಕಾರಿ ಸಾಮ್ಯದ ಏಕೈಕ ಸಕ್ಕರೆ ಕಾರ್ಖಾನೆ, ಮಂಡ್ಯದ ‘ಮೈ ಶುಗರ್’ ಈ ವರ್ಷದ ಕಬ್ಬು ಅರೆಯುವುದನ್ನು ಬಂದ್ ಮಾಡಿದ್ದು, ಇದರ ಪರಿಣಾಮವಾಗಿ ಕೃಷಿ ಸಚಿವ ಚಲುವರಾಯಸ್ವಾಮಿ ತವರು ಜಿಲ್ಲೆಯಲ್ಲೇ ಅನ್ನದಾತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆ ಪ್ರಸಕ್ತ ವರ್ಷದಲ್ಲಿ ಆಗಸ್ಟ್​​ನಿಂದ ಕಬ್ಬು ಅರೆಯುವಿಕೆಯನ್ನು ಪ್ರಾರಂಭ ಮಾಡಿತ್ತು. ಪ್ರಾರಂಭದಲ್ಲಿ ಬರದ ನೆಪನೊಡ್ಡಿ, 2 ಲಕ್ಷದ 5 ಮೆಟ್ರಿಕ್ ಟನ್ ಕಬ್ಬಯ ಅರೆಯುವ ಗುರಿ ನಿಗದಿಪಡಿಸಿತ್ತು. ಇದಕ್ಕಾಗಿ ತನ್ನ ವ್ಯಾಪ್ತಿ ಕಬ್ಬು ಬೆಳೆಗಾರರ ಜೊತೆ ಒಪ್ಪಂದ ಕೂಡ ಮಾಡಿಕೊಂಡಿತ್ತು. ಅದರಂತೆ ನವೆಂಬರ್ ಅಂತ್ಯಕ್ಕೆ 2 ಲಕ್ಷದ 01 ಟನ್ ಅನ್ನ ಕಬ್ಬನ್ನು ಅರೆಯಿಸಲಾಗಿದೆ. ಆದರೆ ಇನ್ನಷ್ಟು ಕಬ್ಬು ಬಾಕಿ ಇರುವಾಗಲೇ ಕಬ್ಬು ಅರೆಯುವುದನ್ನು ಪ್ರಸಕ್ತ ವರ್ಷಕ್ಕೆ ಬಂದ್ ಮಾಡಿದೆ.‌

ಒಪ್ಪಂದದಂತೆ ಕಾರ್ಖಾನೆ ಈ ಬಾರಿ ಕಬ್ಬು ಅರೆಯಲಾಗಿದೆ. ಜೊತೆಗೆ ವಿದ್ಯುತ್ ಉತ್ಪಾದನೆಯಿಂದ ಐದು ಕೋಟಿ ರೂಪಾಯಿ ಲಾಭವನ್ನು ಕೂಡ ಮಾಡಿದೆ. ಆದರೆ ಮೈ ಶುಗರ್ ವ್ಯಾಪ್ತಿಯಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಕಟಾವು ಆಗಿಲ್ಲ. ಈಗಾಗಲೇ ಕಬ್ಬಿನಲ್ಲಿ ಸೂಲಂಗಿ ಕೂಡ ಬಂದಿದೆ. ಕಬ್ಬು ತೂಕವನ್ನು ಕಳೆದುಕೊಳ್ಳುತ್ತಿದೆ ಹೀಗಾಗಿ ರೈತರ ಪಾಡು ಶೋಚನೀಯವಾಗಿದೆ.

ಖಾಸಗಿ ಕಾರ್ಖಾನೆಗಳಿಗೂ ಮಾರಾಟ ಮಾಡುವಂತಿಲ್ಲ!

ಒಪ್ಪಂದದ ಪ್ರಕಾರ, ಬೇರೆ ಕಾರ್ಖಾನೆಗಳಿಗೂ ಕೂಡ ಕಬ್ಬನ್ನು ಸರಬರಾಜು ಮಾಡದ ಪರಿಸ್ಥಿತಿಯಲ್ಲಿ ರೈತರು ಇದ್ದಾರೆ. ಸರ್ಕಾರವೇ ಇಂತಿಷ್ಟು ವ್ಯಾಪ್ತಿ ಮಾಡಿ, ಇಲ್ಲಿನ ಕಬ್ಬನ್ನು ಖಾಸಗಿ ಕಾರ್ಖಾನೆಗಳು ಪಡೆಯದಂತೆ ಆದೇಶ ಕೂಡ ಮಾಡಿತ್ತು. ಹೀಗಾಗಿ ಕಾರ್ಖಾನೆ ಬಂದ್ ಆಗಿ, ಕಬ್ಬು ಸರಬರಾಜು ಆಗದೇ ಇರುವುದು ಜಿಲ್ಲೆಯ ಕಬ್ಬು ಬೆಳೆಗಾರರನ್ನ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಇನ್ನು ಉಳಿದ ಕಬ್ಬನ್ನು ಆಲೆಮನೆಗಳಿಗೆ ಸರಬರಾಜು ಮಾಡೋಣ ಅಂದರೆ ಕಡಿಮೆ ಬೆಲೆಗೆ ಖರೀದಿ ಮಾಡುತ್ತಿದ್ದಾರೆ. ಖಾಸಗಿ ಕಾರ್ಖಾನೆಗಳು ಕೂಡ ತನ್ನ ವ್ಯಾಪ್ತಿಯ ಕಬ್ಬನ್ನ ಬಿಟ್ಟು ಬೇರೆ ಕಬ್ಬನ್ನ ಪಡೆದುಕೊಳ್ಳುತ್ತಿಲ್ಲ. ಹೀಗಾಗಿ ಸಾಲ ಸೋಲ ಮಾಡಿ ಕಬ್ಬು ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದನ್ನೂ ಓದಿ: ನಾಗಮಂಗಲ ಕೋಮುಗಲಭೆ ಪ್ರಕರಣ: ಡಿಸಿ ವರದಿ ಪರಿಗಣಿಸದೆ ಕಾಟಾಚಾರಕ್ಕೆ ಪರಿಹಾರ, ಸಂತ್ರಸ್ತರ ಆಕ್ರೋಶ

ಒಟ್ಟಾರೆ ಮೈಶುಗರ್ ಸಕ್ಕರೆ ಕಾರ್ಖಾನೆ ಪ್ರಸಕ್ತ ವರ್ಷದ ಕಬ್ಬು ಅರೆಯುವಿಕೆಯನ್ನು ಸ್ಥಗಿತ ಮಾಡಿರುವುದು ಜಿಲ್ಲೆಯ ಕಬ್ಬು ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮವಹಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಯಾದಗಿರಿ ತಲುಪಿ ರೈತರ ಸಂಕಷ್ಟ ಆಲಿಸುತ್ತಿರುವ ಬಸನಗೌಡ ಯತ್ನಾಳ್ ತಂಡ
ಯಾದಗಿರಿ ತಲುಪಿ ರೈತರ ಸಂಕಷ್ಟ ಆಲಿಸುತ್ತಿರುವ ಬಸನಗೌಡ ಯತ್ನಾಳ್ ತಂಡ
ಬೆಂಗಳೂರು: ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಬ್ಯಾಡ್ ಟಚ್, ವಿಡಿಯೋ ವೈರಲ್
ಬೆಂಗಳೂರು: ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಬ್ಯಾಡ್ ಟಚ್, ವಿಡಿಯೋ ವೈರಲ್
ಶಿಶುವನ್ನು ವಾಪಸ್ಸು ಪಡೆದ ತಂದೆತಾಯಿಗಳ ಸಂತೋಷಕ್ಕೆ ಪಾರವೇ ಇಲ್ಲ!
ಶಿಶುವನ್ನು ವಾಪಸ್ಸು ಪಡೆದ ತಂದೆತಾಯಿಗಳ ಸಂತೋಷಕ್ಕೆ ಪಾರವೇ ಇಲ್ಲ!
ಮುಸ್ಲಿಮರಿಗೆ ಮತದಾನದ ಹಕ್ಕು: ಸ್ವಾಮೀಜಿ ಹೇಳಿಕೆಗೆ ಮಹದೇವಪ್ಪ ಗರಂ
ಮುಸ್ಲಿಮರಿಗೆ ಮತದಾನದ ಹಕ್ಕು: ಸ್ವಾಮೀಜಿ ಹೇಳಿಕೆಗೆ ಮಹದೇವಪ್ಪ ಗರಂ
ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ
ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ
6,6,6,6,6: RCB ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್ ಸಿಡಿಲಬ್ಬರ ಶುರು
6,6,6,6,6: RCB ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್ ಸಿಡಿಲಬ್ಬರ ಶುರು
Daily Devotional: ಪುಣ್ಯಕ್ಷೇತ್ರಗಳಿಗೆ ತೆರಳುವಾಗ ಅಪಘಾತವಾದರೆ ಏನರ್ಥ
Daily Devotional: ಪುಣ್ಯಕ್ಷೇತ್ರಗಳಿಗೆ ತೆರಳುವಾಗ ಅಪಘಾತವಾದರೆ ಏನರ್ಥ
Daily Horoscope: ಈ ರಾಶಿಯವರ ವ್ಯಾಪಾರದ ತೊಂದರೆಗಳು ನಿವಾರಣೆಯಾಗುತ್ತದೆ
Daily Horoscope: ಈ ರಾಶಿಯವರ ವ್ಯಾಪಾರದ ತೊಂದರೆಗಳು ನಿವಾರಣೆಯಾಗುತ್ತದೆ
ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ
ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ
ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ