ಹುಬ್ಬಳ್ಳಿಯಲ್ಲಿ ಆಕ್ಸಿಜನ್ ಬಸ್‌ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ

|

Updated on: May 17, 2021 | 6:26 PM

ತಜ್ಞರ ವರದಿಯನ್ನ ಸರ್ಕಾರ ಪರಿಶೀಲನೆ ಮಾಡುತ್ತಾ ಇದೆ. 24ರವರೆಗೆ ಸದ್ಯ ಲಾಕ್​ಡೌನ್ ಘೋಷಿಸಲಾಗಿದೆ. ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಲಾಕ್​ಡೌನ್ ಶುರುವಾಗಿದ್ದೇ 14ರಿಂದ. ಹೀಗಾಗಿ ಚೈನ್ ಲಿಂಕ್ ಕಟ್ ಆಗಲು ಸಮಯ ಬೇಕಾಗುತ್ತದೆ. ರಾಜ್ಯ ಸರ್ಕಾರ ಈ ಕುರಿತು ಮೇ 21 ಅಥವಾ 22ರಂದು ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಆಕ್ಸಿಜನ್ ಬಸ್‌ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ
ಪ್ರಲ್ಹಾದ್ ಜೋಶಿ
Follow us on

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಬಸ್‌ಗೆ ಚಾಲನೆ ನೀಡಿದ್ದಾರೆ. ಉದ್ಘಾಟನೆ ಬಳಿಕ ಮಾತನಾಡಿದ ಅವರು ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಸಂಸ್ಥೆಯಿಂದ ಆಕ್ಸಿಜನ್ ಬಸ್ ಕೊಡುಗೆ ನೀಡಲಾಗಿದೆ. 6 ಸೀಟ್​ಗಳ ಈ ಆಕ್ಸಿಜನ್ ಬಸ್​ನಲ್ಲಿ ಆಕ್ಸಿಜನ್ ಕಾನ್ಸಟ್ರೇಟರ್ ಮೂಲಕ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಬಳಿಕ ರಾಜ್ಯದಲ್ಲಿ ಲಾಕಡೌನ್ ಮುಂದುವರಿಕೆ ವಿಚಾರವಾಗಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ತಜ್ಞರ ವರದಿಯನ್ನ ಸರ್ಕಾರ ಪರಿಶೀಲನೆ ಮಾಡುತ್ತಾ ಇದೆ. 24ರವರೆಗೆ ಸದ್ಯ ಲಾಕ್​ಡೌನ್ ಘೋಷಿಸಲಾಗಿದೆ.
ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಲಾಕ್​ಡೌನ್ ಶುರುವಾಗಿದ್ದೇ 14ರಿಂದ. ಹೀಗಾಗಿ ಚೈನ್ ಲಿಂಕ್ ಕಟ್ ಆಗಲು ಸಮಯ ಬೇಕಾಗುತ್ತದೆ. ರಾಜ್ಯ ಸರ್ಕಾರ ಈ ಕುರಿತು ಮೇ 21 ಅಥವಾ 22ರಂದು ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಪಾಸಿಟಿವ್ ಸಂಖ್ಯೆ ಕಡಿಮೆ ಆಗದಿದ್ದರೇ ಇನ್ನೂ ಕೇಲವು ದಿನಗಳ ಕಾಲ ಲಾಕ್​ಡೌನ್ ಮುಂದುವರೆಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ನಂತರ ಇತ್ತಿಚೇಗೆ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಬ್ಲಾಕ್​ ಫಂಗಸ್ ವಿಚಾರವಾಗಿ ಮಾತನಾಡಿದ ಅವರು
ಧಾರವಾಡ ಜಿಲ್ಲೆಯಲ್ಲಿ ಬ್ಲಾಕ್ ಫಂಗಸ್ ಪ್ರಕರಣಗಳು ಹೆಚ್ಚು ಪತ್ತೆಯಾಗಿವೆ. ಇದೊಂದು ಸೈಡ್ ಎಪೆಕ್ಟ್ ಆಗಿದ್ದು, ಇದಕ್ಕೆ ಕೆಲ ಔಷಧಿಗಳು ಬೇಕು ಎಂದು ವೈದ್ಯರು ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ನಾನು ಭಾರತ ಸರ್ಕಾರದ ಜತೆ ಮಾತನಾಡಿ ಔಷಧಿ ವ್ಯವಸ್ಥೆ ಮಾಡಲು ಪ್ರಯತ್ನ ಮಾಡುತ್ತಿರುವೆ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಇದನ್ನೂ ಓದಿ:

ಸಿಡಿ ಪ್ರಕರಣದಲ್ಲಿ ಸಂತ್ರಸ್ಥೆ ಬಂದು ದೂರು ನೀಡುವವರೆಗೆ ಯಾರನ್ನೂ ಬಂಧಿಸಲು ಆಗುವುದಿಲ್ಲ-ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ವ್ಯಾಕ್ಸಿನ್ ಬಗ್ಗೆ ಮೊದಲು ನೆಗೆಟಿವ್ ಮಾತಾಡಿದ್ರು; ಜನರ ಆ ತಪ್ಪು ತಿಳಿವಳಿಕೆಯೂ ಪ್ರೊಡಕ್ಷನ್ ಮೇಲೆ ಪರಿಣಾಮ ಬೀರಿತು: ಪ್ರಹ್ಲಾದ್ ಜೋಶಿ