ರಾಜಕೀಯ ಜಂಜಾಟ ಬಿಟ್ಟು ಕರುಗಳ ಮುದ್ದಿಸಿ ಸಂತಸಪಟ್ಟ ಕೇಂದ್ರ ಸಚಿವ ಜೋಶಿ

Updated on: Nov 24, 2024 | 8:09 PM

ಹಿಂದೂ ಧರ್ಮ ಪಾಲನೆ, ಭಾರತೀಯ ಸಂಸ್ಕೃತಿ ಅನುಸರಣೆ ಎಂದರೆ ಯಾವತ್ತೂ ಒಂದು ಹೆಜ್ಜೆ ಇರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಎಂದು ಬಾಗಲಕೋಟೆ ಜಿಲ್ಲೆ ಬಾದಾಮಿಯ ಮನೋರಥ ಪ್ರತಿಷ್ಠಾನ ಗೋಶಾಲೆಯಲ್ಲಿ ಗೋವು ಪೂಜೆ ನೆರವೇರಿಸಿ ಭಕ್ತಿ-ಪ್ರೀತಿ ಮೆರೆದರು.

1 / 6
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಇಂದು ಬಾಗಲಕೋಟೆ ಜಿಲ್ಲೆ ಬಾದಾಮಿಯ ಮನೋರಥ ಪ್ರತಿಷ್ಠಾನ ಗೋಶಾಲೆಯಲ್ಲಿ ಗೋವು ಪೂಜೆ ನೆರವೇರಿಸಿ ಭಕ್ತಿ-ಪ್ರೀತಿ ಮೆರೆದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಇಂದು ಬಾಗಲಕೋಟೆ ಜಿಲ್ಲೆ ಬಾದಾಮಿಯ ಮನೋರಥ ಪ್ರತಿಷ್ಠಾನ ಗೋಶಾಲೆಯಲ್ಲಿ ಗೋವು ಪೂಜೆ ನೆರವೇರಿಸಿ ಭಕ್ತಿ-ಪ್ರೀತಿ ಮೆರೆದರು.

2 / 6

ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ವೀಕ್ಷಣೆಗೆ ಬಾದಾಮಿಗೆ ತೆರಳಿದ್ದ ವೇಳೆ ಸಚಿವರು ಬಾದಾಮಿ ಶ್ರೀ ಬನಶಂಕರಿ ದೇವಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ನೆರವೇರಿಸಿದರು.

3 / 6

ಬಳಿಕ ಸಚಿವರು ಬಾದಾಮಿಯ ಮನೋರಥ ಪ್ರತಿಷ್ಠಾನದ ಗೋಶಾಲೆಗೆ ತೆರಳಿ ಭಾರತೀಯ ಸಂಪ್ರದಾಯದಂತೆ ದೇಸಿ ಗೋವುಗಳಿಗೂ ಪೂಜೆ ಸಲ್ಲಿಸಿ, ಆರತಿ ಬೆಳಗಿದರು.

4 / 6

ಮನೋರಥ ಗೋಶಾಲೆಯಲ್ಲಿ ಭಾರತೀಯ ಪ್ರಸಿದ್ಧ ತಳಿಗಳಾದ ಗೀರ್, ಸಾಹಿವಾಲ್, ಅಮೃತ್ ಮಹಲ್, ಮಲ್ನಾಡ್ ಗಿಡ್ಡ ಹೀಗೆ ವಿವಿಧ ಗೋವುಗಳಿದ್ದು, ಸಚಿವರು ಈ ದೇಸಿ ಹಸು-ಕರುಗಳಿಗೆ ಬೆಲ್ಲ, ಬಾಳೆಹಣ್ಣು, ಅಕ್ಕಿ ತಿನ್ನಿಸಿ ನೇವರಿಸಿದರು.

5 / 6

ಬಾದಾಮಿಯ ಈ ಗೋಶಾಲೆಯಲ್ಲಿ ಸಚಿವರು ಸ್ವಲ್ಪ ಹೊತ್ತು ಎಲ್ಲಾ ರಾಜಕೀಯ ಜಂಜಾಟಗಳಿಂದ ದೂರವಿದ್ದು, ಸಣ್ಣ ಕರುಗಳನ್ನು ಮುದ್ದಿಸುತ್ತ ಸಂತಸದಿಂದ ಕಾಲ ಕಳೆದರು.

6 / 6

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಹಿಂದೂ ಧರ್ಮ ಪಾಲನೆ, ಭಾರತೀಯ ಸಂಸ್ಕೃತಿ ಅನುಸರಣೆ ಎಂದರೆ ಯಾವತ್ತೂ ಒಂದು ಹೆಜ್ಜೆ ಮುಂದೆ ಇದ್ದು, ರಾಜಕೀಯ ಜಂಜಾಟ ಬಿಟ್ಟು ಕರುಗಳ ಮುದ್ದಿಸಿ ಸಂತಸಪಟ್ಟರು.

ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Loading...
Unable to load recommendations.
Follow Us