ಬೆಂಗಳೂರು: ರಾಜ್ಯಸಭಾ ಮಾಜಿ ಸದಸ್ಯರ ಹಣ ಹಾಲಿ ಸದಸ್ಯರಿಗೆ ಹಂಚಿಕೆಗೆ ತೀರ್ಮಾನಿಸಲಾಗಿದೆ. ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ವೆಚ್ಚವಾಗದ ₹2.84 ಕೋಟಿ ಹಣವನ್ನು ಹಾಲಿ ಸದಸ್ಯರಿಗೆ ನೀಡಲು ಯೋಜಿಸಲಾಗಿದೆ. ಮಾಜಿ ರಾಜ್ಯಸಭಾ ಸದಸ್ಯರ ಅವಧಿಯಲ್ಲಿ ವೆಚ್ಚವಾಗದೆ ಉಳಿದಿರುವ 2,84,92,608 ರೂಪಾಯಿಯನ್ನು ಹಾಲಿ 12 ರಾಜ್ಯಸಭಾ ಸದಸ್ಯರಿಗೆ ತಲಾ ₹23,74,384 ಹಂಚಿಕೆ ಮಾಡಲಾಗುವುದು ಎಂದು ತಿಳಿಸಲಾಗಿದ್ದು, ರಾಜ್ಯಸಭಾ ಸದಸ್ಯರ ಮೂಲಕ ಈ ಮೊತ್ತವನ್ನು ಕೊವಿಡ್ ಪರಿಹಾರಕ್ಕೆ ಬಳಕೆ ಮಾಡಲು ಕೇಂದ್ರ ಸರ್ಕಾರ ಮನವಿ ಮಾಡಿದೆ.
ಮಾಜಿ ಸದಸ್ಯರ ವೆಚ್ಚವಾಗದೇ ಇದ್ದ 2.84 ಕೋಟಿ ರೂಪಾಯಿಯನ್ನು ಹಾಲಿ ರಾಜ್ಯಸಭಾ ಸದಸ್ಯರಿಗೆ ಹಂಚಿಕೆ ಮಾಡಲಾಗುವುದು. ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಮಾಜಿ ರಾಜ್ಯಸಭಾ ಸದಸ್ಯರ ಅವಧಿಯಲ್ಲಿ ವೆಚ್ಚವಾಗದೇ ಉಳಿದಿರುವ ಹಣ ಇದಾಗಿದೆ. ಹಾಲಿ 12 ಜನ ರಾಜ್ಯಸಭಾ ಸದಸ್ಯರಿಗೆ ತಲಾ 23,74,384 ರೂಪಾಯಿ ಹಂಚಿಕೆ ಮಾಡಲಾಗುವುದು. ವೆಚ್ಚವಾಗದೇ ಉಳಿದಿದ್ದ ಹಣವನ್ನು ರಾಜ್ಯಸಭಾ ಸದಸ್ಯರ ಮೂಲಕವೇ ಕೋವಿಡ್ ಪರಿಹಾರ ಕಾರ್ಯಕ್ಕೆ ವಿನಿಯೋಗ ಮಾಡಲಾಗುವುದು. ರಾಜ್ಯಸಭಾ ಸದಸ್ಯರು ಈ ಅನುದಾನವನ್ನು ಕೋವಿಡ್ ನಿರ್ವಹಣೆಗಾಗಿ ಬಳಸಿಕೊಳ್ಳುವಂತೆ ಕೇಂದ್ರ ಸರ್ಕಾರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಇಲಾಖೆ ಮನವಿ ಮಾಡಿದೆ.
ರಾಜ್ಯಸಭಾ ಸದಸ್ಯರು ಹಂಚಿಕೆಯಾದ ಹಣವನ್ನು ತಮ್ಮ ಕ್ಷೇತ್ರ ವ್ಯಾಪ್ತಿಯ ಜಿಲ್ಲೆಗಳಲ್ಲಿ ಕೋವಿಡ್ ಕಾರ್ಯಕ್ಕೆ ಬಳಸಿಕೊಳ್ಳಬೇಕು ಎಂದು ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ನಾರಾಯಣ ಗೌಡ ಕೇಳಿಕೊಂಡಿದ್ದಾರೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ರಾಜ್ಯಸಭಾ ಸದಸ್ಯರಾದ ಕೆ.ಸಿ. ರಾಮಮೂರ್ತಿ, ನಿರ್ಮಲಾ ಸೀತಾರಾಮನ್, ಡಾ. ಎಲ್. ಹನುಮಂತಯ್ಯ, ಜಿ.ಸಿ. ಚಂದ್ರಶೇಖರ್, ರಾಜೀವ್ ಚಂದ್ರಶೇಖರ್, ಕೆ. ನಾರಾಯಣ, ಬಳ್ಳಾರಿ ಜಿಲ್ಲೆಯ ಸೈಯದ್ ನಾಸಿರ್ ಹುಸೇನ್, ಬೆಳಗಾವಿ ಜಿಲ್ಲೆಯ ಈರಣ್ಣ ಕಡಾಡಿ, ಚಿಕ್ಕಮಗಳೂರು ಜಿಲ್ಲೆಯ ಜೈರಾಮ್ ರಮೇಶ್, ಹಾಸನ ಜಿಲ್ಲೆಯ ಹೆಚ್.ಡಿ. ದೇವೇಗೌಡ, ಕಲಬುರಗಿ ಜಿಲ್ಲೆಯ ಮಲ್ಲಿಕಾರ್ಜುನ ಖರ್ಗೆ ಹಾಗೂ ಉಡುಪಿ ಜಿಲ್ಲೆಯ ಆಸ್ಕರ್ ಫರ್ನಾಂಡಿಸ್ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ.
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಹಣವನ್ನು ಕೊವಿಡ್ ನಿಯಂತ್ರಣಕ್ಕೆ ಬಳಕೆ
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಹಣವನ್ನು ಕೂಡ ಆದ್ಯತೆಯ ಮೇರೆಗೆ ಕೊವಿಡ್ ನಿಯಂತ್ರಣ ಕಾರ್ಯಕ್ಕೆ ಬಳಸಿಕೊಳ್ಳುವ ವಿಚಾರವಾಗಿ ಮಾಹಿತಿ ಲಭ್ಯವಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಮತ್ತು ತಾಲ್ಲೂಕು ಆರೋಗ್ಯ ಕೇಂದ್ರಗಳಿಗೆ ಹೆಚ್ಚುವರಿ ಕೊಠಡಿಗಳ ನಿರ್ಮಾಣ, ಆಸ್ಪತ್ರೆಗಳಿಗೆ ಕಾಂಪೌಂಡ್ ಗೋಡೆಗಳ ನಿರ್ಮಾಣ, ಆಸ್ಪತ್ರೆಗಳಿಗೆ ಬೇಕಾದ ಪರಿಕರಗಳ ಪೂರೈಕೆ, ರಕ್ತ ನಿಧಿಗಳ ಸ್ಥಾಪನೆ, ಆಂಬ್ಯುಲೆನ್ಸ್ ವಾಹನಗಳ ಖರೀದಿ, ಆಸ್ಪತ್ರೆಗಳಲ್ಲಿ ಶೌಚಾಲಯಗಳ ನಿರ್ಮಾಣ, ಆಸ್ಪತ್ರೆಗಳಲ್ಲಿ ಆರ್ಒ ಮಾದರಿ ಕುಡಿಯುವ ನೀರಿನ ಸೌಲಭ್ಯ, ವೈದ್ಯಾಧಿಕಾರಿಗಳು ಮತ್ತು ಎಎನ್ಎಂಗಳಿಗೆ ವಸತಿಗೃಹಗಳ ನಿರ್ಮಾಣ ಈ ಎಲ್ಲಾ ಕಾಮಗಾರಿಗಳಿಗೆ ಶಾಸಕರಿಂದ ಪ್ರಸ್ತಾವನೆ ಪಡೆಯಲು ಜಿಲ್ಲಾಧಿಕಾರಿಗಳಿಗೆ ಯೋಜನೆ ಮತ್ತು ಕಾರ್ಯಕ್ರಮ ಸಂಯೋಜನೆ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ.
ಇದನ್ನೂ ಓದಿ: ಹೋಮ್ ಕ್ವಾರೆಂಟೈನ್ ಆಗಿರುವ ಕೊರೊನಾ ಸೋಂಕಿತರು ಗಮನಿಸಿ: ಬೇಗ ಗುಣವಾಗಲು ಆಯುಷ್-64 ಔಷಧ ಸಹಕಾರಿ; ವಿವರ ಇಲ್ಲಿದೆ
Steroids in Covid: ಸ್ಟಿರಾಯ್ಡ್ ಎಂದರೇನು? ಕೊರೊನಾ ಸೋಂಕು ಚಿಕಿತ್ಸೆಯಲ್ಲಿ ಈ ಔಷಧವನ್ನು ಹೇಗೆ ಬಳಸಲಾಗುತ್ತದೆ?
Published On - 4:46 pm, Fri, 21 May 21