ಚಾಮರಾಜನಗರ: ಚಂದನವನಕ್ಕೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣ ಶುರುವಾದಾಗಿನಿಂದ ರಾಜ್ಯದಲ್ಲಿ ಹಬ್ಬಿರುವ ಗಾಂಜಾ ಘಾಂಟು ಬಯಲಾಗುತ್ತಿದೆ. ಅಲ್ಲದೆ ಕೊರೊನಾದಿಂದಾಗಿ ಖಿನ್ನತೆಗೆ ಒಳಗಾದವರು ಡ್ರಗ್ಸ್ ಮೊರೆ ಹೋಗುತ್ತಿದ್ದಾರೆ ಎಂಬ ಸುದ್ದಿಯನ್ನು ಸಹ ವರದಿ ಮಾಡಲಾಗಿದೆ. ಈ ನಡುವೆ ಸಚಿವ ಸುರೇಶ್ ಕುಮಾರ್ ಶಾಲಾ ಮಕ್ಕಳನ್ನು ಸೆಳೆಯಲು ಐಸ್ ಕ್ರೀಂಗೆ ಡ್ರಗ್ಸ್ ಹಾಕಲಾಗ್ತಿದೆ ಎಂದು ಗಂಭೀರ ಹೇಳಿಕೆ ನೀಡಿದ್ದಾರೆ.
‘ಈ ವಿಷಯ ಹೊಸದೇನೂ ಅಲ್ಲ, ಶಬ್ದವೇಧಿ ಚಿತ್ರ ಸಹ ನಿರ್ಮಾಣವಾಗಿತ್ತು’
ಹೌದು ಚಾಮರಾಜನಗರದಲ್ಲಿ ಸಚಿವ ಎಸ್. ಸುರೇಶ್ ಕುಮಾರ್ ಮಕ್ಕಳನ್ನು ಸೆಳೆಯಲು ಐಸ್ ಕ್ರೀಂಗೆ ಚಾಕೋಲೇಟ್‌ಗೂ ಡ್ರಗ್ಸ್ ಬೆರೆಸುತ್ತಿದ್ದಾರೆ. ವಿದ್ಯಾರ್ಥಿಗಳು ಡ್ರಗ್ಸ್‌ಗೆ ಅಡಿಕ್ಟ್ ಆಗುವ ಆತಂಕವಿದೆ ಎಂದು ಹೇಳಿದ್ದಾರೆ. ಆದರೆ ಈ ವಿಷಯ ಹೊಸದೇನೂ ಅಲ್ಲ. ಈ ಹಿಂದೆ ಉಪ ಸ್ಪೀಕರ್ ಆಗಿದ್ದವರ ನೇತೃತ್ವದಲ್ಲಿ ವರದಿ ಸಲ್ಲಿಕೆ ಆಗಿತ್ತು. ವರದಿ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಲಾಗಿತ್ತು. ಡ್ರಗ್ಸ್ ಸೇವನೆ ಸಮಾಜಕ್ಕೆ ಮಾರಕ ಎಂದು ಹೇಳಿದ್ರು.
ಮಕ್ಕಳಿಗೆ ಈ ರೀತಿ ತಿನ್ನುವ ಪದಾರ್ಥಗಳಲ್ಲಿ ಡ್ರಗ್ಸ್ ನೀಡುವುದು ಹಾಗೂ ಉನ್ನತ ಮಟ್ಟದ ಶಾಲೆಗಳ ಮಕ್ಕಳಿಗೆ ಡ್ರಗ್ಸ್ ಪೂರೈಸುವುದು ನಡೆಯುತ್ತಲೇ ಇರುತ್ತದೆ. ಇದನ್ನೇ ಆಧರಿಸಿ ಡಾ ರಾಜ್ ಕುಮಾರ್ ಅವರ ಶಬ್ದವೇಧಿ ಚಿತ್ರ ಸಹ ನಿರ್ಮಾಣವಾಗಿತ್ತು. ಆದರೆ ಈ ಬಗ್ಗೆ ಸರ್ಕಾರ ಇನ್ನು ಹೆಚ್ಚಿನ ಗಮನ ಹರಿಸಬೇಕಿದೆ.