ಉತ್ತರ ಕನ್ನಡ: ಜಿಲ್ಲೆಯ ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಳಚೆ ಗ್ರಾಮದಲ್ಲಿ ಭೂಕುಸಿತವಾಗಿದೆ. 2021 ಜುಲೈ 22 ರಂದು ಅಬ್ಬರದ ಮಳೆಗೆ ಗುಡ್ಡ ಬೆಟ್ಟಗಳು ಕುಸಿದು 50ಕ್ಕೂ ಹೆಚ್ಚು ಮನೆಗಳು(House) ಭೂಗರ್ಭ ಸೇರಿದ್ದವು. ಸದ್ಯ ನೀರಿಗಾಗಿ ಒಡ್ಡು ನಿರ್ಮಿಸಿ ನೀರು(Water) ಸಂಗ್ರಹಿಸಿದ್ದ ಭಾಗದಿಂದ ಗುಡ್ಡ ಕುಸಿತವಾಗಿದೆ. ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮದಲ್ಲಿ ಗುಡ್ಡ ಕುಸಿತದಿಂದ 30-40 ಅಡಕೆ ಮರಗಳು(Areca nut) ನಾಶವಾಗಿದೆ. ಗುಡ್ಡ ಕುಸಿತದಿಂದ ಗ್ರಾಮಸ್ಥರು ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ.
2021 ಜುಲೈನಲ್ಲಿ ಭೂಕುಸಿತವಾಗಿದ್ದ ಕಳಚೆ ಗ್ರಾಮದಲ್ಲಿ ಈಗ ಮತ್ತೆ ಗುಡ್ಡ ಕುಸಿದಿದೆ. ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಚೆಯಲ್ಲಿ 2021 ಜುಲೈ 22, 23ರಂದು ಭಾರಿ ಪ್ರಮಾಣದಲ್ಲಿ ಬೆಟ್ಟ, ಗುಡ್ಡ ಕುಸಿದಿದ್ದವು. ಊರಿನ ಚಿತ್ರಣವೇ ಬದಲಾಗಿತ್ತು. ಈಗ ಮತ್ತೆ ಅಂತಹದೇ ಆತಂಕದಲ್ಲಿ ಈ ಗ್ರಾಮ ಸಿಲುಕಿದೆ.
ನಿನ್ನೆ ಸಂಜೆ ಗ್ರಾಮದ ಹತ್ತಿರ ನೀರು ಸಂಗ್ರಹಕ್ಕಾಗಿ ನಿರ್ಮಿಸಿದ್ದ ಒಡ್ಡಿನ ಹತ್ತಿರ ಬಾರಿ ಪ್ರಮಾಣದ ಭೂ ಕುಸಿತ ವಾಗಿದ್ದು, ಸುಮಾರು 50 ಕ್ಕೂ ಹೆಚ್ಚು ಅಡಿಕೆ ಮರಗಳು ನೆಲಸವಾಗಿವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅಡಿಕೆ ಬೆಳೆ ಬೆಳೆದಿದ್ದ ರೈತ ಸಂಕಷ್ಟಕ್ಕೆ ಇಡಿಗುವಂತೆ ಆಗಿದೆ. ಒಂದು ಕಡೆ ರೈತ ಸಂಕಷ್ಟಕ್ಕೆ ಸಿಲುಕಿದರೆ ಇನ್ನೊಂದು ಕಡೆ ಇಡೀ ಗ್ರಾಮವೇ ಬೆಚ್ವಿಬಿದ್ದಿದೆ. ಕಳೆದ ವರ್ಷ ಬಾರಿ ಪ್ರಮಾಣದ ಮಳೆಯಿಂದ ಬೆಟ್ಟಗಳು ಕುಸಿದು ಸಾಕಷ್ಟು ಪ್ರಮಾಣದ ಮನೆಗಳು ಸಂಪೂರ್ಣ ನೆಲಸಮವಾಗಿದ್ದವು. ಮತ್ತದೆ ಸನ್ನಿವೇಶ ನಿರ್ಮಾಣವಾಗುತ್ತಾ ಎಂದು ಆತಂಕ ಗೊಂಡಿದ್ದಾರೆ ಇಲ್ಲಿನ ಜನ.
ಬಾರಿ ಪ್ರಮಾಣದ ಗುಡ್ಡ ಬೆಟ್ಟಗಳ ಕುಸಿತವಾದಾಗ ಬಸವರಾಜ ಬೊಮ್ಮಾಯಿ ಅವರು ಈ ಗ್ರಾಮಕ್ಕೆ ಭೇಟಿ ನೀಡಿದ್ದರು. ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಅವರು ಆಗಷ್ಟೇ ಅಧಿಕಾರ ಸ್ವೀಕರಿಸಿದ್ದರು. ಮರುದಿನವೇ ಇಡೀ ಗ್ರಾಮ ಸ್ಥಳಾಂತರಿಸಲು ಅಧಿಕಾರಿಗಳಿಗೆ ಆದೇಶಿಸಿದ್ದರು. ಆದರೆ ಗ್ರಾಮ ಸ್ಥಳಾಂತರದ ಬಗ್ಗೆ ಅಧಿಕಾರಿಗಳು ಜನ ಪ್ರತಿನಿಧಿಗಳು ಇದುವರೆಗೆ ಚಕಾರವೆತ್ತಿಲ್ಲ. ಹೀಗಾಗಿ ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಹೆಚ್ಚಿನ ಪ್ರಮಾಣದಲ್ಲಿ ಭೂ ಕುಸಿತವಾಗಿ ಪ್ರಾಣ ಹಾನಿಯಾದರೆ ಅದಕ್ಕೆ ನೇರವಾಗಿ ಅಧಿಕಾರಿಗಳು ಸರ್ಕಾರ ಕಾರಣವಾಗುತ್ತದೆ. ಕಡಿಮೆ ಪ್ರಮಾಣದಲ್ಲಿ ಸರ್ಕಾರ ಎಚ್ಚೆತ್ತು ಗ್ರಾಮ ಸ್ಥಳಾಂತರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:
Himachal Pradesh Landslide: ಹಿಮಾಚಲ ಪ್ರದೇಶದಲ್ಲಿ ಭಾರೀ ಭೂಕುಸಿತ; ಕುಲು ರಾಷ್ಟ್ರೀಯ ಹೆದ್ದಾರಿ ಬಂದ್
ಹರಿಯಾಣದ ಭಿವಾನಿಯಲ್ಲಿ ಭೂಕುಸಿತ; 4 ಜನ ಸಾವು, ನಾಪತ್ತೆಯಾದವರಿಗೆ ಶೋಧ ಕಾರ್ಯ
Published On - 1:40 pm, Tue, 22 February 22