ಕಾರವಾರ, ಅಕ್ಟೋಬರ್ 18: ಕಾಂಗ್ರೆಸ್ ಮುಖಂಡ (Congress leader) ನೊಂದಿಗೆ ಮಹಿಳೆಯ ಹೆಸರು ಸೇರಿಸಿ ಕೆಟ್ಟ ಪದ ಬಳಕೆ ಆರೋಪ ಹಿನ್ನಲೆ, ಯುವಕನೋರ್ವನಿಗೆ ಮಹಿಳೆ ಚಪ್ಪಲಿಯಿಂದ ಹಿಗ್ಗಾಮುಗ್ಗಾ ತಳಿಸಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಅಳ್ವಕೋಡಿಯಲ್ಲಿ ನಡೆದಿದೆ. ಕಾಂಗ್ರೆಸ್ ಮುಖಂಡ ಗಜೂ ನಾಯ್ಕ ಅವರ ಸ್ಟೇಪ್ನಿ ಎಂದು ಮಹಿಳೆ ಗಂಡನ ಮುಂದೆ ವ್ಯಕ್ತಿಯೋರ್ವ ನಿಂದಿಸಿದ ಆರೋಪದ ಮೇಲೆ ಇಬ್ಬರು ತಳಿಸಿ ಅದನ್ನ ವಿಡಿಯೋ ಮಾಡಿ ಸಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.
ಕುಮಟಾದ ಕೃಷ್ಣ ನಾಯ್ಕ ಎಂಬ ವ್ಯಕ್ತಿಯೇ ಹಲ್ಲೆಗೊಳಗಾದವನಾಗಿದ್ದಾನೆ. ಕಾಂಗ್ರೆಸ್ ಮುಖಂಡ ಗಜೂ ನಾಯ್ಕ ಮತ್ತು ಅಳ್ವೆಕೋಡಿಯ ಸವಿತಾ ಪಟಗಾರ್ ಇಬ್ಬರ ನಡುವೆ ಸಂಬಂಧವಿದೆ ಎಂದು ಸವಿತಾ ಅವರ ಗಂಡನ ಮುಂದೆ ಈತ ಹೇಳಿ ನಿಂದಿಸಿದ್ದಾನೆ. ವಿಷಯ ತಿಳಿದ ವ್ಯಕ್ತಿ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲ್ಲೆ ನಡೆಸಿದವರ ವಿರುದ್ಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಆರೋಪಿಯನ್ನ ಬಂಧಿಸಲು ಹೋಗಿದ್ದ ಪೊಲೀಸ್ ಸಿಬ್ಬಂದಿಗೆ ಚಾಕು ಇರಿತ; ಮುಂದೆನಾಯ್ತು?
ಮತ್ತೊಂದು ಪ್ರಕರಣದಲ್ಲಿ ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ಬಳಿಯಿರುವ ದುಬೈ ಮಾರ್ಕೆಟ್ನಲ್ಲಿ ಮೊಬೈಲ್ ಅಂಗಡಿಗೆ ನುಗ್ಗಿದ ಯುವಕರ ಗುಂಪೊಂದು ಅಂಗಡಿ ಮಾಲೀಕನಿಗೆ ತಳಿಸಿದ ಘಟನೆ ಇತ್ತೀಚೆಗೆ ನಡೆದಿತ್ತು. ಗ್ರಾಹಕನೋರ್ವ ಪವರ್ ಬ್ಯಾಂಕ್ ರಿಪೇರಿಗೆಂದು ಅಂಗಡಿಗೆ ಬಂದಿದ್ದ. ಅಂಗಡಿ ಮಾಲೀಕ ನಾವು ಮೊಬೈಲ್ ಹೊರತು ಬೇರೆ ಯಾವುದನ್ನೂ ರಿಪೇರಿ ಮಾಡುವುದಿಲ್ಲ ಎಂದಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ಬಂದಿದ್ದ ಯುವಕ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದ.
ಬೆಂಗಳೂರು: ದುಷ್ಕರ್ಮಿಗಳು ಮಹಿಳೆಯಿಂದ ಮೊಬೈಲ್ ಕಿತ್ತು ಪರಾರಿಯಾಗಿರುವಂತಹ ಘಟನೆ ಬಾಣಸ್ವಾಡಿ ರೈಲ್ವೇ ನಿಲ್ದಾಣದ ಬಳಿ ನಡೆದಿತ್ತು. ಮಹಿಳೆಯೊಬ್ಬಳೇ ಹೋಗುತ್ತಿರುವುದನ್ನು ಒಂದು ಬಾರಿ ನೋಡಿ, ಮತ್ತೆ ವಾಪಾಸ್ ಬಂದು ಮೊಬೈಲ್ ಕಸಿದು ಪರಾರಿಯಾಗಿದ್ದರು.
ಇದನ್ನೂ ಓದಿ: ಕಾರವಾರ: ಕತ್ತು ಸೀಳಿ ಪತ್ನಿಯನ್ನೇ ಭೀಕರವಾಗಿ ಹತ್ಯೆಗೈದ ಪತಿ, ಎರಡು ಮಕ್ಕಳು ಅನಾಥ
ಬೈಕ್ನಲ್ಲಿ ಬಂದ ಇಬ್ಬರಿಂದ ಕೃತ್ಯ ಎಸಗಲಾಗಿದ್ದು, ನಿನ್ನೆ ರಾತ್ರಿ ವೇಳೆ 7 ಗಂಟೆಯ ಸಂಧರ್ಭದಲ್ಲಿ ನಡೆದಿತ್ತು. ಈ ಕುರಿತು ಬಾಣಸ್ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿತ್ತು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:07 pm, Wed, 18 October 23