Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು: ಸ್ಯಾಂಡಲ್​ವುಡ್​ ನಟಿ ರಾಧಿಕಾ ಎಸ್ಟೇಟ್​ನಲ್ಲಿ ಕೆಲಸಕ್ಕಿದ್ದ ಮಹಿಳೆ ನಿಗೂಢ ನಾಪತ್ತೆ

ಸ್ಯಾಂಡಲ್​ವುಡ್​ ನಟಿ ರಾಧಿಕಾ ಅವರ ಎಸ್ಟೇಟ್​ನಲ್ಲಿ ಕೆಲಸಕ್ಕಿದ್ದ ಮಹಿಳೆಯೋರ್ವರು (Wman) ಕಳೆದ ಒಂದು ವಾರದಿಂದ ಕಾಣೆಯಾಗಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಂಟ್ವಾಳ ತಾಲೂಕಿ ಅಮ್ಟೂರು ಗ್ರಾಮದ ರಾಯಪ್ಪನಕೋಡಿ ಬಳಿ ಇರುವ ನಟಿ ರಾಧಿಕ ಎಸ್ಟೇಟ್​ನಿಂದ ದಿಢೀರ್ ನಾಪತ್ತೆಯಾಗಿದ್ದಾರೆ.

ಮಂಗಳೂರು: ಸ್ಯಾಂಡಲ್​ವುಡ್​ ನಟಿ ರಾಧಿಕಾ ಎಸ್ಟೇಟ್​ನಲ್ಲಿ ಕೆಲಸಕ್ಕಿದ್ದ ಮಹಿಳೆ ನಿಗೂಢ ನಾಪತ್ತೆ
ನಾಪತ್ತೆಯಾದ ಮಹಿಳೆ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Oct 19, 2023 | 11:24 AM

ಮಂಗಳೂರು, (ಅಕ್ಟೋಬರ್ 19): ಸ್ಯಾಂಡಲ್​ವುಡ್​ ನಟಿ ರಾಧಿಕಾ (Sandalwood Actress Radhika) ಅವರ ಎಸ್ಟೇಟ್​ನಲ್ಲಿ ಕೆಲಸಕ್ಕಿದ್ದ ಮಹಿಳೆಯೋರ್ವರು (Wman) ಕಾಣೆಯಾಗಿದ್ದಾರೆ. ಮೂಲತಃ ಉತ್ತರಕನ್ನಡ (Uttara Kannada) ಜಿಲ್ಲೆಯ ಕುಮಟಾ ತಾಲೂಕಿನ ಮಾದನಗಿರಿ ನಿವಾಸಿ ಮಹಾದೇವ ಮಾರಿಪಟಗಾರ್ ಅವರ ಪತ್ನಿ ನಾಗರತ್ನ (33) ಕಾಣೆಯಾಗಿದ್ದಾರೆ. ಮಂಗಳೂರು (Mangaluru) ಜಿಲ್ಲೆಯ ಬಂಟ್ವಾಳ ತಾಲೂಕಿ ಅಮ್ಟೂರು ಗ್ರಾಮದ ರಾಯಪ್ಪನಕೋಡಿ ಎಂಬಲ್ಲಿ ನಟಿ ರಾಧಿಕಾ ಅವರ ಎಸ್ಟೇಟ್‌ ನಲ್ಲಿ ಕಳೆದ ಆರು ತಿಂಗಳ ಹಿಂದೆ ನಾಗರತ್ನ ಕೆಲಸಕ್ಕೆ ಸೇರಿದ್ದರು. ನಾಗರತ್ನ ಅವರ ಪತಿ ಮಹಾದೇವ ಮಾರಿಪಟಗಾರ್ ಅವರ ಜೊತೆಯಲ್ಲಿ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದರು. ಆದ್ರೆ, ಅಕ್ಟೋಬರ್ 13ರಂದು ನಾಗರತ್ನ ಏಕಾಏಕಿ ಎಸ್ಟೇಟ್​ನಿಂದ ಕಾಣೆಯಾಗಿದ್ದಾರೆ.

ಅಕ್ಟೋಬರ್ 13 ರಂದು ಗಂಡ ಹೆಂಡತಿ ಇಬ್ಬರು ಎಸ್ಟೇಟ್ ನಲ್ಲಿ ಕೆಲಸಕ್ಕೆ ಹೋಗಿದ್ದರು. ಆ ದಿನ ಬೆಳಿಗ್ಗೆ 10.30ರ ವೇಳೆಗೆ ಎಸ್ಟೇಟ್ ನಲ್ಲಿರುವ ಮನೆಗೆ ಚಾ ಕುಡಿಯಲು ಹೋಗಿ ಬರುತ್ತೇನೆ ‌ಎಂದು ಹೋದವಳು ಮತ್ತೆ ಕೆಲಸದ ಕಡೆ ಬಂದಿಲ್ಲ. ಇನ್ನು ಮನೆಯಿಂದ ನಾಪತ್ತೆಯಾಗಿದ್ದ ನಾಗರತ್ನ ಮರು ದಿನ ಅಂದರೆ ಅಕ್ಟೋಬರ್ 14 ರಂದು ಪತಿ ಮಹದೇವಗೆ ಕರೆ ಮಾಡಿ ದೂರ ಹೋಗುತ್ತಿದ್ದೇನೆ, ಹುಡುಕುವ ಅಗತ್ಯವಿಲ್ಲ ಎಂದು ಹೇಳಿ ಫೋನ್ ಕಟ್ಟಿ ಮಾಡಿದ್ದಾರೆ. ಬಳಿಕ ಆಕೆಯ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ.

ಇದನ್ನೂ ಓದಿ: ಮಂಗಳೂರು: ಕಾರು ಡಿಕ್ಕಿ, ಯುವತಿ ದುರ್ಮರಣ: ಐವರಿಗೆ ಗಂಭೀರ ಗಾಯ

ಈ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು‌ ದಾಖಲಾಗಿದ್ದು, ಚಹಾ ಕುಡಿಯಲು ಹೋದವಳು ಯಾಕೆ ಬಂದಿಲ್ಲ ಎಂದು ‌ಮನೆ ಕಡೆ ಹೋಗಿ‌ ನೋಡಿದಾಗ ಆಕೆ ಮನೆಯಲ್ಲಿರದೆ ಕಾಣೆಯಾಗಿದ್ದಳು ಎಂದು ಪತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ