ಜಿಎಸ್ಐ ವರದಿ: ಮತ್ತೆ ಶಿರೂರು ಗುಡ್ಡ ಕುಸಿಯುವ ಭೀತಿ, ವಾಹನ ಸಂಚಾರ ನಿಷೇಧ

| Updated By: ರಮೇಶ್ ಬಿ. ಜವಳಗೇರಾ

Updated on: Jul 22, 2024 | 10:40 PM

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿದು 10 ಜನ ಮೃತಪಟ್ಟಿದ್ದಾರೆ. ಈಗಾಗಲೇ ಏಳು ಶವಗಳು ಸಿಕ್ಕಿದ್ದು, ಇನ್ನೂ ಮೂರು ಮೃತದೇಹಗಳಿಗೆ ಹುಡುಕಾಟ ಮುಂದುವರೆದಿದೆ. ಆದ್ರೆ, ಇದರ ಮಧ್ಯ ಮತ್ತೆ ದೊಡ್ಡ ಮಟ್ಟದಲ್ಲಿ ಗುಡ್ಡ ಕುಸಿಯುವ ಆತಂಕ ಶುರುವಾಗಿದೆ.

ಜಿಎಸ್ಐ ವರದಿ: ಮತ್ತೆ ಶಿರೂರು ಗುಡ್ಡ ಕುಸಿಯುವ ಭೀತಿ, ವಾಹನ ಸಂಚಾರ ನಿಷೇಧ
ಶಿರೂರು ಗುಡ್ಡ ಕುಸಿತ
Follow us on

ಕಾರವಾರ, (ಜುಲೈ 22): ಶಿರೂರು ಬಳಿ ಮತ್ತೆ ದೊಡ್ಡ ಮಟ್ಟದಲ್ಲಿ ಗುಡ್ಡ ಕುಸಿಯುವ ಆತಂಕ ಶುರುವಾಗಿದೆ. 2 ದಿನದ ಹಿಂದೆ ಶಿರೂರು ಬಳಿ ಮಣ್ಣು ಪರೀಕ್ಷೆ ನಡೆಸಿದ್ದ ಜಿಎಸ್ಐ (ಜಿಯಾಲಾಜಿಕಲ್ ಸೆರ್ವೆ ಆಪ್ ಇಂಡಿಯ) ತಜ್ಞರು, ಮತ್ತಷ್ಟು ಗುಡ್ಡ ಕುಸಿಯುವ ಸಾಧ್ಯತೆಗಳಿವೆ ಎಂದು ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ವರದಿ ನೀಡಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಈ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಿದೆ. ಇನ್ನು ನಾಪತ್ತೆಯಾಗಿರುವ ಮೂವರ ಪತ್ತೆಗಾಗಿ ಇಸ್ರೋ ನೆರವಿನೊಂದಿಗೆ ಮುಂದೆ ಶೋಧ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಈಗಾಗಲೇ ಜಿಯಾಲಾಜಿಕಲ್ ಸೆರ್ವೆ ಆಪ್ ಇಂಡಿಯದವರು ಪರಿಶೀಲಿಸಿ ಪ್ರಾಥಮಿಕ ವರದಿ ನೀಡಿದ್ದು, ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ವಾಹನ ಸಂಚಾರ ಸದ್ಯಕ್ಕೆ ನೀಡಬಾರದೆಂದು ತಿಳಿಸಿದ್ದಾರೆ. ತಜ್ಞರ ತಂಡ ಇನ್ನೂ ಐದು ದಿನಗಳಲ್ಲಿ ಇನ್ನೊಂದು ರಿಪೋರ್ಟ್ ನೀಡಲಿದ್ದಾರೆ. ತಜ್ಞರ ಅಭಿಪ್ರಾಯದ ಮೇರೆಗೆ ಮುಂದೆ ನಿರ್ಧಾರ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಶಿರೂರು ದುರಂತ: ಕಾಣೆಯಾಗಿರುವ ಇನ್ನೂ ಮೂವರಿಗಾಗಿ ರಕ್ಷಣಾ ತಂಡಗಳಿಂದ ಎಡೆಬಿಡದೆ ಹುಡುಕಾಟ

ಅಂಕೋಲದ ಶಿರೂರು ರಾಷ್ಟ್ರೀಯ ಹೆದ್ದಾರಿ ಎರಡು ಬದಿಯ ಮಣ್ಣು ತೆರವು ಕಾರ್ಯ ನಡೆಸಲಾಗಿದೆ. ಈಗಾಗಲೇ ಶೇ. 70ರಷ್ಟು ಮಣ್ಣು ತೆರವು ಕಾರ್ಯಾಚರಣೆ ಮುಗಿದಿದೆ. ವಾಹನ ಇರುವ ಜಿಪಿಎಸ್ ಲೊಕೇಶನ್ ಇರುವ ಕಡೆ ಕ್ಲಿಯರ್ ಮಾಡಿದ್ದೇವೆ. ಆದ್ರೆ, 99 ಪರ್ಸೆಂಟ್​ ಆ ಭಾಗದಲ್ಲಿ ಗಾಡಿ ಇರಲಿಕ್ಕಿಲ್ಲ. ಈಗ ನಮ್ಮ ಶೋಧ ನದಿ ಸೈಡ್ ಮಾಡುತ್ತೇವೆ. ನೇವಿಯವರು ಈಗಾಗಲೇ ರೆಡಾರ್ ಇಟ್ಟು ಸರ್ಚ್ ಮಾಡಿದ್ದಾರೆ. ಅಲ್ಲದೇ ನೇವಿ ಡೈವರ್ಸ್ ಬಂದು ಕೆಳಗೆ ಹೋಗಿ ಪರಿಶೀಲನೆ ಮಾಡಲಿದ್ದಾರೆ ಎಂದು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ