ಈ ಫೋಟೋ ತೆಗೆದರೆ ದೇಣಿಗೆ ಕೊಡ್ತೀನಿ ಎಂದಿದ್ದ ಶಿವರಾಮ್ ಹೆಬ್ಬಾರ್: ಸಚಿವರ ವಿರುದ್ಧ ಭಕ್ತರಿಂದ ಮಾತಾಜಿ ನಿಂದನೆಯ ಆರೋಪ
ಜಾತ್ರೆಯ ಆಮಂತ್ರಣ ನೀಡಲು ಹೋಗಿದ್ದ ಗ್ರಾಮಸ್ಥರ ಎದುರು ಸಚಿವ ಶಿವರಾಮ್ ಹೆಬ್ಬಾರ್ ಬಸವಧಾಮದ ಬಸವೇಶ್ವರಿ ಮಾತಾ ಅವರನ್ನು ಏಕವಚನದಲ್ಲಿ ನಿಂದಿಸಿದ್ದಾರಂತೆ.
ಕಾರವಾರ: ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್(Shivaram Hebbar) ವಿರುದ್ಧ ನಿಂದನೆ ಆರೋಪ ಕೇಳಿ ಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಅತ್ತಿವೇರಿ ಬಸವಧಾಮದ ಬಸವೇಶ್ವರಿ ಮಾತಾ(Basavadhama Basaveshwara Mata) ಅವರನ್ನು ಸಚಿವರು ನಿಂದಿಸಿದ್ದಾರೆ ಎಂದು ಭಕ್ತರು ಆರೋಪಿಸಿದ್ದಾರೆ. ಹೀಗಾಗಿ ಈ ಸಂಬಂಧ ಮುಂಡಗೋಡಿನಲ್ಲಿ ಭಕ್ತರು ಪತ್ರಿಕಾಗೋಷ್ಠಿ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.
ಜಾತ್ರೆಯ ಆಮಂತ್ರಣ ನೀಡಲು ಹೋಗಿದ್ದ ಗ್ರಾಮಸ್ಥರ ಎದುರು ಸಚಿವ ಶಿವರಾಮ್ ಹೆಬ್ಬಾರ್ ಬಸವಧಾಮದ ಬಸವೇಶ್ವರಿ ಮಾತಾ ಅವರನ್ನು ಏಕವಚನದಲ್ಲಿ ನಿಂದಿಸಿದ್ದಾರಂತೆ. ಹೀಗಾಗಿ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಮಂತ್ರಣ ಪತ್ರಿಕೆಯಲ್ಲಿ ಬಸವೇಶ್ವರಿ ಮಾತೆಯ ಫೋಟೋ ಹಾಕಿದ್ದಕ್ಕೆ ಸಚಿವ ಶಿವರಾಮ್ ಆಕ್ಷೇಪ ವ್ಯಕ್ತಪಡಿಸಿದರಂತೆ. ಈಕೆ ವಿ.ಎಸ್.ಪಾಟೀಲರ ಪರವಾಗಿ ಪ್ರಚಾರ ಮಾಡುವವಳು, ಈಕೆಯ ಭಾವಚಿತ್ರ ಯಾಕೆ ಆಮಂತ್ರಣ ಪತ್ರಿಕೆಯಲ್ಲಿ ಹಾಕಿದ್ದೀರಿ? ಈಕೆಯ ಭಾವಚಿತ್ರ ತೆಗದುಕೊಂಡು ಬನ್ನಿ ಆಗ ಮಾತ್ರ ಲಕ್ಷ ರೂ. ದೇಣಿಗೆ ಕೊಡ್ತಿನಿ. ಇಲ್ಲವಾದಲ್ಲಿ ಕೊಡಲ್ಲ ಅಂತಾ ಹೇಳಿದ್ದಾರಂತೆ. ಹೀಗಾಗಿ, ಪತ್ರಿಕಾಗೋಷ್ಠಿ ನಡೆಸಿ ಹೆಬ್ಬಾರ್ ವಿರುದ್ಧ ಭಕ್ತರು ಆಕ್ರೋಶ ಹೊರ ಹಾಕಿದ್ದಾರೆ. ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ. ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಶಿವರಾಮ್ ಹೆಬ್ಬಾರ್ ವಿರುದ್ಧ ಆಕ್ರೋಶ ಕೇಳಿ ಬಂದಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:40 am, Mon, 30 January 23