ಅದು ಶತಮಾನಗಳ ಇತಿಹಾಸ ಹೊಂದಿರುವ ಶಾಲೆ. ಅಲ್ಲಿ ನಿತ್ಯ 250 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಈ ಶಾಲೆಗೆ ಆವರಣ ಗೊಡೆ ಇಲ್ಲದ ಹಿನ್ನೆಲೆ ರಾತ್ರಿ ಹೊತ್ತು ಶಾಲೆಯಲ್ಲಿ ಮದ್ಯಪಾನ, ಧೂಮಪಾನ ಮಾಡಿ ಎಲ್ಲೆಂದರಲ್ಲಿ ಬಾಟಲ್ ಹಾಗೂ ಸಿಗರೇಟ್ ಪಾಕೇಟ್ ಗಳನ್ನು ಬಿಸಾಕಿರ್ತಾರೆ. ಬೆಳಗ್ಗೆ ಬಂದು ವಿದ್ಯಾರ್ಥಿಗಳು ಅದನ್ನ ಕ್ಲೀನ್ ಮಾಡೊದೆ ಮಕ್ಕಳ ನಿತ್ಯ ಕಾಯಕವಾಗಿದ್ದು, ಆದಷ್ಟು ಬೇಗ ಕಂಪೌಂಡ್ ನಿರ್ಮಾಣ ಮಾಡಿ ಎಂದು ಟಿವಿ9 ಮುಂದೆ ಮಕ್ಕಳು ಅಳಲು ತೊಡಿಕೊಂಡಿದ್ಧಾರೆ. ಈ ಕುರಿತ ವರದಿ ಇಲ್ಲಿದೆ ನೋಡಿ.
ಮುಖ್ಯ ರಸ್ತೆಗೆ ಅಂಟಿಕೊಂಡಿರುವ ಐತಿಹಾಸಿಕ ಸರ್ಕಾರಿ ಶಾಲೆ. ತಾತ್ಕಾಲಿವಾಗಿ ಬಟ್ಟೆಯಿಂದ ನಿರ್ಮಾಣ ಆಗಿರುವ ಆವರಣ ಗೊಡೆ. ಎಲ್ಲೆಂದ್ರಲ್ಲಿ ಬಿದ್ದಿರುವ ಮಧ್ಯದ ಬಾಟಲ್.. ಈ ದೃಶ್ಯ ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಶಾಲೆಯಲ್ಲಿ..
ಹೌದು 153 ವರ್ಷಗಳ ಇತಿಹಾಸ ಹೊಂದಿರುವ ಸರ್ಕಾರಿ ಪ್ರೌಢ ಶಾಲೆ. ಜಿಲ್ಲೆಯ ಪ್ರಥಮ ಸರ್ಕಾರಿ ಪ್ರೌಢ ಶಾಲೆ ಎಂಬ ಹೆಗ್ಗಳಿಕೆ ಇದೆ. ಇದುವರೆಗೂ ಲಕ್ಷಾಂತರ ಜನ ವಿದ್ಯಾರ್ಥಿಗಳು ಓದು ಮುಗಿಸಿ ಉತ್ತಮ ಜೀವನ ರೂಪಿಸಿಕೊಂಡಿದ್ದಾರೆ. ಇವತ್ತಿಗೂ 250 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಓದುತ್ತಿದ್ದಾರೆ.
ಇಂತಹ ಉತ್ತಮ ಶಾಲೆ ಇದೀಗ ಮಾದಕ ವ್ಯಸನಿಗಳ ಹಾಟ್ ಸ್ಪಾಟ್ ಆಗಿದೆ. ಕಳೆದ ಏಳು ವರ್ಷಗಳ ಹಿಂದೆ ಕಾರವಾರ ನಗರದ ರಸ್ತೆ ಅಗಲೀಕರಣ ಮಾಡುವ ಸಂದರ್ಭದಲ್ಲಿ ಶಾಲೆಯ ಆವರಣ ಗೊಡೆಯನ್ನ ತೆಗೆದುಹಾಕಲಾಗಿತ್ತು. ಆದ್ರೆ ಇದುವರಗೂ ನಿರ್ಮಾಣ ಮಾಡದೆ ಹಿನ್ನೆಲೆ. ಶಾಲಾ ಆವರಣ ಮದ್ಯವ್ಯಸನಿಗಳ ತಾಣವಾಗಿದೆ. ನಿತ್ಯ ರಾತ್ರಿ ಮದ್ಯ ವ್ಯಸನಿಗಳು ಇಲ್ಲಸಲ್ಲದ ಚಟುವಟಿಕೆ ಮಾಡುತ್ತಾರೆ. ಎಲ್ಲೆಂದ್ರಲ್ಲಿ ಮದ್ಯದ ಬಾಟಲ್ ಹಾಗೂ ಸಿಗರೆಟ್ ತುಂಡುಗಳನ್ನು ಬಿಸಾಕಿರ್ತಾರೆ. ಶಾಲೆಗೆ ಬರುವ ವಿದ್ಯಾರ್ಥಿಗಳು ತಮ್ಮ ಕೈಯಿಂದಾನೆ ಅದನ್ನ ಕ್ಲಿನ್ ಮಾಡಬೇಕಿರುವ ಅನಿವಾರ್ಯತೆ ಇದೆ.
ಕಾರವಾರ ನಗರದ ಹೃದಯ ಭಾಗದಲ್ಲಿ ಈ ಶಾಲೆ ಇರುವುದರಿಂದ ಶಾಲೆಗೆ ಅಂಟಿಕೊಂಡಂತೆ ಮುಖ್ಯ ರಸ್ತೆ ಇದೆ. ಕಂಪೌಂಡ್ ಇಲ್ಲದ ಕಾರಣ ಮಕ್ಕಳು ಆಟ ಆಡುವಾಗ ರಸ್ತೆಗೆ ಹೋಗಿ ಆಕ್ಸಿಡೆಂಟ್ ಆಗಿರುವ ಅನೇಕ ಪ್ರಸಂಗಗಳು ನಡೆದಿವೆ. ಆದ್ರೆ ಇದುವರೆಗೂ ಶಾಶ್ವತ ಕಂಪೌಂಡ್ ನಿರ್ಮಾಣ ಮಾಡಿಕೊಡುವ ಕೆಲಸ ಆಗಿಲ್ಲ.
ಇನ್ನು ಮಕ್ಕಳ ಸುರಕ್ಷತೆಗಾಗಿ ಶಾಲೆಯ ಶಿಕ್ಷಕರೆ ತಮ್ಮ ಸ್ವಂತ ಹಣದಲ್ಲಿ ಬಟ್ಟೆಯಿಂದ ತಾತ್ಕಾಲಿಕ ಆವರಣ ಗೊಡೆಯನ್ನ ನಿರ್ಮಾಣ ಮಾಡಿಕೊಂಡಿದ್ದು, ಗೇಟ್ ಇಲ್ಲದ ಕಾರಣ ಮದ್ಯವ್ಯಸನಿಗಳು ಮಾತ್ರ ನಿತ್ಯ ಇಲ್ಲಿ ತಮ್ಮ ಚಟುವಟಿಕೆಗಳನ್ನು ಮುಂದುವರೆಸಿದ್ದು ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ದೊಡ್ಡ ತಲೆನೋವಾಗಿ ಪರಣಮಿಸಿದೆ.
ಒಟ್ಟಾರೆಯಾಗಿ ಮಕ್ಕಳ ಶಿಕ್ಷಣಕ್ಕಾಗಿ ಕೊಟ್ಯಾಂತರ ರೂಪಾಯಿ ವೆಚ್ಚ ಮಾಡುತ್ತಿರುವುದಾಗಿ ಹೇಳುತ್ತಿರುವ ಸರ್ಕಾರ ಆದಷ್ಟು ಬೇಗ ಕಂಪೌಂಡ್ ನಿರ್ಮಾಣ ಮಾಡಿಕೊಟ್ರೆ ಮಕ್ಕಳಿಗೆ ಸುರಕ್ಷತೆ ಓದಗಿಸುವುದರ ಜೊತೆಗೆ ಕಲಿಯಲು ಒಳ್ಳೆಯ ವಾತಾವರಣ ಕಲ್ಪಿಸಿಕೊಟ್ಟಂತಾಗುತ್ತದೆ.