ಸಿದ್ದರಾಮಯ್ಯ ದುರಹಂಕಾರಕ್ಕೆ ಏಕವಚನದಲ್ಲಿ ಮಾತಾಡುವುದೇ ಸರಿ: ಅನಂತಕುಮಾರ ಹೆಗಡೆ, ಸಂಸದ

ಸಿದ್ದರಾಮಯ್ಯ ವಿಷಯದಲ್ಲಿ ಉದ್ದೇಶಪೂರ್ವಕವಾಗಿ ಏಕವಚನದಲ್ಲಿ ಮಾತಾಡಿದ್ದೇನೆ, ಅವರಲ್ಲಿರುವ ದುರಹಂಕಾರಕ್ಕೆ ಏಕವಚನದಲ್ಲಿ ಮಾತಾಡುವುದೇ ಸೂಕ್ತ ಎಂದು ಸಂಸದ ಹೇಳಿದರು. ಹಾಗಾಗಿ ಕ್ಷಮೆ ಕೇಳುವದನ್ನಂತೂ ತಾನು ಮಾಡಲ್ಲ, ಅವರು ಕೇಸ್ ದಾಖಲಿಸುವುದಾದರೆ ದಾಖಲಿಸಿಕೊಳ್ಳಲಿ ಎಂದು ಅನಂತಕುಮಾರ ಹೆಗಡೆ ಹೇಳಿದರು.

ಸಿದ್ದರಾಮಯ್ಯ ದುರಹಂಕಾರಕ್ಕೆ ಏಕವಚನದಲ್ಲಿ ಮಾತಾಡುವುದೇ ಸರಿ: ಅನಂತಕುಮಾರ ಹೆಗಡೆ, ಸಂಸದ
|

Updated on: Jan 30, 2024 | 5:54 PM

ಕಾರವಾರ: ಉತ್ತರ ಕನ್ನಡ ಸಂಸತ್ ಸದಸ್ಯ ಅನಂತಕುಮಾರ ಹೆಗಡೆ (Ananth Kumar Hegde) ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ (Siddaramaiah) ಬಗ್ಗೆ ಅನುಚಿತವಾಗಿ ಮಾತಾಡಿರುವುದಕ್ಕೆ ಕ್ಷಮೆ ಕೇಳುವ (apologise) ಪ್ರಶ್ನೆಯೇ ಉದ್ಭವಿಸಲ್ಲ ಎಂದು ಹೇಳಿದರು. ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಮಾತಾಡಿದ ಹಗಡೆ, ಮುಖ್ಯಮಂತ್ರಿಯಾದವರು ದೇಶದ ರಾಷ್ಟ್ರಪತಿಯವರನ್ನು ಏಕವಚನದಲ್ಲಿ ಸಂಬೋಧಿಸಿತ್ತಾರೆ, ಅಮೇಲೆ ಕ್ಷಮೆ ಕೋರುವ ನಾಟಕವಾಡುತ್ತಾರೆ, ಸಿದ್ದರಾಮಯ್ಯನವರಲ್ಲಿರುವ ಸಭ್ಯತೆ, ಸಂಸ್ಕೃತಿಗೆ ಇದು ಕನ್ನಡಿ ಹಿಡಿಯುತ್ತದೆ ಎಂದು ಹೇಳಿದರು. ತಾನು ಸಿದ್ದರಾಮಯ್ಯರನ್ನು ಏಕವಚನದಲ್ಲಿ ಸಂಬೋಧಿಸಿದಾಗ ಮುಗುಬೀಳುವ ಜನ ಈಗ್ಯಾಕೆ ಸುಮ್ಮನಿದ್ದಾರೆ? ತಾನು ಉದ್ದೇಶಪೂರ್ವಕವಾಗಿ ಯಾರ ವಿರುದ್ಧವೂ ಏಕಚನದಲ್ಲಿ ಮಾತಾಡಲ್ಲ, ಅದು ತನ್ನ ಸಂಸ್ಕೃತಿ ಅಲ್ಲ; ಆದರೆ ಸಿದ್ದರಾಮಯ್ಯ ವಿಷಯದಲ್ಲಿ ಉದ್ದೇಶಪೂರ್ವಕವಾಗಿ ಹಾಗೆ ಮಾತಾಡಿದ್ದೇನೆ, ಅವರಲ್ಲಿರುವ ದುರಹಂಕಾರಕ್ಕೆ ಏಕವಚನದಲ್ಲಿ ಮಾತಾಡುವುದೇ ಸೂಕ್ತ ಎಂದು ಸಂಸದ ಹೇಳಿದರು. ಹಾಗಾಗಿ ಕ್ಷಮೆ ಕೇಳುವದನ್ನಂತೂ ತಾನು ಮಾಡಲ್ಲ, ಅವರು ಕೇಸ್ ದಾಖಲಿಸುವುದಾದರೆ ದಾಖಲಿಸಿಕೊಳ್ಳಲಿ ಎಂದು ಅನಂತಕುಮಾರ ಹೆಗಡೆ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us