ಕುಮಟಾ: ಬಾಳಿಗಾ ಕಾಲೇಜು ಆವರಣದಲ್ಲಿ ಪತ್ತೆಯಾಗಿದ್ದ ಡಮ್ಮಿ ಬಾಂಬ್, ನಿಟ್ಟುಸಿರು ಬಿಟ್ಟ ಜನ

| Updated By: ಆಯೇಷಾ ಬಾನು

Updated on: Oct 28, 2021 | 8:36 AM

ಕುಮಟಾದ ಕಾಲೇಜು ಬಳಿ ಯಾವುದೇ ಬಾಂಬ್ ಇಲ್ಲ. ಕಾಲೇಜು ಬಳಿ ಬಾಂಬ್ ಮಾದರಿಯ ವಸ್ತು ಮಾತ್ರ ಪತ್ತೆಯಾಗಿದೆ.

ಕುಮಟಾ: ಬಾಳಿಗಾ ಕಾಲೇಜು ಆವರಣದಲ್ಲಿ ಪತ್ತೆಯಾಗಿದ್ದ ಡಮ್ಮಿ ಬಾಂಬ್, ನಿಟ್ಟುಸಿರು ಬಿಟ್ಟ ಜನ
ಕುಮಟಾ: ಬಾಳಿಗಾ ಕಾಲೇಜು ಆವರಣದಲ್ಲಿ ಪತ್ತೆಯಾಗಿದ್ದ ಡಮ್ಮಿ ಬಾಂಬ್, ನಿಟ್ಟುಸಿರು ಬಿಟ್ಟ ಜನ
Follow us on

ಕಾರವಾರ: ನಿನ್ನೆ (ಆಗಸ್ಟ್ 27) ಜಿಲ್ಲೆಯ ಕುಮಟಾ ತಾಲೂಕಿನ ಬಾಳಿಗಾ ಕಾಲೇಜು ಆವರಣದಲ್ಲಿ ನಾಡ ಬಾಂಬ್ ರೂಪದ ವಸ್ತು ಪತ್ತೆ ಆಗಿತ್ತು. ಆಕೃತಿ ಬಾಂಬ್ ರೂಪದಲ್ಲಿ ಇರುವುದರಿಂದ ಸ್ಥಳಕ್ಕೆ ಅಗ್ನಿಶಾಮಕ, ಶ್ವಾನದಳ, ಪೊಲೀಸ್ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದರು. ಗೂ ಹೆಚ್ಚಿನ ಪೊಲೀಸ್ ನಿಯೋಜನೆ ಮಾಡಲಾಗಿತ್ತು. ಘಟನೆಯಿಂದ ಜನರಲ್ಲಿ ಆತಂಕ ಮನೆಮಾಡಿತ್ತು. ಆದ್ರೆ ಸದ್ಯ ಈಗ ಈ ಆತಂಕ ದೂರವಾಗಿದೆ. ಕುಮಟಾದಲ್ಲಿ ಪತ್ತೆಯಾಗಿದ್ದು ಡಮ್ಮಿ ಬಾಂಬ್ ಎನ್ನಲಾಗಿದೆ.

ಕುಮಟಾದ ಕಾಲೇಜು ಬಳಿ ಯಾವುದೇ ಬಾಂಬ್ ಇಲ್ಲ. ಕಾಲೇಜು ಬಳಿ ಬಾಂಬ್ ಮಾದರಿಯ ವಸ್ತು ಮಾತ್ರ ಪತ್ತೆಯಾಗಿದೆ. ಕುಮಟ ಪಟ್ಟದ ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜು ಹಿಂಬದಿ ಪತ್ತೆಯಾಗಿದ್ದ ಬಾಂಬ್ ಮಾದರಿಯ ವಸ್ತುವನ್ನು ಮಂಗಳೂರಿನಿಂದ ಆಗಮಿಸಿದ ಡಮ್ಮಿ ಬಾಂಬ್ ನಿಷ್ಕ್ರಿಯ ತಂಡ ನಿಷ್ಕ್ರಿಯಗೊಳಿಸಿದೆ. ಸದ್ಯ ಬಾಂಬ್ ಅಲ್ಲ ಎಂದು ತಿಳಿಯುತ್ತಿದ್ದಂತೆ ಜನ ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ: ಸೈಫ್​ ಪುತ್ರ ತೈಮೂರ್​ ರೀತಿಯೇ ಕಾಣುವ ಇನ್ನೊಬ್ಬ ಬಾಲಕನ ಫೋಟೋ ವೈರಲ್​; ಯಾರಿದು?

ಕುಮಟಾ: ಬಾಳಿಗಾ ಕಾಲೇಜು ಆವರಣದಲ್ಲಿ ನಾಡ ಬಾಂಬ್ ರೂಪದ ವಸ್ತು ಪತ್ತೆ

Published On - 8:33 am, Thu, 28 October 21