ಗೋಕರ್ಣದ ಓಂ ಬೀಚ್​ನಲ್ಲಿ ಸೆಲ್ಫಿ ತೆಗೆಯಲು ಹೋಗಿ ಹಾನಗಲ್​ನ ವ್ಯಕ್ತಿ ಸಮುದ್ರಪಾಲು

ವ್ಯಕ್ತಿಯನ್ನು ರಕ್ಷಿಸುವ ಯತ್ನದಲ್ಲಿ ಜೀವರಕ್ಷಕ ಸಿಬ್ಬಂದಿ ಸಹ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಗೋಕರ್ಣದ ಓಂ ಬೀಚ್​ನಲ್ಲಿ ಸೆಲ್ಫಿ ತೆಗೆಯಲು ಹೋಗಿ ಹಾನಗಲ್​ನ ವ್ಯಕ್ತಿ ಸಮುದ್ರಪಾಲು
ವ್ಯಕ್ತಿ ಸಮುದ್ರಪಾಲಾದ ಸ್ಥಳ
Follow us
TV9 Web
| Updated By: guruganesh bhat

Updated on:Sep 13, 2021 | 11:01 PM

ಕಾರವಾರ: ಸೆಲ್ಫಿ ತೆಗೆದುಕೊಳ್ಳಲು ಹೋದ ಪ್ರವಾಸಿಗನೋರ್ವ ಸಮುದ್ರಪಾಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಓಂ ಬೀಚ್‌ನಲ್ಲಿ ನಡೆದಿದೆ. ಕುಮಾರ್ ಶೇಕಪ್ಪ(35) ಎಂಬಾತನೇ ಸಮುದ್ರಪಾಲಾದ ದುರ್ದೈವಿ. ಕುಮಾರ್ ಶೇಕಪ್ಪ ಹಾವೇರಿ ಜಿಲ್ಲೆಯ ಹಾನಗಲ್ ನಿವಾಸಿ ಎಂಬ ಮಾಹಿತಿ ತಿಳಿದುಬಂದಿದ್ದು, ಒಟ್ಟು 12 ಜನರು ಹಾನಗಲ್‌ನಿಂದ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದರು. ಸಮುದ್ರದಲ್ಲಿನ ಅಪಾಯಕಾರಿ ಸ್ಥಳಕ್ಕೆ ಹೋಗಬಾರದು ಎಂದು ಕೆಂಪು ಬಾವುಟ ಹಾಕಿ ಎಚ್ಚರಿಕೆ ವಿಧಿಸಿದ್ದರೂ ಸ್ಥಳಕ್ಕೆ ಕುಮಾರ್ ಶೇಕಪ್ಪ ಮತ್ತು ಕೆಲವು ಯುವಕರು ತೆರಳಿದ್ದರು.

ಈ ವೇಳೆ ಕುಮಾರ್ ಶೇಕಪ್ಪ ಕಮಾಟಿ ಸಮುದ್ರಪಾಲಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ವ್ಯಕ್ತಿಯನ್ನು ರಕ್ಷಿಸುವ ಯತ್ನದಲ್ಲಿ ಜೀವರಕ್ಷಕ ಸಿಬ್ಬಂದಿ ಸಹ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 

ಅಮೆರಿಕದ ನಾಸಾ ಫ್ಯೂಚರ್ ಇನ್ವೆಸ್ಟಿಗೇಟರ್ ಪ್ರಶಸ್ತಿಗೆ ಆಯ್ಕೆಯಾದ ಉತ್ತರ ಕನ್ನಡದ ದಿನೇಶ್ ವಸಂತ ಹೆಗಡೆ

Karnataka Weather Today: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಇಂದು ಭಾರೀ ಮಳೆ ಸಾಧ್ಯತೆ

(Gokarna Om Beach Man died when taking selfie)

Published On - 4:03 pm, Sat, 21 August 21