ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ, ವಿ.ಎಸ್ ಪಾಟೀಲ್​​ರನ್ನು ಅಧಿಕಾರದಿಂದ ರದ್ದುಪಡಿಸಿದ ಸರ್ಕಾರ

| Updated By: ವಿವೇಕ ಬಿರಾದಾರ

Updated on: Aug 24, 2022 | 2:48 PM

ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ, ಮಾಜಿ ಶಾಸಕ ವಿ.ಎಸ್ ಪಾಟೀಲ್​ರನ್ನು ಅಧಿಕಾರದಿಂದ ರದ್ದುಪಡಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್ ಅಧಿಸೂಚನೆ ಹೊರಡಿಸಿದ್ದಾರೆ.

ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ, ವಿ.ಎಸ್ ಪಾಟೀಲ್​​ರನ್ನು ಅಧಿಕಾರದಿಂದ ರದ್ದುಪಡಿಸಿದ ಸರ್ಕಾರ
ಮಾಜಿ ಶಾಸಕ ವಿ.ಎಸ್​ ಪಾಟೀಲ್​​
Follow us on

ಉತ್ತರ ಕನ್ನಡ: ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ (NWKSRTC) ಅಧ್ಯಕ್ಷ, ಮಾಜಿ ಶಾಸಕ ವಿ.ಎಸ್ ಪಾಟೀಲ್​ರನ್ನು ಅಧಿಕಾರದಿಂದ ರದ್ದುಪಡಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್ ಅಧಿಸೂಚನೆ ಹೊರಡಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ (Uttar Kannada) ಯಲ್ಲಾಪುರ (Yallapur) ಕ್ಷೇತ್ರದ ಮಾಜಿ ಶಾಸಕ ವಿ.ಎಸ್ ಪಾಟೀಲ್ (V S Patil) ಈ ಹಿಂದೆ ಬಿಜೆಪಿಯಲ್ಲಿ ಇದ್ದುಕ್ಕೊಂಡು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದರು. ಭೇಟಿ ವೇಳೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ಇಂಗಿತ ವ್ಯಕ್ತಪಡಿಸಿದ್ದರು.

ಮಾಟಾ ಮಂತ್ರ ಮಾಡಿ ಹಣ ದೋಚಿದ್ದಾರೆ ಎಂದು ಕಥೆ ಕಟ್ಟಿ ದೂರು ನೀಡಿದ್ದ ಆರೋಪಿಯ ಬಂಧನ

ಆನೆಕಲ್​: ಮಾಟಾ ಮಂತ್ರ ಮಾಡಿ 24 ಲಕ್ಷ ರೂ ಹಣ ದೋಚಿದ್ದಾರೆ ಎಂದು ಕಥೆ ಕಟ್ಟಿ ದೂರು ನೀಡಿದ್ದ ಆರೋಪಿಯನ್ನು ಬನ್ನೇರುಘಟ್ಟ ಪೊಲೀಸರು ಬಂಧಿಸಿದ್ದಾರೆ. ಬನ್ನೇರುಘಟ್ಟ ನಿವಾಸಿ ಶಂಕರಪ್ಪ ಬಂಧಿತ ಆರೋಪಿ. ಬನ್ನೇರುಘಟ್ಟ ನಿವಾಸಿ ಶಂಕರಪ್ಪ ಚೀಟಿ ವ್ಯವಹಾರ ನಡೆಸುತ್ತಿದ್ದನು. ವ್ಯವಹಾರಕ್ಕೆ ಸಾಲ ಮಾಡಿಕೊಂಡಿದ್ದ ಶಂಕರಪ್ಪ ಸಾಕಷ್ಟು ನಷ್ಟ ಅನುಭವಿಸಿದ್ದನು. ಇದರಿಂದ ಸಾಲಗಾರರ ಕಾಟ ತಡೆಯಲಾಗದೆ ಶಂಕರಪ್ಪ ಸಂಚು ರೂಪಿಸಿದ್ದನು.

ಅಲ್ಲದೇ ಸೈಟ್ ಖರೀದಿ ಮಾಡಬೇಕೆಂದು ಶಂಕರಪ್ಪ ಸ್ನೇಹಿತ ಗುರುಪ್ರಸಾದ್ 24 ಲಕ್ಷ ರೂ ಹಣ ಪಡೆದಿದ್ದನು. ಆದರೆ ಇತ್ತಿಚೆಗೆ ಸಾಲಗಾರರ ಕಾಟ‌ ಹೆಚ್ಚಾಗಿದ್ದರಿಂದ ಮನೆಯಲ್ಲಿದ್ದ ಹಣವನ್ನು ತೆಗೆದುಕೊಂಡು ಸಾಲಗಾರರಿಗೆ ನೀಡಿದ್ದನು. ಬಳಿಕ ಹಣ ಕಳ್ಳತನ ಆಯ್ತು ಎಂದು ನಾಟಕ ಮಾಡಿದ್ದನು.

ಹಣ ಕಳ್ಳತನವಾಗಿದೆ ಎಂದು ಬನ್ನೇರುಘಟ್ಟ ಪೊಲೀಸರಿಗೆ ದೂರು ನೀಡಿದ್ದನು. ಪೊಲೀಸರಿಗೆ ಮನೆಯ ಮುಂದೆ ವಾಮಾಚಾರ ಮಾಡಿ ಪತ್ರ ಒಂದನ್ನು ಬರೆದು ಇಟ್ಟಿದ್ದಾರೆ. ಹಣ ಕಳೆದು ಹೋಗಿರುವ ಬಗ್ಗೆ ಯಾರಿಗಾದರೂ ತಿಳಿಸಿದರೆ ಮನೆಯಲ್ಲಿದ್ದವರು ಸತ್ತು ಹೋಗುತ್ತಿರಾ ಎಂದು ಪತ್ರದಲ್ಲಿ ಬರೆದಿದ್ದಾರೆ ಎಂದು ಹೇಳಿದನು.

ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆಗೆ ಇಳಿದಿದ್ದರು. ಪೊಲೀಸರ ತನಿಕೆ ವೇಳೆ ಮನೆಯ ಬಾಗಿಲು ಮುರಿಯದೆ ಬೀಗ ಒಡೆಯದೇ ಕಳ್ಳತನ ಮಾಡಲಾಗಿತ್ತು. ಮನೆ ಮುಂಬಾಗಿಲು, ಕಬಾರ್ಡ್‌ ಎಲ್ಲವೂ ಸರಿಯಾಗಿತ್ತು. ಬೀಗ ತೆಗೆದು ಸಲೀಸಾಗಿ ಹಣ ತೆಗೆದಿರುವ ಶಂಕೆ ಪೊಲೀಸರಿಗೆ ವ್ಯಕ್ತವಾಯಿತು. ಇದರಿಂದ ಪೊಲೀಸರು ಶಂಕ್ರಪ್ಪನ ಮೇಲೆಯೇ ಅನುಮಾನ ಗೊಂಡು ತನಿಖೆ ನಡೆಸಿದರು. ಈ ವೇಳೆ ಸಂಪೂರ್ಣ ವೃತ್ತಾಂತ ಹೇಳಿದ್ದಾನೆ. ಸಾಲಗಾರರಿಗೆ ಹಣ ನೀಡಿರುವುದಾಗಿ, ಮನೆ ಮುಂದೆ ಪತ್ರ ಬರೆದಿದ್ದು ತಾನೆ ಎಂದು ಪೊಲೀಸರ ಮುಂದೆ ಶಂಕರಪ್ಪ ಸತ್ಯ ಒಪ್ಪಿಕೊಂಡಿದ್ದಾನೆ. ಬನ್ನೇರುಘಟ್ಟ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ