ಉತ್ತರ ಕನ್ನಡ: ಸೇತುವೆ ದಾಟುತ್ತಿದ್ದಾಗ ಗಂಗಾವಳಿ ನದಿಯಲ್ಲಿ ಕೊಚ್ಚಿಹೋದ ಲಾರಿ; ಐವರ ರಕ್ಷಣೆ

TV9 Web
| Updated By: ವಿವೇಕ ಬಿರಾದಾರ

Updated on:Aug 24, 2022 | 9:05 PM

ಯಲ್ಲಾಪುರ ತಾಲೂಕಿನ ಅರಬೈಲ್ ಗ್ರಾಮ ಬಳಿ ಸೇತುವೆ ದಾಟುತ್ತಿದ್ದಾಗ ಗಂಗಾವಳಿ ನದಿಯಲ್ಲಿ ಲಾರಿಯೊಂದು ಕೊಚ್ಚಿಹೋಗಿದೆ.

ಉತ್ತರ ಕನ್ನಡ: ಯಲ್ಲಾಪುರ (Yallapur) ತಾಲೂಕಿನ ಅರಬೈಲ್ ಗ್ರಾಮ ಬಳಿ ಸೇತುವೆ (Bridge) ದಾಟುತ್ತಿದ್ದಾಗ ಗಂಗಾವಳಿ ನದಿಯಲ್ಲಿ ಲಾರಿಯೊಂದು (Lorry) ಕೊಚ್ಚಿಹೋಗಿದೆ. ಕೊಚ್ಚಿಹೋದ ಲಾರಿಯಲ್ಲಿ ತೆರಳುತ್ತಿದ್ದವರ ಪೈಕಿ ಐವರನ್ನು ರಕ್ಷಣೆ ಮಾಡಿದ್ದು, ಮತ್ತೊಬ್ಬ ನಾಪತ್ತೆಯಾಗಿದ್ದಾರೆ. ಗುಳ್ಳಾಪುರ ನಿವಾಸಿಗಳು ಬೋಟ್ ಸಹಾಯದಿಂದ ರಾಜೇಶ್ ಹರಿಕಂತ್ರ (ಡ್ರೈವರ್), ಸುನಿಲ್, ರಾಜು, ಶಿವಾನಂದ, ದಿನೇಶ್ 5 ಮಂದಿಯನ್ನು ರಕ್ಷಣೆ ಮಾಡಿದ್ದಾರೆ.

ನಾಪತ್ತೆಯಾಗಿರುವ ಸಂದೀಪ್‌ಗಾಗಿ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು, ಮೀನುಗಾರರಿಂದ ಶೋಧ ಕಾರ್ಯ ಮುಂದುವರೆದಿದೆ. ಯಲ್ಲಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕುಮಾರಧಾರಾ ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಶವ ಪತ್ತೆ

ದಕ್ಷಿಣ ಕನ್ನಡ: ಕುಮಾರಧಾರಾ ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಶವ ಪತ್ತೆಯಾಗಿದೆ. ಸತತ ನಾಲ್ಕು ದಿನ ಕಾರ್ಯಾಚರಣೆ ಬಳಿಕ ಬೆಂಗಳೂರಿನ ದೀಪಾಂಜಲಿನಗರದ ನಿವಾಸಿ ಶಿವು(25) ಶವ ಪತ್ತೆಯಾಗಿದೆ. ಮೂಲತಃ ಮಂಡ್ಯದ ಶಿವು ಸ್ನೇಹಿತರ ಜೊತೆ ಕುಕ್ಕೆ ಸುಬ್ರಹ್ಮಣ್ಯ ಯಾತ್ರೆಗೆ ಬಂದಿದ್ದನು. ಈ ವೇಳೆ ಯುವಕ ಶಿವು ಸ್ನಾನಕ್ಕೆ ಇಳಿದಿದ್ದಾಗ ಕೊಚ್ಚಿಹೋಗಿದ್ದನು. ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಯುವಕನಿಗಾಗಿ ಸುಮಾರು 15 ಜನ ನುರಿತ ಈಜುಗಾರರು, ಅಗ್ನಿಶಾಮಕದಳ, ಪೊಲೀಸರು, ಸ್ಥಳೀಯರು ಸೇರಿ ನಾಲ್ಕು ದಿನದಿಂದ ಹುಡುಕಾಟ ನಡೆಸಿದ್ದರು. ಈಗ ಯುವಕನ ಮೃತದೇಹ ಪತ್ತೆಯಾಗಿದೆ.

Published on: Aug 24, 2022 08:52 PM