ಕಾರವಾರ: ಅಜ್ಜನಿಂದಲೇ ಮೊಮ್ಮಗನ ಕಿಡ್ನಾಪ (Kidnapped) ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಕೊಟ್ಟ ಹಣ ವಾಪಾಸ್ ಪಡೆಯಲು ಖತರ್ನಾಕ್ ಅಜ್ಜ ತನ್ನ ಮೊಮ್ಮಗನನ್ನ ಕಿಡ್ನಾಪ ಮಾಡಿಸಿದ. ಭಟ್ಕಳದಲ್ಲಿ 20 ನೇ ತಾರೀಖು ರಾತ್ರಿ ವೇಳೆ ಎಂಟು ವರ್ಷದ ಬಾಲಕನನ್ನು ಕಿಡ್ನಾಪ ಮಾಡಲಾಗಿತ್ತು. ಭಟ್ಕಳದ ಆಜಾದ ನಗರದಲ್ಲಿ ಅಲಿ ಇಸ್ಲಾಂ ಸಾದಾ (8) ಬಾಲಕನನ್ನು ಕಿಡ್ನಾಪ ಮಾಡಲಾಗಿತ್ತು. ಇಂದು ಗೋವಾದ ಕಲ್ಲಂಗುಟ್ ಬೀಚ್ ಸಮೀಪ ಬಾಲಕ ಪತ್ತೆಯಾಗಿದ್ದಾನೆ. ಬಾಲಕನ ಜೊತೆಗಿದ್ದ ಓರ್ವ ಆರೋಪಿ ಬಂಧನ ಮಾಡಲಾಗಿದೆ. ಭಟ್ಕಳ ಬದ್ರಿಯಾ ನಗರದ ಅನಿಸ್ ಭಾಷಾ ಬಂಧಿತ. ಇನ್ನೂ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ಒಟ್ಟು ನಾಲ್ವರು ಅಪಹರಣ ಮಾಡಿದ್ದರು.
ಇದನ್ನೂ ಓದಿ: Accident: ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ: ಅಪಘಾತದಲ್ಲಿ ಅಕ್ಕ-ತಮ್ಮ ದುರ್ಮರಣ
ಬಾಲಕನ ತಂದೆ ಮತ್ತು ಮಾವನ ನಡುವೆ ಹಣಕಾಸಿನ ವ್ಯವಹಾರ ಸಂಬಂಧವಾಗಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಪ್ರಮುಖ ಆರೋಪಿ ಇನಾಯತ್ ಉಲ್ಲಾ ತಾಯಿಯ ಸಂಬಂಧಿ. ಈ ಹಿಂದೆ ಕೂಡ ಬಾಲಕನ ತಂದೆಗೆ ಬೆದರಿಕೆ ಹಾಕಲಾಗಿತ್ತು ಎಂದು ಎಸ್ಪಿ ಸುಮನ್ ಪೆನ್ನೆಕರ್ ಮಾಹಿತಿ ನೀಡಿದರು. ಇನ್ನೂ ನಾಲ್ವರು ಆರೋಪಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹಳೆ ದ್ವೇಷ ಹಿನ್ನೆಲೆ ಯುವಕನ ಮೇಲೆ ಹಲ್ಲೆ
ಶಿವಮೊಗ್ಗ: ತಡರಾತ್ರಿ ಬೈಕ್ ಅಡ್ಡಗಟ್ಟಿ ಯುವಕನ ಮೇಲೆ ಹಲ್ಲೆ ಮಾಡಿರುವಂತಹ ಘಟನೆ ತಾಲೂಕಿನ ಕೋಟೆ ಗಂಗೂರು ಗ್ರಾಮದಲ್ಲಿ ನಡೆದಿದೆ. ಕೀಜರ್(29) ಹಲ್ಲೆಗೊಳಗಾದ ಯುವಕ. ಜೂಜಾಟದ ವಿಚಾರವಾಗಿ ಗಲಾಟೆ ನಡೆದಿದ್ದು, ಭಾಸ್ಕರ್ ಮತ್ತು ತಂಡದಿಂದ ಕೀಜರ್ ಮೇಲೆ ಲಾಂಗ್ನಿಂದ ಹಲ್ಲೆ ಮಾಡಲಾಗಿದೆ ಎನ್ನಲಾಗುತ್ತಿದೆ. ಕೀಜರ್ ಮೇಲಿನ ಹಲ್ಲೆಗೆ ಪ್ರತಿಯಾಗಿ ಮತ್ತೊಂದು ಗುಂಪು ದಾಂದಲೆ ಮಾಡಲಾಗಿದೆ. ಸೋಮಿನಕೊಪ್ಪ ಅಫ್ರಿದಿ, ಸೈಯದ್, ಅಫ್ಸರ್ ಗ್ಯಾಂಗ್ನಿಂದ ಗಲಾಟೆ ಮಾಡಿದ್ದು, ಲೋಕೇಶ್ಗೆ ಸೇರಿದ ಕಾರು, ಬೈಕ್ ಮೇಲೆ ರಾಡ್ನಿಂದ ದಾಳಿ ಮಾಡಲಾಗಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ತಮ್ಮ ಶಿಷ್ಯ ಜಮೀರ್ ಅಹ್ಮದ್ಗೆ ಹಂದಿ ಮಾಂಸ ತಿನ್ನಿಸಿ ತೋರಿಸಲಿ: ಪ್ರತಾಪ್ ಸಿಂಹ
ಕೋಟೆ ಗಂಗೂರು ಗ್ರಾಮದ ಲೋಕೇಶ್ಗೆ ಸೇರಿದ ಕಾರು, ಬೈಕ್ ಜಖಂ ಆಗಿವೆ. ದೂರು ಕೊಟ್ಟರೆ ಕಾರಿಗೆ ಬೆಂಕಿ ಹಚ್ಚುವುದಾಗಿ ಗ್ಯಾಂಗ್ ಬೆದರಿಕೆ ಹಾಕಿದೆ. ಹಳೆ ದ್ವೇಷ ಹಿನ್ನೆಲೆಯಲ್ಲಿ ದಾಂದಲೆ ನಡೆಸಿದ ಆರೋಪ ಮಾಡಿದ್ದು, ಸೈಯದ್, ಅಫ್ರಿದಿ ಕೊಲೆ ಪ್ರಕರಣದ ಆರೋಪಿಗಳಾಗಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.