ಬೆಳಿಗ್ಗೆ ನಮಾಜ್‌ಗೆ ಅನುಕೂಲವಾಗಲು ಪರೀಕ್ಷೆ ವೇಳಾಪಟ್ಟಿಯನ್ನೇ ಶಿಕ್ಷಣ ಇಲಾಖೆ ಬದಲಾಯಿಸಿದೆ-ಹಿಂದೂ ಮುಖಂಡ ಗಂಭೀರ ಆರೋಪ
ಕಾಂಗ್ರೆಸ್ ಸರ್ಕಾರದ ನಿರ್ದೇಶನದಂತೆ ಮುಸ್ಲಿಂ ತುಷ್ಠೀಕರಣಕ್ಕಾಗಿ ರಾಜ್ಯ ಶಿಕ್ಷಣ ಇಲಾಖೆ, ಎಸ್ಎಸ್ಎಲ್ಸಿ ಪೂರ್ವ ಸಿದ್ದತಾ ವೇಳಾ ಪಟ್ಟಿಯ ಸಮಯವನ್ನೇ ಬದಲಾಯಿಸಿದೆ ಎಂಬ ಆರೋಪ ಕೇಳಿಬಂದಿದೆ. ಶಿಕ್ಷಣ ಕ್ಷೇತ್ರದಲ್ಲೂ ನೇರವಾಗಿ ಸರಕಾರ ಮುಸ್ಲಿಂ ತುಷ್ಠೀಕರಣದ ನಡೆಸುತ್ತಿದೆ ಎಂದು ಹಿಂದೂ ಮುಖಂಡರು ಖಂಡಿಸಿದ್ದು, ಗಂಭೀರ ಆರೋಪ ಮಾಡಿದ್ದಾರೆ.

ಉತ್ತರ ಕನ್ನಡ, ಫೆ.04: ಎಸ್‌ಎಸ್ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಯ(SSLC Preparatory Exam)ವೇಳಾಪಟ್ಟಿಯಲ್ಲಿ ಮುಸ್ಲಿಂ ತುಷ್ಠೀಕರಣ ಆರೋಪ ಕೇಳಿಬಂದಿದೆ. ಭಟ್ಕಳದ ಹಿಂದೂ ಮುಖಂಡ ಶ್ರೀಕಾಂತ ನಾಯ್ಕ ಎಂಬುವವರು ಸರಕಾರದ ನಿಯಮವನ್ನು ಖಂಡಿಸಿದ್ದಾರೆ. ಫೆಬ್ರವರಿ 26 ರಿಂದ ಮಾರ್ಚ್ 3ರವರೆಗೆ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡಲಾಗಿದ್ದು, ಅದರಲ್ಲಿ ಎಲ್ಲಾ ಪರೀಕ್ಷೆಯನ್ನು ಕೂಡ ಬೆಳಗ್ಗೆ 10.15ಕ್ಕೆ ನಡೆಸಿದರೆ, ಶುಕ್ರವಾರ ನಡೆಯಲಿರುವ ವಿಜ್ಞಾನ ಪರೀಕ್ಷೆಯನ್ನು ಮಾತ್ರ ಮಧ್ಯಾಹ್ನ 2 ಗಂಟೆಗೆ ಪ್ರಾರಂಭಿಸಲಾಗಿದೆ. ಇದೇ ಈಗ ವಿವಾದಕ್ಕೆ ಕಾರಣವಾಗಿದೆ.
ಬೆಳಿಗ್ಗಿನ ನಮಾಜ್‌ಗೆ ಅನುಕೂಲ ಮಾಡಿಕೊಡಲು ವೇಳಾಪಟ್ಟಿ ಬದಲಾವಣೆ ಎಂಬ ಆರೋಪ
ಕಾಂಗ್ರೆಸ್ ಸರ್ಕಾರದ ನಿರ್ದೇಶನದಂತೆ ಮುಸ್ಲಿಂ ತುಷ್ಠೀಕರಣಕ್ಕಾಗಿ ರಾಜ್ಯ ಶಿಕ್ಷಣ ಇಲಾಖೆ ಸಮಯ ಬದಲಾಯಿಸಿದೆ. ಬೆಳಿಗ್ಗಿನ ನಮಾಜ್‌ಗೆ ಅನುಕೂಲ ಮಾಡಿಕೊಡಲು ಪರೀಕ್ಷೆಯ ವೇಳಾಪಟ್ಟಿಯನ್ನೇ ಸರಕಾರ ಬದಲಾಯಿಸಿದೆ. ಶಿಕ್ಷಣ ಕ್ಷೇತ್ರದಲ್ಲೂ ನೇರವಾಗಿ ಸರಕಾರ ಮುಸ್ಲಿಂ ತುಷ್ಠೀಕರಣದ ನಡೆಸುತ್ತಿದೆ ಎಂದು ಹಿಂದೂ ಮುಖಂಡರು ಖಂಡಿಸಿದ್ದು, ಶಿಕ್ಷಣ ಇಲಾಖೆ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ:ಭಟ್ಕಳದಲ್ಲಿ ಮುಂದುವರಿದ ಹಿಂದೂ ಮುಸ್ಲಿಂ ಸಂಘರ್ಷ: ಹಿಂದೂ ಕಾರ್ಯಕರ್ತರಿಗೆ ದುಬೈನಿಂದ ಬೆದರಿಕೆ
ಇನ್ನು ಈ ಕುರಿತು ಹಿಂದೂ ಮುಖಂಡ ಭಾಸ್ಕರನ್ ಮಾತನಾಡಿ, ‘ಶಿಕ್ಷಣದಲ್ಲೂ ರಾಜಕೀಯ ಬೆಳೆಯುತ್ತಿದೆ. ಎಲ್ಲ ಧರ್ಮಗಳನ್ನು ಸರ್ಕಾರ ಸಮಾನವಾಗಿ ನೋಡಬೇಕು. ಆದರೆ, ಹಿಂದೂ- ಮುಸ್ಲಿಮರ ನಡುವೆ ಕಂದಕ ಸೃಷ್ಟಿಸಲು ಕಾಂಗ್ರೆಸ್ ಸರ್ಕಾರ ಯತ್ನಿಸುತ್ತಿದೆ. ಇದು ತಾಂತ್ರಿಕ ಕಾರಣಗಳಿಗೆ ಈ ರೀತಿ ಮಾಡಿದಂತಿಲ್ಲ. ಮುಸ್ಲಿಮರ ಓಲೈಕೆಗೆ ಶಾದಿ ಭಾಗ್ಯ ಮಾಡಿದ್ದ ಇವರು, ಈಗ ಶಾಲಾ ಕೊಠಡಿಗಳಲ್ಲಿ ನಮಾಜ್‌ಗೂ ಅವಕಾಶ ಮಾಡಿಬಿಡಲಿ ಎಂದು ವಾಗ್ದಾಳಿ ನಡೆಸಿದರು.
ಧರ್ಮದ ತುಷ್ಠೀಕರಣ ಇಲ್ಲ ಎಂದ ಕರ್ನಾಟಕ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ
ಮಾರ್ಚ್ 1ರಂದು ಪಿಯುಸಿ ಮುಖ್ಯ ಪರೀಕ್ಷೆ ನಡೆಯಲಿದ್ದು, ಅದೇ ದಿನ ಶುಕ್ರವಾರ ಕನ್ನಡ ಹಾಗೂ ಅರೇಬಿಕ್ ಪರೀಕ್ಷೆ ಇದೆ. ಬೆಳಗ್ಗೆ 10.15ಕ್ಕೆ ಪರೀಕ್ಷೆ ಆರಂಭವಾಗಿ 1.30ಕ್ಕೆ ಮುಕ್ತಾಯವಾಗಲಿದೆ. ಹೀಗಾಗಿ ಮಾರ್ಚ್ 1ರಂದು ಎಸ್ಎಸ್ಎಲ್ ಸಿ ಪೂರ್ವ ಸಿದ್ಧತಾ ಪರೀಕ್ಷೆ ಮಧ್ಯಾಹ್ನ 2 ಗಂಟೆಗೆ ಪ್ರಾರಂಭ ಮಾಡಲಾಗಿದೆ. ಯಾವುದೇ ನಮಾಜ್‌ಗೆ ಅನುಕೂಲ ಹಾಗೂ ಧರ್ಮದ ತುಷ್ಠೀಕರಣ ಇಲ್ಲ ಎಂದು ಕರ್ನಾಟಕ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ಸ್ಪಷ್ಟನೆ ನೀಡಿದೆ, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ಹಿನ್ನಲೆ ನಾಳೆ ಈ ಬಗ್ಗೆ ಇಲಾಖೆಯಿಂದ ಅಧಿಕೃತ ಸ್ಪಷ್ಟಿಕರಣ ನೀಡುವ ಸಾಧ್ಯತೆಯಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:04 pm, Sun, 4 February 24