ಉತ್ತರ ಕನ್ನಡ, ಮೇ.22: ರಾಜ್ಯದ ಹಲವೆಡೆ ಈ ಬಾರಿ ಮುಂಚಿತವಾಗಿಯೇ ಮಳೆಯಾಗಿದೆ. ಬಿಸಿಲಿನ ಬೇಗೆಯಿಂದ ಬೇಯುತ್ತಿದ್ದ ಹಲವೆಡೆ ವರುಣನ ಆಗಮನದಿಂದ ಸ್ವಲ್ಪ ಮಟ್ಟಿಗಾದರೂ ತಂಪಾಗಿದೆ. ಆದ್ರೆ, ಉತ್ತರ ಕನ್ನಡ(Uttara Kannada) ಜಿಲ್ಲೆಯ ಕರಾವಳಿ ಭಾಗದಲ್ಲಿ ಮಾತ್ರ ಇನ್ನೂ ಮಳೆಯ ಆಗಮನವಾಗಿಲ್ಲ. ಇದರಿಂದ ದಿನೇ ದಿನೇ ತಾಪಮಾನ ಹೆಚ್ಚಾಗುತ್ತಿದೆ. ಕಳೆದ ಮೂರು ದಿನದಿಂದ ಕಾರವಾರದಲ್ಲಿ ಗರಿಷ್ಟ 38 ಡಿಗ್ರಿ ತಾಪಮಾನ ದಾಟಿದೆ. ಈ ಹಿನ್ನಲೆ ನಗರದಲ್ಲಿ ಸೆಕೆ ತಡೆಯಲಾಗದೆ ಜನರು ಪರದಾಡುವ ಪರಿಸ್ಥಿತಿ ಉದ್ಬವಿಸಿದೆ.
ಇನ್ನು ಆಗಾಗ ವಿದ್ಯುತ್ ವ್ಯತ್ಯಯ ಮಾಡುವುದರಿಂದ ಫ್ಯಾನ್, ಎಸಿ ಆಫ್ ಆಗುತ್ತಿದ್ದು, ಸೆಕೆಯನ್ನ ತಾಳಲಾರದೆ ಮನೆಯಲ್ಲಿ ಇರುವುದಕ್ಕೂ ಆಗುತ್ತಿಲ್ಲ. ಇತ್ತ ಬಿಸಿಲಿನ ಬೆಗೆಗೆ ಮನೆಯಿಂದ ಹೊರಗೆ ಹೆಜ್ಜೆ ಇಡುವುದಕ್ಕೂ ಆಗದೆ ನರಳಾಡುವಂತಾಗಿದೆ. ನಗರದಲ್ಲಿ ಬಿಸಿಲಿನ ಬೆಗೆಯಿಂದ ದೆಹಕ್ಕೆ ಸ್ವಲ್ಪ ತಂಪಾಗಿಸಲು ಅಂಗಡಿಗಳಿಗೆ ಮುಗಿಬಿದ್ದು ಜನರು ಎಳನೀರು, ಸೋಡಾ, ಸೇರಿದಂತೆ ಇನ್ನಿತರ ತಂಪು ಪಾನೀಯವನ್ನ ಕುಡಿಯುತ್ತಿದ್ದಾರೆ. ಪ್ರತಿ ಅಂಗಡಿಗಳಲ್ಲೂ ಪ್ರತಿದಿನ ಐನೂರಕ್ಕೂ ಹೆಚ್ಚು ಎಳನೀರು, ಸೋಡಾ ಮಾರಾಟವಾಗುತ್ತಿದೆ. ಇದಲ್ಲದೇ ಎಳನೀರು ಅಧಿಕವಾಗಿ ಮಾರಾಟವಾಗುತ್ತಿದ್ದು ಒಂದು ಎಳನೀರಿನ ಬೆಲೆ 30 ರೂಪಾಯಿ ಇದ್ದದ್ದು ಈಗ 50 ರೂಪಾಯಿ ದಾಟಿದೆ.
ಇದನ್ನೂ ಓದಿ:ಹುಬ್ಬಳ್ಳಿ ನಗರದಲ್ಲಿ ಧಾರಾಕಾರ ಮಳೆ; ಬಿಸಲಿನ ಬೇಗೆಗೆ ಕಂಗೆಟ್ಟಿದ್ದ ಜನರಿಗೆ ತಂಪೆರೆದ ವರುಣ
ಇತ್ತ ಯುವಕರು, ಚಿಕ್ಕ ಮಕ್ಕಳಂತೂ ಐಸ್ ಕ್ರಿಮ್, ಬದಾಮ್ ಶೆಖನಂತ ತಂಪು ಪಾನೀಯಗಳಿಗೆ ಅಡಿಕ್ಟ್ ಆಗಿದ್ದು, ತಂಪು ಪಾನೀಯಗಳನ್ನು ಕುಡಿಯದೆ ಇದ್ರೆ ಸಮಾಧಾನ ಆಗುತ್ತಿಲ್ಲ. ಇನ್ನು ಬಿಸಲಿನಿಂದ ಇನ್ನಷ್ಟು ಜನ ಅತಿ ಹೆಚ್ಚು ಬಿಯರ್ ಖರೀದಿ ಮಾಡುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಬಿಯರ್ ಮಾರಾಟ ಆಗಿದೆ. ಇದಲ್ಲದೇ ಅನೇಕರು ನಗರದಲ್ಲಿ ಅತಿ ತಾಪಮಾನ ಹೆಚ್ಚಾಗಿರುವ ಹಿನ್ನಲೆಯಲ್ಲಿ ಶಾಲಾ ಕಾಲೇಜಿಗೆ ರಜೆ ಇರುವುದರಿಂದ ಬೇರೆ ಊರುಗಳಿಗೆ ತೆರೆಳಿದ್ದಾರೆ. ಒಟ್ಟಿನಲ್ಲಿ ಕಾರವಾರದಲ್ಲಿ ಬಿಸಿಲಿನ ಬೇಗೆಯಿಂದ ಜನರು ಪರದಾಡುವ ಪರಿಸ್ಥಿತಿ ಉದ್ಬವಿಸಿದ್ದು, ಯಾವಾಗ ವರುಣ ಈ ಭಾಗದತ್ತ ಆಗಮಿಸುತ್ತಾನೋ ಎಂದು ಜನರು ಕಾಯುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ