ಕಾರವಾರ: ಮೀನು ಸಾಕಾಣಿಕೆಗಾಗಿ ಉಪ್ಪು ನೀರು ಸಂಗ್ರಹ; ಸುತ್ತಲಿನ ಬಾವಿಗಳಲ್ಲಿ ಮಾಯವಾದ ಸಿಹಿ ನೀರು‌‌

ಜಮೀನು ಮಾಲೀಕನೋರ್ವ ಮೀನು ಸಾಕಾಣಿಕೆಗಾಗಿ 111 ಎಕರೆ ಜಾಗದಲ್ಲಿ ಉಪ್ಪು ನೀರನ್ನು ಸಂಗ್ರಹ ಮಾಡಿದ್ದನು. ಇದರ ಪರಿಣಾಮವಾಗಿ ಇದೀಗ ಗ್ರಾಮದ ಸುತ್ತಮುತ್ತಲಿನ ಬಾವಿಗಳಲ್ಲಿನ ನೀರು ಸಂಪೂರ್ಣ ಹಾಳಾಗಿದೆ.

ಕಾರವಾರ: ಮೀನು ಸಾಕಾಣಿಕೆಗಾಗಿ ಉಪ್ಪು ನೀರು ಸಂಗ್ರಹ; ಸುತ್ತಲಿನ ಬಾವಿಗಳಲ್ಲಿ ಮಾಯವಾದ ಸಿಹಿ ನೀರು‌‌
ಕಾರವಾರದಲ್ಲಿ ಕಲುಷಿತಗೊಂಡ ಬಾವಿ ನೀರು, ಕುಡಿಯುವ ನೀರಿಗಾಗಿ ಹಾಹಾಕಾರ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 24, 2023 | 2:14 PM

ಉತ್ತರ ಕನ್ನಡ: ಜಿಲ್ಲೆಯ ಕಾರವಾರ ತಾಲೂಕಿನ ಕಣಸಗಿರಿಯಲ್ಲಿ ಜಮೀನು ಮಾಲೀಕನೋರ್ವ ಮೀನು ಸಾಕಾಣಿಕೆಗಾಗಿ 111 ಎಕರೆ ಜಾಗದಲ್ಲಿ ಉಪ್ಪು ನೀರನ್ನು ಸಂಗ್ರಹ ಮಾಡಿದ್ದನು. ಅದರ ಪರಿಣಾಮವಾಗಿ ಇದೀಗ ಅಂತರ್ಜಲ ಮಟ್ಟ ಹಾಳಾಗಿ ಬಾವಿಗಳಲ್ಲಿನ ನೀರು ಸಂಪೂರ್ಣ ಸವಳು ಆಗಿದೆ. ಕುಡಿಯಲು ಯೋಗ್ಯ ನೀರಿಲ್ಲದೆ ಇದೀಗ ಗ್ರಾಮಸ್ಥರು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ಗ್ರಾಮದ ಮಹಿಳೆಯರು 3 ಕಿ ಮೀ  ಕಾಲ್ನಡಿಗೆಯಲ್ಲಿ ಬಿಂದಿಗೆ ಹೊತ್ತು ನೀರು ತರುವಂತಾಗಿದೆ.

ಜಮೀನಿನಲ್ಲಿ ಐದರಿಂದ ಆರು ಅಡಿ ಸಂಗ್ರಹವಾದ ಉಪ್ಪು ನೀರಿನಲ್ಲಿ ಪಾಚಿಬೆಳೆದು ದುರ್ವಾಸನೆ ಶುರುವಾಗಿದೆ. ಇನ್ನು 150 ಕ್ಕೂ ಹೆಚ್ಚು ಮನೆಗಳಿರುವ ಗ್ರಾಮದಲ್ಲಿ 1500 ಜನಸಂಖ್ಯೆಯಿದೆ.  25 ಕ್ಕೂ ಹೆಚ್ಚು ಸಿಹಿ ನೀರಿನ ಬಾವಿಗಳಿದ್ದು, ಉಪ್ಪು ನೀರಿನ ಕಂಟಕ ಎದುರಾಗಿದೆ. ಇನ್ನು ಇಲ್ಲಿನ ಜನ 10 ವರ್ಷಗಳಿಂದ ನಿರಂತರವಾಗಿ ಈ ಸಮಸ್ಯೆ ಅನುಭವಿಸುತ್ತಿದ್ದು, ಇತ್ತೀಚಿನ 2 ವರ್ಷಗಳಲ್ಲಿ ಮತ್ತಷ್ಟು ಈ ಸಮಸ್ಯೆ ಉಲ್ಬಣಗೊಂಡಿದೆ.

ಉಪ್ಪು ನೀರು ತಡೆಗಾಗಿ ಸರ್ಕಾರ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕಾರ್ಲ್ಯಾಂಡ್ ನಿರ್ಮಾಣ ಮಾಡುತ್ತಿದ್ದರು. ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಜಮೀನು ಮಾಲೀಕ ರಾತ್ರಿ ವೇಳೆ ಕಾರ್ಲ್ಯಾಂಡ್​ಗೆ ಹಾಕಿದ ಗೇಟ್ ಓಪನ್ ಮಾಡಿ ಉಪ್ಪು ನೀರು ಬಿಡುತ್ತಿದ್ದಾನೆ ಎಂಬ ಆರೋಪಗಳು ಕೇಳಿಬಂದಿವೆ. ಕೇವಲ ಒಬ್ಬ ಜಮೀನು ಮಾಲೀಕನ ಲಾಭಕ್ಕಾಗಿ ಗ್ರಾಮದ ಎಲ್ಲ ಜನರು ಸಂಕಷ್ಟ ಪಡುತ್ತಿದ್ದಾರೆ.

ಇದನ್ನೂ ಓದಿ:ಕಾರವಾರದಲ್ಲಿ ಒಂದೇ ಕಣ್ಣಿನ ಅಪರೂಪದ ಹಾವು ಪತ್ತೆ, ಹಾವು ಒಕ್ಕಣ್ಣು ಆಗಲು ಕಾರಣವೇನು ಗೊತ್ತಾ?

ಗ್ರಾಮಸ್ಥರು ಇಷ್ಟೆಲ್ಲಾ ಸಮಸ್ಯೆ ಅನುಭವಿಸುತ್ತಿದ್ದರು ಅಧಿಕಾರಿಗಳು ಮಾತ್ರ ಸಂಬಂಧವಿಲ್ಲದ ಹಾಗೇ ಇದ್ದಾರೆ. ಗ್ರಾಮಸ್ಥರು ಕೂಡಲೇ ಈ ಸಮಸ್ಯೆ ಬಗೆಹರಿಸದಿದ್ದರೆ ಮತ ಬಹಿಷ್ಕಾರ, ಊರು ತೊರೆಯುವ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳನ್ನ ಕೇಳಿದ್ರೆ,  ಸಮಸ್ಯೆ ಈಗ ನನ್ನ ಗಮನಕ್ಕೆ ಬಂದಿದೆ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳುತ್ತೆನೆ ಎಂದು ಭರವಸೆ ನೀಡಿದ್ದಾರೆ.

ವರದಿ: ವಿನಾಯಕ ಬಡಿಗೇರ ಟಿವಿ9 ಕಾರವಾರ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ