ಹೊನ್ನಾವರಕ್ಕೂ ಬಂದಿದ್ದರು ರಾಮ-ಸೀತಾ; ಇಲ್ಲಿನ ರಾಮತೀರ್ಥದಲ್ಲಿದೆ ಅನೇಕ ಔಷಧಿ ಗುಣ
ದೇವತೆಗಳು ಶ್ರೀರಾಮನಿಗೆ ಶಿವಭಕ್ತನಾದ ರಾವಣನ ಹತ್ಯೆಯ ಪಾಪ ಪರಿಹಾರಕ್ಕಾಗಿ ಶಿವಾಲಯ ನಿರ್ಮಿಸುವಂತೆ ಅಪ್ಪಣೆ ಮಾಡಿದರು. ಶ್ರೀರಾಮನು ಬಾಣಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸಿದ. ಇದರಿಂದಾಗಿ ಈ ದೇವಾಲಯ ರಾಮೇಶ್ವರ ಎಂದು ಕರೆಯಲ್ಪಡುತ್ತಿದೆ. ಈ ಕ್ಷೇತ್ರದಲ್ಲಿರುವ (ರಾಮ)ತೀರ್ಥದಲ್ಲಿ ಸ್ನಾನಗೈದರೆ ಪಾಪ ಕಳೆಯುತ್ತದೆ.
ಕಾರವಾರ, ಜ.07: ರಾಮಾಯಣದ ಪ್ರಕಾರ, ರಾವಣ ವಧೆಯ ನಂತರ ಅಯೋಧ್ಯಾ (Ayodhya) ಮಾರ್ಗದಲ್ಲಿ ಸಾಗುವ ಶ್ರೀರಾಮ (Lord Rama) ತನ್ನ ಪಾಪ ನಿವೃತ್ತಿಗಾಗಿ ಹಲವೆಡೆ ದೇವರನ್ನು ಪ್ರತಿಷ್ಠಾಪಿಸಿ ಪೂಜಿಸಿದನೆಂದು ಉಲ್ಲೇಖವಿದ್ದು, ಇಂತಹ ಸ್ಥಳಗಳಲ್ಲಿ ಒಂದು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಶ್ರೀರಾಮತೀರ್ಥ (Sri Rama Tirtha) ಕ್ಷೇತ್ರ ಸಹ ಒಂದು.
ಹಿಂದೆ ತೇತ್ರಾಯುಗದಲ್ಲಿ ಸೀತಾದೇವಿಯನ್ನು ಬಂಧನದಿಂದ ಬಿಡಿಸಿ ತರಲು ಲಂಕೆಗೆ ತೆರಳಿ ದಾನವ ಚಕ್ರವರ್ತಿ ರಾವಣಾದಿಗಳನ್ನು ಸಂಹಾರಗೊಳಿಸಿದ ನಂತರ ಶ್ರೀರಾಮನು ಲಕ್ಷ್ಮಣ, ಸೀತೆ ಹಾಗೂ ಹನುಮಾದಿಗಳ ಸಹಿತ ಅಯೋಧ್ಯೆಗೆ ಹಿಂತಿರುಗುವಾಗ ಈ ಸ್ಥಳಕ್ಕೆ ಬಂದಿದ್ದರು. ಈ ಸ್ಥಳ ಘೋರ ಅರಣ್ಯವಾದ ಕಾರಣ ಬಾಯಾರಿಕೆ ನೀಗಲು ಹನಿ ನೀರೂ ದೊರೆಯಲಿಲ್ಲ. ಆಗ ಶ್ರೀರಾಮ ಮತ್ತು ಲಕ್ಷ್ಮಣ ಎರಡು ದಿವ್ಯ ಬಾಣಗಳನ್ನು ಪ್ರಯೋಗಿಸಿ ಎರಡು ತೀರ್ಥಗಳನ್ನು ಸೃಷ್ಠಿಸಿದರು. ಇದೇ ಮುಂದೆ ರಾಮತೀರ್ಥವೆಂದು ಖ್ಯಾತಿ ಪಡೆಯಿತು.
ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ತಲಕಾವೇರಿ ನೀರು ರವಾನೆ
ದೇವತೆಗಳು ಶ್ರೀರಾಮನಿಗೆ ಶಿವಭಕ್ತನಾದ ರಾವಣನ ಹತ್ಯೆಯ ಪಾಪ ಪರಿಹಾರಕ್ಕಾಗಿ ಶಿವಾಲಯ ನಿರ್ಮಿಸುವಂತೆ ಅಪ್ಪಣೆ ಮಾಡಿದರು. ಶ್ರೀರಾಮನು ಬಾಣಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸಿದ. ಇದರಿಂದಾಗಿ ಈ ದೇವಾಲಯ ರಾಮೇಶ್ವರ ಎಂದು ಕರೆಯಲ್ಪಡುತ್ತಿದೆ. ಈ ಕ್ಷೇತ್ರದಲ್ಲಿರುವ (ರಾಮ)ತೀರ್ಥದಲ್ಲಿ ಸ್ನಾನಗೈದರೆ ಪಾಪ ಕಳೆಯುತ್ತದೆ. ಮಾನಸಿಕ ರೋಗಗಳು ಪರಿಹಾರಗೊಳ್ಳುತ್ತದೆ. ಚರ್ಮ ರೋಗ ಗುಣವಾಗುತ್ತದೆ, ಭಯ ದೂರವಾಗಿ ಬದುಕಿನಲ್ಲಿ ಹೊಸ ಭರವಸೆ ಮತ್ತು ಆತ್ಮ ಸ್ಥೈರ್ಯ ಮೂಡುತ್ತದೆ ಎಂಬ ಪ್ರತೀತಿ ಇದೆ.
ತೀರ್ಥದ ಜಲವನ್ನು ಸಂಗ್ರಹಿಸಿ ಮನೆಗೆ ತಂದು ತುರ್ತು ಸಂದರ್ಭದಲ್ಲಿ ಭಕ್ತರು ತೀರ್ಥವಾಗಿ ಬಳಸುವುದು ರೂಢಿಯಲ್ಲಿದೆ. ಅವತಾರ ಪುರುಷರೆಂದೇ ಖ್ಯಾತರಾದ ಭಗವಾನ ಶ್ರೀಧರ ಸ್ವಾಮಿಗಳು ಈ ಸ್ಥಳದಲ್ಲಿ ಸುಮಾರು 12 ವರ್ಷಗಳ ಕಾಲ ನೆಲೆಸಿ ತಮ್ಮ ತಪಶ್ಶಕ್ತಿಯನ್ನು ವೃದ್ಧಿಸಿಕೊಂಡಿದ್ದರು. ಇದನ್ನು ಕೇಂದ್ರವಾಗಿರಿಸಿಕೊಂಡು ಸುತ್ತಮುತ್ತಲ ಹಲವು ಸೀಮೆಗಳಲ್ಲಿ ಸಂಚರಿಸಿ ಹತ್ತಾರು ದೇಗುಲಗಳನ್ನು ಪ್ರತಿಷ್ಠಾಪಿಸಿ, ನೂರಾರು ಭಕ್ತರ ಸಮಸ್ಯೆಗಳನ್ನು ನಿವಾರಿಸಿ ಪರಿವ್ರಾಜಕರಾಗಿ ನೆಲೆಸಿದ್ದರು. ದೇವಾಲಯದ ಹಿಂಭಾಗದಲ್ಲಿ ಶ್ರೀಧರ ಸ್ವಾಮಿಗಳಿಂದ ನಿರ್ಮಿತವಾದ ದತ್ತಾತ್ರೇಯ ಮಂದಿರ ಮತ್ತು ಧ್ಯಾನ ಮಂದಿರಗಳಿದ್ದು ಭಕ್ತರು ವಾರಗಟ್ಟಲೆ ನೆಲೆಸಿ ಯೋಗ, ಧ್ಯಾನ ಮತ್ತು ಪೂಜೆಗಳಲ್ಲಿ ಮನಃಶಾಂತಿ ಗಳಿಸಲು ಸಾಧನೆ ನಡೆಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:27 pm, Sun, 7 January 24