ಉತ್ತರ ಕನ್ನಡ, ಜೂ.01: ಭಟ್ಕಳದಲ್ಲಿ ಆಕ್ರಮ ಗೋವು ಸಾಗಾಣಿಕೆ ಹಾಗೂ ಸಚಿವ ಮಂಕಾಳು ವೈದ್ಯ (Mankal Vaidya)ರಿಂದ ಭೂಮಿ ಒತ್ತುವರಿ ಖಂಡಿಸಿ ಇಂದು (ಜೂ.01) ಬಿಜೆಪಿ ಕಾರ್ಯಕರ್ತರಿಂದ ಭಟ್ಕಳ(Bhatkal) ಎಸಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗಿದೆ. ಸಚಿವರು ಸುಮಾರು 2.5 ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿದ್ದಾರೆ ಎಂದು ಮಾಜಿ ಶಾಸಕ ಸುನೀಲ್ ಕುಮಾರ ಗಂಭೀರ ಆರೋಪ ಮಾಡಿದ್ದು, ಸುನೀಲ್ ನಾಯ್ಕ್ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ದ ಘೋಷಣೆ ಕೂಗಿ ಪ್ರತಿಭಟನೆ ನಡೆಸಲಾಯಿತು.
ಈ ಕುರಿತು ಮಾತನಾಡಿದ ಮಾಜಿ ಶಾಸಕ ಸುನೀಲ್ ನಾಯ್ಕ್, ‘ಸಚಿವ ಮಂಕಾಳು ವೈದ್ಯ ಒಡೆತನದ ಬಿನಾ ಇಂಟರನ್ಯಾಶನಲ್ ಶಾಲೆ ಬಳಿಯ ಅರಣ್ಯ ಭೂಮಿ ಒತ್ತುವರಿ ಮಾಡಿದ್ದು, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರಿಗೆ ನಾಚಿಗೆ ಆಗಬೇಕು. ಜಿಲ್ಲೆಯ ರಕ್ಷಣೆ ಮಾಡಬೇಕಾದವರೆ ಕೊಳ್ಳೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಸಚಿವರ ಬೇಟಾಲಿಯನ್ ಜಿಲ್ಲೆಯಲ್ಲಿ ಹಲವು ಕಡೆ ಲ್ಯಾಂಡ್ ಮಾಫಿಯಾ ಮಾಡುತ್ತಿದೆ. ಎಷ್ಟೊ ಕುಟುಂಬಗಳು ವಾಸಿಸಲು ಸೂಕ್ತ ಮನೆ ಇರದೆ ಪರದಾಡುತ್ತಿದ್ದು, ಅಂತವರಿಗೆ ಭೂಮಿ ಒದಗಿಸುವುದನ್ನ ಬಿಟ್ಟು, ಇವರಿಗೆ ಬೇಕಾದ ಉದ್ಯಮ ಮಾಡಲು ಅತಿಕ್ರಮಣ ಮಾಡಲಾಗುತ್ತಿದೆ ಎಂದರು.
ಇದನ್ನೂ ಓದಿ:ಡಿಕೆ ಶಿವಕುಮಾರ್ ಸಿಟಿ ರೌಂಡ್ಸ್: ಬಿಲ್ಡರ್, ಒತ್ತುವರಿ ಮಾಡಿದವರಿಗೆ ಶಾಕ್ ಕೊಟ್ಟ ಡಿಸಿಎಂ
ಜಿಲ್ಲೆಯಲ್ಲಿ ನಡೆಯುತ್ತಿರುವ ಆಕ್ರಮ ಗೋವು ಸಾಗಾಣಿಕೆಗೆ ಕಡಿವಾಣ ಹಾಕಬೇಕು. ಸಂಬಂಧ ಪಟ್ಟ ಅಧಿಕಾರಿಗಳು ಆಕ್ರಮ ಗೋವು ಸಾಗಾಣಿಕೆಗೆ ನಡೆಯದಂತೆ ತಡೆಯಬೇಕು. ಜೊತೆಗೆ ಜಿಲ್ಲೆಯಲ್ಲಿ ಅಕ್ರಮ ಗೋವು ಸಾಗಾಣಿಕೆ ಹೆಚ್ಚಾಗಿದ್ದು, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಅಕ್ರಮ ಗೋವು ಸಾಗಾಣಿಕೆ ತಡೆಯಬೇಕು ಎಂದು ಪ್ರತಿಭಟನೆಯಲ್ಲಿ ಮಾಜಿ ಶಾಸಕ ಸುನೀಲ್ ನಾಯ್ಕ್ ಕಿಡಿಕಾರಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ