Karwar News: ದೇಶಕ್ಕೆ ಬೆಳಕು ನೀಡುವ ಗ್ರಾಮಕ್ಕಿಲ್ಲ ವಿದ್ಯುತ್ ಸಂಪರ್ಕ; ಬುಡ್ಡಿ ದೀಪದ ಹೊಗೆಯಲ್ಲಿ ಕರಗುತ್ತಿದೆ ಬದುಕು

ವಿದ್ಯುತ್ ಸೌಲಭ್ಯವಿಲ್ಲದ ಆ ಹಳ್ಳಿಯ ಜನ ನಿತ್ಯ ಸೀಮೆಎಣ್ಣೆ ದೀಪದಲ್ಲಿ ಜೀವನ ನಡೆಸುತ್ತಿದ್ದಾರೆ. ಕತ್ತಲಾದ್ರೆ ಸಾಕು ಕಾಡು ಪ್ರಾಣಿಗಳ ಭಯದಲ್ಲಿ, ಜೀವ ಕೈಯಲ್ಲಿ ಹಿಡಿದು ಬದುಕುತ್ತಿದ್ದಾರೆ. ಹೌದು ದೇಶಕ್ಕೆ ಸ್ವಾತಂತ್ರ ಬಂದು 75 ವರ್ಷಗಳಾದ್ರೂ ವಿದ್ಯುತ್ ಸೌಲಭ್ಯವಿಲ್ಲದ ಹಳ್ಳಿಗಳಿವೆ ಅಂದ್ರೆ ಆಶ್ಚರ್ಯ ಅನ್ಬೇಕಾ.. ದುರಂತ ಅನ್ಬೇಕಾ?

Karwar News: ದೇಶಕ್ಕೆ ಬೆಳಕು ನೀಡುವ ಗ್ರಾಮಕ್ಕಿಲ್ಲ ವಿದ್ಯುತ್ ಸಂಪರ್ಕ; ಬುಡ್ಡಿ ದೀಪದ ಹೊಗೆಯಲ್ಲಿ ಕರಗುತ್ತಿದೆ ಬದುಕು
ದೀಪದ ಬೆಳಕಲ್ಲಿ ಜೀವನ
Follow us
TV9 Web
| Updated By: ಆಯೇಷಾ ಬಾನು

Updated on: Jan 17, 2023 | 7:37 AM

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಉಳವಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರೋ ಹಳ್ಳಿಗಳ ಸ್ಥಿತಿ ಹೇಳತೀರದ್ದು. ಇವರದು ದಟ್ಟ ಕಾಡಿನ ಮಧ್ಯೆ ಪುಟ್ಟ ಪುಟ್ಟ ಮನೆಗಳು. ಹಗಲು ಹೊತ್ತಿನಲ್ಲೇ ಹೆಜ್ಜೆ ಇಡೋಕೆ ಹಿಂಜರಿಕೆ, ಕತ್ತಲಾದರಂತೂ ಇವರ ಸ್ಥಿತಿ ನಿಜಕ್ಕೂ ಭಯಂಕರ. ಸೀಮೆಎಣ್ಣೆ ದೀಪದ ಬೆಳಕಲ್ಲೇ ಅಡುಗೆ ಮಾಡಬೇಕು. ಅದೇ ಬೆಳಕಲ್ಲೇ ಓದು ಬರಹ. ಇನ್ನೂ ಮನೆಯ ಹೊರಗಿನ ದೃಶ್ಯವಂತೂ ಕಗ್ಗತ್ತಲ ಕಾಡು. ಇಂತಹ ಕಗ್ಗತ್ತಲ ಗ್ರಾಮಗಳಲ್ಲಿ ಬದುಕುತ್ತಿರೋ ಇವರ ಬದುಕು ನಿಜಕ್ಕೂ ಶೋಚನಿಯ.

ಸ್ವಾತಂತ್ರ ಬಂದು 75 ವರ್ಷಗಳಾದ್ರೂ ಬಾಂದೆಗಾಳಿ, ಬಿಕುಂಡಿ, ಕಾಟೂರು, ಬೋಗಳೆ, ಮುಂಬರಗಿ, ತುಳಸಗೇರಿ ಸೇರಿದಂತೆ ಹಲವು ಗ್ರಾಮಗಳಲ್ಲಿ ವಿದ್ಯುತ್ ಸೌಲಭ್ಯವಿಲ್ಲ. ಇಂದಿಗೂ ಇಲ್ಲಿನ ಜನ ಸೀಮೆಎಣ್ಣೆ ದೀಪದಲ್ಲಿ ರಾತ್ರಿ ಕಳೆಯುತ್ತಿದ್ದಾರೆ. ಮಕ್ಕಳು ಸಹ ಬುಡ್ಡಿ ದೀಪದಲ್ಲೇ ವ್ಯಾಸಂಗ ಮಾಡೋ ಪರಿಸ್ಥಿತಿ ಇದೆ. ಇದಿಷ್ಟೇ ಅಲ್ಲ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಭಯವಿದ್ದು, ಕತ್ತಲಾದ್ರೆ ಸಾಕು ಮನೆ ಬಿಟ್ಟು ಹೊರಗೆ ಬರಲು ಹೆದರಿಕೆ ಆಗುತ್ತೆ ಎಂದು ಗ್ರಾಮಸ್ಥರು ತಮ್ಮ ಸ್ಥಿತಿಯನ್ನು ಟಿವಿ9ಗೆ ವಿವರಿಸಿದ್ದಾರೆ.

ಇದನ್ನೂ ಓದಿ: Electricity Access: ಬಡ ಕುಟುಂಬಗಳಿಗೆ ವಿದ್ಯುತ್ ಸಂಪರ್ಕದಲ್ಲಿ ಗಮನಾರ್ಹ ಸಾಧನೆ; ಇಲ್ಲಿದೆ ನೋಡಿ ವಿವರ

ಬೀದಿ ದೀಪಗಳಿಲ್ಲ, ಸೂಕ್ತ ರಸ್ತೆ ವ್ಯವಸ್ಥೆ ಇಲ್ಲ. ಇಷ್ಟೆಲ್ಲಾ ಸಮಸ್ಯೆ ತಾಂಡವ ಆಡ್ತಿದ್ರೂ, ಅಧಿಕಾರಿಗಳು, ಜನ ಪ್ರತಿನಿಧಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಅನ್ನೋ ಅಳಲು ಗ್ರಾಮಸ್ಥರದ್ದು. ವಿದ್ಯುತ್ ಸಂಪರ್ಕ ಕೊಡಿಸಿ. ರಸ್ತೆ ಮಾಡಿಸಿ ಅಂದ್ರೆ, ಅರಣ್ಯ ಇಲಾಖೆಯ ಕಾನೂನು ಅಡ್ಡಿಯಾಗ್ತಿದೆ ಅಂತಾ ಅಧಿಕಾರಿಗಳು ಸಬೂಬು ಹೇಳ್ತಿದ್ದಾರಂತೆ.

No electricity facility in karwar ulavi village people live in dark karwar news

ಕಳೆದೆರಡು ವರ್ಷಗಳ ಹಿಂದೆ ಅಂಡರ್ ಗ್ರೌಂಡ್ ಕೇಬಲ್ ಮೂಲಕ ವಿದ್ಯುತ್ ಸಂಪರ್ಕಕ್ಕೆ ಸರ್ಕಾರ ಅನುಮೋದನೆ ನೀಡಿದೆಯಂತೆ. ಆದರೆ ಅರಣ್ಯ ಇಲಾಖೆ ಇದಕ್ಕೆ ಅಡ್ಡಿಪಡಿಸ್ತಿರೋ ಆರೋಪ ಕೇಳಿಬಂದಿದೆ. ಇನ್ನು ಕೇವಲ 35ಲಕ್ಷ ರೂಪಾಯಿ ವೆಚ್ಚದಲ್ಲಿ ಉಳವಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಿಗೆ ವಿದ್ಯುತ್ ನೀಡಬಹುದಂತೆ. ಆದರೆ ಹಿರಿಯ ಅಧಿಕಾರಿಗಳು ಮನಸ್ಸು ಮಾಡದೆ ಇರೋದ್ರಿಂದ ಈ ಹಳ್ಳಿಗಳ ಬದುಕು ಕತ್ತಲಲ್ಲೇ ಮುಳುಗಿದೆ.

ವಿಪರ್ಯಾಸ ಅಂದ್ರೆ ಇಡೀ ದೇಶಕ್ಕೆ ಬೆಳಕು ನೀಡುವ ಕೈಗಾ ಅಣು ವಿದ್ಯುತ್ ಸ್ಥಾವರ ಇದೆ ಜಿಲ್ಲೆಯಲ್ಲಿದೆ. ಆದ್ರೂ ಈ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವಿಲ್ಲ ಇಲ್ಲ ಅಂದ್ರೆ ದೀಪದ ಕೆಳಗೆ ಕತ್ತಲು ಎನ್ನುವ ಗಾದೆ ಮಾತು ನಿಜವಾಗಿದೆ.

No electricity facility in karwar ulavi village people live in dark karwar news

ವರದಿ: ವಿನಾಯಕ ಬಡಿಗೇರ, ಟಿವಿ 9 ಕಾರವಾರ

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ