ಶಿರೂರು ಗುಡ್ಡ ಕುಸಿತ: ಮೃತರ ಸಂಖ್ಯೆ 7ಕ್ಕೆ ಏರಿಕೆ, ನದಿಯಲ್ಲಿ ಕೊಚ್ಚಿ ಹೋಗಿದ್ದ ಟ್ಯಾಂಕರ್​ನಿಂದ ಗ್ಯಾಸ್ ಹೊರಕ್ಕೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 18, 2024 | 8:38 PM

ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆಯಾಗಿದ್ದು, ಬೆಳಂಬಾರ ಕಡಲತೀರದಲ್ಲಿ ಮೃತದೇಹ ಪತ್ತೆಯಾಗಿದೆ. ಇತ್ತ ಗುಡ್ಡಕುಸಿತದಲ್ಲಿ ನದಿಗೆ ತೇಲಿ ಹೋಗಿದ್ದ ಗ್ಯಾಸ್ ಟ್ಯಾಂಕರ್​ನಿಂದ ಗ್ಯಾಸ್​ನ್ನು ಹೊರಕ್ಕೆ ಬಿಡಲಾಗಿದೆ.

ಶಿರೂರು ಗುಡ್ಡ ಕುಸಿತ: ಮೃತರ ಸಂಖ್ಯೆ 7ಕ್ಕೆ ಏರಿಕೆ, ನದಿಯಲ್ಲಿ ಕೊಚ್ಚಿ ಹೋಗಿದ್ದ ಟ್ಯಾಂಕರ್​ನಿಂದ ಗ್ಯಾಸ್ ಹೊರಕ್ಕೆ
ಶಿರೂರು ಗುಡ್ಡ ಕುಸಿತ: ಮೃತರ ಸಂಖ್ಯೆ 7ಕ್ಕೆ ಏರಿಕೆ
Follow us on

ಉತ್ತರ ಕನ್ನಡ, ಜು.18: ಜಿಲ್ಲೆಯ ಅಂಕೋಲಾ(Ankola) ತಾಲೂಕಿನ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಗುಡ್ಡ ಕುಸಿತದ ರಭಸಕ್ಕೆ ಛಿದ್ರವಾಗಿರುವ ಮೃತದೇಹ ಬೆಳಂಬಾರ ಕಡಲತೀರದಲ್ಲಿ ಪತ್ತೆಯಾಗಿದ್ದು, ಗುರುತಿಸಲಾಗದ ಸ್ಥಿತಿಯಲ್ಲಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದು, ಛಿದ್ರವಾಗಿರುವ ಮೃತದೇಹದ ಭಾಗವನ್ನು ಅಂಕೋಲಾ ತಾಲೂಕಾಸ್ಪತ್ರೆಗೆ ರವಾನೆ ಮಾಡಲಾಗಿದೆ.

ನದಿಯಲ್ಲಿ ಕೊಚ್ಚಿ ಹೋಗಿದ್ದ ಟ್ಯಾಂಕರ್​ನಿಂದ ಗ್ಯಾಸ್ ಹೊರಕ್ಕೆ

ಇನ್ನು ಗುಡ್ಡಕುಸಿತದಲ್ಲಿ ನದಿಗೆ ತೇಲಿ ಹೋಗಿದ್ದ ಹೆಚ್​ಪಿ ಗ್ಯಾಸ್ ಟ್ಯಾಂಕರ್​ನಿಂದ ಗ್ಯಾಸ್​ನ್ನು ಹೊರಕ್ಕೆ ಬಿಡಲಾಗಿದೆ. ಹೌದು, ಸಗಡಗೇರಿಯಲ್ಲಿ ಟ್ಯಾಂಕರ್​ನಲ್ಲಿದ್ದ ಶೇ.30ರಷ್ಟು ಗ್ಯಾಸ್​ನ್ನು ಹೆಚ್​ಪಿ ಕಂಪನಿ ಅವರು ನದಿ ನೀರಿಗೆ ಬಿಟ್ಟಿದ್ದಾರೆ. ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್, ಎಸ್.ಡಿ.ಆರ್.ಎಫ್, NDRF , ಹೆಚ್.ಪಿ ಕಂಪನಿಯ ಸಿಬ್ಬಂದಿ, ವೈದ್ಯಕೀಯ ತಂಡ ಮೊಕ್ಕಾಮ್ ಹೊಡಿದೆ.

ಇದನ್ನೂ ಓದಿ:ಅಂಕೋಲಾ ಹೆದ್ದಾರಿಯಲ್ಲಿ ಗುಡ್ಡ ಕುಸಿತ: 6 ಜನರ ಮೃತದೇಹಗಳು ಪತ್ತೆ, ಉಳಿದವರಿಗಾಗಿ ಮುಂದುವರಿದ ಶೋಧ

ಗ್ಯಾಸ್​ನ್ನು ಗಂಗಾವಳಿ ನದಿಗೆ ಬಿಟ್ಟ ಹೆಚ್.ಪಿ ಕಂಪನಿ

ಇನ್ನು ಹೆಚ್.ಪಿ ಕಂಪನಿ ಅವರು ‘ಮೀಟರ್ ಮಾಪನದ ಮೂಲಕ ಅಳೆದು ಗ್ಯಾಸ್​ನ್ನು ಗಂಗಾವಳಿ ನದಿಗೆ ಬಿಟ್ಟಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಸಗಡಗೇರಿ ಗ್ರಾಮದ 34 ಕುಟುಂಬಗಳನ್ನು ಜಿಲ್ಲಾಡಳಿತ ಬೇರೆಡೆ ಸ್ಥಳಾಂತರಿಸಿತ್ತು. ಇಂದು ನಡೆದ ಕಾರ್ಯಾಚರಣೆಯಲ್ಲಿ ಯಾವುದೇ ಅವಘಡ ಸಂಭವಿಸಿಲ್ಲ. ಟೆಕ್ನಿಷಿಯನ್ ಹಂತ ಹಂತವಾಗಿ ಟ್ಯಾಂಕರ್​ ಖಾಲಿ ಮಾಡಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ