ಶಿರೂರು ಗುಡ್ಡ ಕುಸಿತ ಸ್ಥಳದಲ್ಲೇ ಲಾರಿ ಚಾಲಕನ ಮೊಬೈಲ್ ಲೊಕೇಶನ್ ಪತ್ತೆ: ಕಾರ್ಯಾಚರಣೆ ಚುರುಕು

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತವಾಗಿ ಇಂದಿಗೆ ನಾಲ್ಕುವಾಗಿದೆ. ನಿನ್ನೆ ಬೆಂಜ್​​ ಕಾರು ಲೊಕೇಶನ್​ ಪತ್ತೆಯಾಗಿದ್ದು, ಇಂದು ಚಾಲಕ ಸಮೇತ ಟಿಂಬರ್ ಲಾರಿ ಲೊಕೇಶನ್​ ಮತ್ತು ಮೊವೈಲ್ ಲೊಕೇಶನ್ ಪತ್ತೆಯಾಗಿದೆ. ಮಣ್ಣು ಕುಸಿತ ಸ್ಥಳದಲ್ಲೇ ಸಿಕ್ಕಿರುವ ಮಾಹಿತಿ ಸಿಕ್ಕಿದ್ದು, ಅಬ್ಬರದ ಮಳೆಯಲ್ಲೂ ಕಾರ್ಯಾಚರಣೆ ವೇಗ ಪಡೆದುಕೊಂಡಿದೆ.

ಶಿರೂರು ಗುಡ್ಡ ಕುಸಿತ ಸ್ಥಳದಲ್ಲೇ ಲಾರಿ ಚಾಲಕನ ಮೊಬೈಲ್ ಲೊಕೇಶನ್ ಪತ್ತೆ: ಕಾರ್ಯಾಚರಣೆ ಚುರುಕು
ಶಿರೂರು ಗುಡ್ಡ ಕುಸಿತ ಸ್ಥಳದಲ್ಲೇ ಲಾರಿ ಚಾಲಕನ ಮೊಬೈಲ್ ಲೊಕೇಶನ್ ಪತ್ತೆ, ಕಾರ್ಯಚರಣೆ ಚುರುಕು
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Jul 19, 2024 | 3:48 PM

ಕಾರವಾರ, ಜುಲೈ 19: ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರು (Shiroor) ಗುಡ್ಡ ಕುಸಿತವಾಗಿ ಇಂದಿಗೆ ನಾಲ್ಕು ದಿನವಾಗಿದೆ. ಧಾರಾಕಾರ ಮಳೆ ಮಧ್ಯೆ ತೆರುವು ಕಾರ್ಯಾಚರಣೆ ಮುಂದುವರೆದಿದೆ. ಈ ಮಧ್ಯೆ ಮಣ್ಣು ಕುಸಿತ ಸ್ಥಳದಲ್ಲೇ ಚಾಲಕ ಸಮೇತ ಟಿಂಬರ್ ಲಾರಿ (lorry) ಲೊಕೇಶನ್​ ಮತ್ತು ಮೊವೈಲ್ ಲೊಕೇಶನ್ ಪತ್ತೆ ಆಗಿದೆ. ಚಾಲಕ ಅರ್ಜುನ ಬಗ್ಗೆ ಅಧಿಕೃತ ಮಾಹಿತಿ ದೊರೆಯುತ್ತಿದ್ದಂತೆ ಕಾರ್ಯಾಚರಣೆ ವೇಗ ಪಡೆದುಕೊಂಡಿದೆ.

ಘಟನೆಯಂದು ಬೆಳಿಗ್ಗೆ 11 ಗಂಟೆಗೆ ಲಾರಿ ಚಾಲಕ ಅರ್ಜುನ್​ನ ಮೊಬೈಲ್​ ಸ್ವಿಚ್ ಆಫ್ ಆಗಿತ್ತು. ಆದರೆ ಜಿಪಿಎಸ್​ನಲ್ಲಿ ಗುಡ್ಡ ಕುಸಿತದ ಸ್ಥಳದಲ್ಲೇ ಲಾರಿ ಇರುವುದಾಗಿ ತೋರಿಸಿದೆ. ಹೀಗಾಗಿ ಆತಂಕಗೊಂಡ ಲಾರಿ ಮಾಲೀಕ ಪೊಲೀಸರಿಗೆ ರಕ್ಷಣೆ ಮಾಡುವಂತೆ ಮನವಿ ಮಾಡಿದ್ದಾರೆ. ಆದರೆ ಯಾರು ಕೂಡ ಸ್ಪಂದಿಸಿರಲಿಲ್ಲ.

ಇದನ್ನೂ ಓದಿ: ಶಿರೂರು ಬಳಿ ಗುಡ್ಡ ಕುಸಿತ: ಮಣ್ಣಿನಡಿ ಬೆಂಜ್ ​ಕಾರಿನ ಲೊಕೇಶನ್ ಪತ್ತೆ, ಮತ್ತಷ್ಟು ಹೆಚ್ಚಿಸಿದ ಆತಂಕ

ಜಿಪಿಎಸ್​ ನೋಡುವಂತೆ ಹೇಳಿದರು ಕೇಳಿರಲಿಲ್ಲ. ಫೋನ್ ಟ್ರ್ಯಾಕ್ ಮಾಡುವಂತೆ ಮನವಿ ಮಾಡಿದರು ಕೇರ್ ಮಾಡಿಲ್ಲ. ದಯವಿಟ್ಟು ನಮ್ಮ ಚಾಲಕ ಅರ್ಜುನ ನನ್ನು ಬದುಕಿಸಿ ಕೊಡಿ ಎಂದು ಟಿವಿ9 ಬಳಿ ಲಾರಿ ಮಾಲೀಕ ಅಳಲು ತೊಡಿಕೊಂಡಿದ್ದರು. ಬಳಿಕ ಚಾಲಕನನ್ನು ಹುಡುಕಿ ಕೊಡುವಂತೆ ಲಾರಿ ಮಾಲೀಕ ಸಹಿತ ಕಂಪನಿಯವರು ಜಿಲ್ಲಾಡಳಿತಕ್ಕೆ ಅಧಿಕೃತ ಮಾಹಿತಿ ನೀಡಿದ್ದರು. ಈ ಹಿನ್ನೆಲೆ ಅಬ್ಬರದ ಮಳೆಯಲ್ಲೂ ಜಿಲ್ಲಾಡಳಿತ ಕಾರ್ಯಾಚರಣೆ ಮುಂದುವರೆದಿದೆ.

ಲಾರಿ ಚಾಲಕ ಅರ್ಜುನ್ ಮೂಲತಃ ಕೇರಳ ಮೂಲದವರು. ಇನ್ನು ಕೇರಳ ಮೂಲದ ಮುಬೀನ್ ಒಡೆತನದ KA-15-A7427 ವೈಟ್ ಕಲರ್ ಬೆಂಜ್ ಲಾರಿ ಸೇರಿದೆ. ಈಗಾಗಲೇ ಪಕ್ಕದ ಗುಡ್ಡ ಕುಸಿಯುವ ಹಂತದಲ್ಲಿರುವುದರಿಂದ ಘಟನಾ ಸ್ಥಳಕ್ಕೆ ಮಾಧ್ಯಮದವರನ್ನು ಸಂಪೂರ್ಣವಾಗಿ ನಿರ್ಬಂಧ ಹೇರಲಾಗಿದೆ.

ಇದನ್ನೂ ಓದಿ: ಅಂಕೋಲ ಬಳಿ ಗುಡ್ಡ ಕುಸಿತಕ್ಕೆ ಬಲಿಯಾದವರ ಸಂಖ್ಯೆ ಒಂಭತ್ತಲ್ಲ, ಇಪ್ಪತ್ತಕ್ಕೂ ಹೆಚ್ಚು!

ಪ್ರಾಣ ಒತ್ತೆಯಿಟ್ಟು ಎನ್​ಡಿಆರ್​ಎಫ್​ ಮತ್ತು ಎಸ್​ಡಿಆರ್​ಎಫ್​ ತಂಡ ಕಾರ್ಯಾಚರಣೆ ಮಾಡುತ್ತಿದೆ. ರಾಷ್ಟ್ರೀಯ ಹೇದ್ದಾರಿಯ ಮೇಲೆ ಟನ್ ಗಂಟಲೇ ಮಣ್ಣು ಹಾಗೂ ಬಂಡೆ ಕಲ್ಲು ಬಿದ್ದಿರುವ ಹಿನ್ನೆಲೆ ಅಬ್ಬರದ ಮಳೆಯ ಮಧ್ಯೆ ತೆರವು ಮಾಡುವುದು ಭಾರಿ ಕಷ್ಟ ಆಗುತ್ತಿದೆ. ಆದರೆ ಯಾವಾಗ ಅರ್ಜುನ ಬಗ್ಗೆ ಅಧಿಕೃತ ಮಾಹಿತಿ ದೊರೆಯುತ್ತುದ್ದಂತೆ ಕಾರ್ಯಾಚರಣೆ ವೇಗ ಪಡೆದುಕೊಂಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:46 pm, Fri, 19 July 24