ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಶಿರಸಿ ಮಾರಿಕಾಂಬಾ ದೇವಿ ದೇವಸ್ಥಾನದ (Sirsi Marikamba Temple) ಜಾತ್ರೆ ಮಾರ್ಚ್ 15ರಿಂದ 23ರವರೆಗೆ ನಡೆಯಲಿದೆ. 2 ವರ್ಷಗಳಿಗೊಮ್ಮೆ ನಡೆಯುವ ಶಿರಸಿ ಮಾರಿಕಾಂಬಾ ಜಾತ್ರೆಯನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ಕೊರೊನಾ (Coronavirus) ಹಾಗೂ ಒಮಿಕ್ರಾನ್ (Omicron) ಭೀತಿ ಹೆಚ್ಚಾಗಿರುವುದರಿಂದ ಸರಳವಾಗಿ ಮಾರಿಕಾಂಬಾ ಜಾತ್ರೆಯನ್ನು ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ. ಈ ಮಾರಿಕಾಂಬಾ ದೇವಿಯನ್ನು ದುರ್ಗಾ ದೇವಿಯ ಇನ್ನೊಂದು ಅವತಾರ ಎನ್ನಲಾಗುತ್ತದೆ.
ಈ ಬಾರಿ ಪ್ಲವನಾಮ ಸಂವತ್ಸರದ ಫಾಲ್ಗುಣ ಶುಕ್ಲ ದ್ವಾದಶಿಯಂದು ಮಾರಿಕಾಂಬಾ ಜಾತ್ರೆ ಆರಂಭವಾಗಲಿದೆ. ಜಾತ್ರೆ ಮುಹೂರ್ತ ನಿಗದಿಯಾಗುತ್ತಿದ್ದಂತೆ ಇಂದು ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಲಾಯಿತು. ಜಾತ್ರೆ ಹಿನ್ನೆಲೆಯಲ್ಲಿ ಜ. 26ರಿಂದ ಜಾತ್ರಾ ವಿಧಿವಿಧಾನಗಳು ಶುರುವಾಗಲಿವೆ.
ಮಾರಿಕಾಂಬಾ ಜಾತ್ರೆಗೆ ಸಂಬಂಧಿಸಿದಂತೆ ಪೂರ್ವ ವಿಧಿ–ವಿಧಾನಗಳು ಜ.26ರಿಂದ ಪ್ರಾರಂಭವಾಗಲಿವೆ. ಮಾರ್ಚ್ 15ರ ಮಧ್ಯಾಹ್ನ 12.21ರಿಂದ 12.33ರ ಒಳಗೆ ದೇವಿಯ ರಥದ ಕಲಶದ ಪ್ರತಿಷ್ಠೆ ಹಾಗೂ ರಾತ್ರಿ 11.18ರಿಂದ 11.27ರವರೆಗೆ ಸಭಾ ಮಂಟಪದಲ್ಲಿ ದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆ ನಡೆಯಲಿದೆ. ಮಾರ್ಚ್ 16ರಂದು ಬೆಳಿಗ್ಗೆ 7.04 ಗಂಟೆಯಿಂದ ದೇವಿಯ ರಥಾರೋಹಣ ನಡೆಯಲಿದ್ದು, 8.36ರ ಗಂಟೆಯೊಳಗೆ ದೇವಿಯ ಪ್ರತಿಷ್ಠಾಪನೆ ಮಾಡಲಾಗುವುದು. ಮಾ.17ರಿಂದ ಭಕ್ತರ ಸೇವೆಗೆ ಅವಕಾಶ ನೀಡಲಾಗುವುದು.
ಮಾರ್ಚ್ 23ರಂದು ಬೆಳಿಗ್ಗೆ 9.33 ಗಂಟೆಗೆ ಮಾರಿಕಾಂಬಾ ದೇವಿ ಜಾತ್ರೆ ಮುಕ್ತಾಯವಾಗಲಿದೆ. ಯುಗಾದಿಯಂದು ದೇವಿಯ ಪುನರ್ ಪ್ರತಿಷ್ಠೆ ನಡೆಯಲಿದೆ.
ಜ.26ರಿಂದ ಜಾತ್ರಾ ವಿಧಿ-ವಿಧಾನ:
ಶಿರಸಿ ಮಾರಿಕಾಂಬಾ ದೇವಿಯ ಜಾತ್ರೆಗೆ ಸಂಬಂಧಿಸಿದ ವಿಧಿವಿಧಾನಗಳು ಜ.26ರಿಂದ ಪ್ರಾರಂಭವಾಗಲಿವೆ. ಜ.26ರಂದು ದೇವಿಯ ಪ್ರತಿಷ್ಠಾ ಮಂಟಪ ಕಳಚುವುದು, ಫೆ.22 ರಂದು ಪೂರ್ವದಿಕ್ಕಿಗೆ ಮೊದಲ ಹೊರಬೀಡು, ಫೆ.25ರಂದು ಉತ್ತರ ದಿಕ್ಕಿಗೆ 2ನೇ ಹೊರಬೀಡು, ಮಾ.1ರಂದು ಪೂರ್ವ ದಿಕ್ಕಿಗೆ 3ನೇ ಹೊರಬೀಡು, ಮಾ.4ರಂದು ರಥ ಕಟ್ಟಲು ಮರ ಕಡಿಯಲು ಹೋಗುವುದು, ಅದೇ ದಿನ ಉತ್ತರ ದಿಕ್ಕಿಗೆ 4ನೇ ಹೊರಬೀಡು, ಮಾ.8 ರಂದು ರಥದ ಮರ ತರುವುದು, ಅದೇ ದಿನ ರಾತ್ರಿ ಪೂರ್ವದಿಕ್ಕಿಗೆ ಅಂಕೆಯ ಹೊರಬೀಡು ನಡೆಯಲಿದೆ. ಮಾ.9 ರಂದು ಅಂಕೆ ಹಾಕುವುದು, ದೇವಿಯ ವಿಸರ್ಜನೆ ಮಾಡಲಾಗುವುದು.
ಈಗಾಗಲೇ ಕೊವಿಡ್ ಹಾಗೂ ಒಮಿಕ್ರಾನ್ ಭೀತಿ ಹೆಚ್ಚಾಗಿರುವುದರಿಂದ ಸರ್ಕಾರದ ನೂತನ ಆದೇಶದಂತೆ ಶಿರಸಿ ಮಾರಿಕಾಂಬಾ ದೇವಾಲಯದಲ್ಲಿ ನಾಳೆಯಿಂದ (ಶನಿವಾರದಿಂದ) ಮುಂದಿನ ಆದೇಶದವರೆಗೆ ಭಕ್ತರಿಗೆ ದೇವಿಯ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಉಳಿದಂತೆ ಬೇರಾವ ಸೇವೆಗಳೂ ಇರುವುದಿಲ್ಲ. ದೇವಾಲಯಕ್ಕೆ ಬರುವ ಭಕ್ತರುಮಾಸ್ಕ್ ಧರಿಸುವುದು ಕಡಡ್ಡಾಯ. ಹಾಗೇ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕೂಡ ಕಡ್ಡಾಯವಾಗಿದೆ.
ಶಿರಸಿ ಮಾರಿಕಾಂಬಾ ದೇಗುಲದಲ್ಲಿ ಧಾರ್ಮಿಕ ಸೇವೆಗಳ ಶುಲ್ಕ ಹೆಚ್ಚಳ; ಆಕ್ಷೇಪಣೆಗೆ ಇದೆ ಅವಕಾಶ