Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರವಾರ: ಜೊಯಿಡಾದಲ್ಲಿ ಜಿಂಕೆಯ ಕೊಂಬುಗಳ ವಶ, ಓರ್ವನ ಬಂಧನ

Tiger Claw Locket Row: ಆರೋಪಿ ಬಳಿ ಹುಲಿ ಉಗುರು ಕೂಡಾ ಇರುವುದರ ಬಗ್ಗೆ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ. ದಾಂಡೇಲಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣದ ಕುರಿತಂತೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರ ಬೀಳಬೇಕಾಗಿದೆ.

ಕಾರವಾರ: ಜೊಯಿಡಾದಲ್ಲಿ ಜಿಂಕೆಯ ಕೊಂಬುಗಳ ವಶ, ಓರ್ವನ ಬಂಧನ
ಅರಣ್ಯ ಇಲಾಖೆ ಕಚೇರಿ, ದಾಂಡೇಲಿ
Follow us
TV9 Web
| Updated By: Ganapathi Sharma

Updated on: Oct 26, 2023 | 3:32 PM

ಕಾರವಾರ, ಅಕ್ಟೋಬರ್ 26: ಬಿಗ್‌ಬಾಸ್ ಸ್ಪರ್ಧಿ ಸಂತೋಷ್ ಪ್ರಕರಣದ ನಂತರ ಅನೇಕರಿಗೆ ಹುಲಿ ಉಗುರು ಹಾಗೂ ವನ್ಯಜೀವಿ ಉತ್ಪನ್ನಗಳು ಕಂಟಕವಾಗಿ ಪರಿಣಮಿಸುತ್ತಿವೆ. ರಾಜ್ಯದ ಅನೇಕ ಕಡೆಗಳಲ್ಲಿ ಅರಣ್ಯಾಧಿಕಾರಿಗಳ ದಾಳಿ ಜೋರಾಗಿದೆ. ಉತ್ತರ ಕನ್ನಡ ಜಿಲ್ಲೆ (Uttara Kannada) ಜೋಯಿಡಾ ತಾಲೂಕಿನಲ್ಲಿ ಜಿಂಕೆಯ ಕೊಂಬುಗಳನ್ನು (Deer horns) ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದು, ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಜೊಯಿಡಾದ ಶಿವಾಜಿ ವೃತ್ತದ ಬಳಿಯಿರುವ ಮನೆಯೊಂದರಲ್ಲಿ ಎರಡು ಜಿಂಕೆಗಳ ಕೋಡುಗಳು ಇದ್ದವು. ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಅವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸದ್ಯ ದಾಂಡೇಲಿಯ ಎಸಿಎಫ್ ಕಚೇರಿಯಲ್ಲಿ ವಿಚಾರಣೆ ಮುಂದುವರಿದಿದೆ. ಜೊಯಿಡಾ ಶಿವಾಜಿ ವೃತ್ತದ ಬಳಿಯ ನಿವಾಸಿ ಪ್ರಕಾಶ್ ನಾಯ್ಕ್ ಎಂಬಾತನೇ ಬಂಧಿತ ಆರೋಪಿಯಾಗಿದ್ದಾರೆ.

ಆರೋಪಿ ಬಳಿ ಹುಲಿ ಉಗುರು ಕೂಡಾ ಇರುವುದರ ಬಗ್ಗೆ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ. ದಾಂಡೇಲಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣದ ಕುರಿತಂತೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರ ಬೀಳಬೇಕಾಗಿದೆ.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿಕೆ ಶೇಟ್ ಅವರ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಜೊಯಿಡಾ ವಲಯ ಅರಣ್ಯಾಧಿಕಾರಿ ಮಹಮ್ಮದ್ ಶಫಿ, ಬರ್ಚಿ ವಲಯ ಅರಣ್ಯಾಧಿಕಾರಿ ಅಶೋಕ್ ಶೆಳ್ಳೆನ್ನವರ, ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ: ಹುಲಿ ಉಗುರು ವಿವಾದ: ಅಕ್ರಮ ವನ್ಯಜೀವಿ ಉತ್ಪನ್ನಗಳನ್ನು ಮರಳಿಸಲು ಕೊನೇ ಅವಕಾಶ ನೀಡಲು ಚಿಂತನೆ; ಸಚಿವ ಈಶ್ವರ ಖಂಡ್ರೆ

ಅಕ್ರಮವಾಗಿ ವನ್ಯಜೀವಿ ಉತ್ಪನ್ನಗಳನ್ನು ಇಟ್ಟುಕೊಂಡಿರುವವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಕಾನೂನಿನಡಿ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ. ಬುಧವಾರವಷ್ಟೇ ನಟ ದರ್ಶನ್, ನಿಖಿಲ್ ಕುಮಾರಸ್ವಾಮಿ, ರಾಕ್‌ಲೈನ್ ವೆಂಕಟೇಶ್, ಜಗ್ಗೇಶ್‌ಗೆ ಬಿಸಿ ಮುಟ್ಟಿಸಿದ್ರು. ಅದರಂತೆ ತುಮಕೂರಿನ ಕುಣಿಗಲ್‌ನಲ್ಲಿರೋ ಬಿದನಗೆರೆಯ ಅರ್ಚಕ ಧನಂಜಯ್‌ ಮನೆ ಮೇಲೆ ದಾಳಿ ಮಾಡಿ ವಸ್ತುಗಳನ್ನು ವಶಪಡಿಸಿಕೊಂಡಿದ್ದರು.

ವಶಪಡಿಸಿಕೊಂಡಿರುವ ವಸ್ತುಗಳು ಅಸಲಿಯೇ ನಕಲಿಯೇ ಎಂಬುದನ್ನು ತಿಳಿಯುವುದಕ್ಕಾಗಿ ಅವುಗಳನ್ನು ಎಫ್ಎಸ್‌ಎಲ್‌ಗೆ ಕಳುಹಿಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಲ್ಲಿಂದ ಬಂದ ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದೂ ತಿಳಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ