ಕಾರವಾರ: ಹಾರನ್ಗೆ ಹೆದರಿ ಕಾಲುವೆಗೆ ಹಾರಿದ ಎತ್ತುಗಳು, ಚಕ್ಕಡಿ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವು
ದಾಂಡೇಲಿಯಲ್ಲಿ ಹಾರನ್ ಶಬ್ದಕ್ಕೆ ಭಯ ಬಿದ್ದ ಎತ್ತುಗಳು ಕಾಲುವೆಗೆ ಹಾರಿದ ಪರಿಣಾಮ ಚಕ್ಕಡಿ ಪಲ್ಟಿಯಾಗಿದೆ. ಈ ವೇಳೆ ಚಕ್ರಕ್ಕೆ ಸಿಲುಕಿದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಇನ್ನೊಂದೆಡೆ ತುಮಕೂರಿನಲ್ಲಿ ಸ್ಮಶಾನಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ.
ಕಾರವಾರ: ಹಾರನ್ ಶಬ್ದಕ್ಕೆ ಭಯ ಬಿದ್ದ ಎತ್ತುಗಳು ಕಾಲುವೆಗೆ ಹಾರಿದ ಪರಿಣಾಮ ಚಕ್ಕಡಿ ಪಲ್ಟಿಯಾಗಿ (Bullock cart overturns) ಓರ್ವ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಜನತಾ ಕಾಲೋನಿಯಲ್ಲಿ ನಡೆದಿದೆ. ಬೈಲಹೊಂಗಲ ತಾಲೂಕಿನ ಸಂಪಗಾಂವ ಗ್ರಾಮದ ನಿವಾಸಿ ಈರಣ್ಣ ಧೂಪದಾಳ(21) ಮೃತ ದುರ್ದೈವಿಯಾಗಿದ್ದಾರೆ. ಉಳವಿ ಚನ್ನಬಸವೇಶ್ವರ ಜಾತ್ರೆಗೆ ಬರುತ್ತಿದ್ದಾಗ ಹೆದ್ದಾರಿಯಲ್ಲಿ ವಾಹನವೊಂದು ಹಾರನ್ ಮಾಡಿದ್ದರಿಂದ ಎತ್ತುಗಳು ಹೆದರಿ ಚಕ್ಕಡಿ ಸಮೇತ ಕಾಲುವೆಗೆ ಹಾರಿವೆ. ಈ ವೇಳೆ ಚಕ್ಕಡಿ ಗಾಡಿ ಪಲ್ಟಿಯಾಗಿ ಚಕ್ರ ಈರಣ್ಣ ಮೈಮೇಲೆ ಹರಿದಿದೆ. ದುರ್ಘಟನೆ ಸಂಬಂಧ ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಮಶಾನ ಜಾಗಕ್ಕಾಗಿ ರಸ್ತೆಯಲ್ಲಿ ಶವ ಇಟ್ಟು ಪ್ರತಿಭಟನೆ
ತುಮಕೂರು: ಜಿಲ್ಲೆಯ ಪಾವಗಡ ತಾಲ್ಲೂಕಿನ ರೊಪ್ಪ ಗ್ರಾಮದಲ್ಲಿ ಸ್ಮಶಾನ ಜಾಗಕ್ಕಾಗಿ ರಸ್ತೆಯಲ್ಲಿ ಶವ ಇಟ್ಟು ಧರಣಿ ನಡೆಸಲಾಗುತ್ತಿದೆ. ಇಂದು ರೊಪ್ಪ ಗ್ರಾಮದಲ್ಲಿ ಸಾವನ್ನಪ್ಪಿದ್ದ ರಂಗಪ್ಪ (55) ಸಾವನ್ನಪ್ಪಿದ್ದು, ಶವ ಹೂಳಲು ಸ್ಮಶಾನ ಜಾಗ ಇಲ್ಲದಕ್ಕೆ ಜನರು ಪರದಾಡಿದರು. ಹೀಗಾಗಿ ನಡು ರಸ್ತೆಯಲ್ಲೇ ಶವ ಇರಿಸಿ ಅಹೋ ರಾತ್ರಿ ಧರಣಿ ನಡೆಸಲು ಗ್ರಾಮಸ್ಥರು ಮುಂದಾದರು.
ಇದನ್ನೂ ಓದಿ: ಬೆಂಗಳೂರಿನಲ್ಲೊಂದು ಹೃದಯವಿದ್ರಾವಕ ಘಟನೆ: ಹೆದ್ದಾರಿ ದಾಟಲು ಹೋಗಿ 12 ಕೃಷ್ಣಮೃಗಗಳು ಸಾವು
ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡುವವರೆಗೂ ಪ್ರತಿಭಟನೆ ನಡೆಸಲು ಪಟ್ಟು ಹಿಡಿದಿದ್ದು, ವಿಚಾರ ತಿಳಿದ ಪಾವಗಡ ತಹಶೀಲ್ದಾರ್ ಡಿ,ಎನ್ ವರದರಾಜು ಸ್ಥಳಕ್ಕೆ ಆಗಮಿಸಿದರು. ಸದ್ಯ ಅಧಿಕಾರಿಗಳು ಹಾಗೂ ಪೊಲೀಸರು ಗ್ರಾಮಸ್ಥರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ.
Published On - 10:34 pm, Sun, 29 January 23