
ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರ್ಷದ ಮಳೆಗಾಲವೂ ಪ್ರವಾಹ ಪರಿಸ್ಥಿತಿ ತಂದೊಡ್ಡಿದೆ. ಸತತ ಮೂರು ವರ್ಷಗಳಿಂದ ಭೂಕುಸಿತಕ್ಕೆ ಒಳಗಾಗುತ್ತಿರುವ ಯಲ್ಲಾಪುರ ತಾಲೂಕಿನ ಡಬ್ಗುಳಿ ಗ್ರಾಮದ ಪರಿಸ್ಥಿತಿಯಿದು. ಸುಮಾರು 500 ಮೀಟರ್ ಜಾಗದಲ್ಲಿ ಬೃಹತ್ ಗುಡ್ಡಗಳು ಆಳದ ಕಣಿವೆಗೆ ಕುಸಿದುಬಿದ್ದಿವೆ.

ನೂರಾರು ಮೀಟರ್ ಎತ್ತರದ ಬೆಟ್ಟ ಗುಡ್ಡದ ಮೇಲ್ಭಾಗದಿಂದ ಭಾರೀ ಪ್ರಮಾಣದ ನೀರು ಕಲ್ಲುಬಂಡೆ, ಬೃಹತ್ ಮರಗಳ ಸಮೇತ ವೇಗವಾಗಿ ತೋಟಕ್ಕೆ ಅಪ್ಪಳಿಸಿದೆ.

ರಸ್ತೆ ಯಾವುದೋ, ಗುಡ್ಡ ಯಾವುದೋ ಇಲ್ಲಿ ಯಾವುದು ಇದೆ ಯಾವುದು ಇಲ್ಲ ಎಂಬುದೇ ಕಷ್ಟ

ಅದೋ, ಕಣ್ಣು ಕಿರಿದು ಮಾಡಿ ನೋಡಿದರೆ ದೂರದವರೆಗೂ ಗುಡ್ಡವಿತ್ತು.. ಆದರೆ ಈಗಿಲ್ಲ. ಮುಂದೆ ಏನೇನಾಗಿದೆ ಎಂಬುದನ್ನೂ ಕಾರ್ಯಾಚರಣೆಯ ನಂತರವೇ ಕಾಣಬೇಕಿದೆ.

ಕಲ್ಲುನೆಲದ ಮಧ್ಯದಿಂದಲೂ ನೀರಿನ ಬುಗ್ಗೆ ಏಳುವಷ್ಟು ಒತ್ತಡ

ಒಡೆದ ಕಾಲುವೆಯ ಮುಂದೆ ತೋಟ ನಾಶವಾದ ನೋವಲ್ಲಿ ನಿಂತಿರುವ ಕೃಷಿಕ

ಕಾಲುವೆ ಒಡೆದು ಮಳೆಗಾಲ ಮುಗಿಯುವವರೆಗೂ ನೀರೆಲ್ಲ ಕೃಷಿಭೂಮಿಗೆ

ದೈತ್ಯ ಮರಗಳು ದಾಂಗುಡಿಯಿಡುತ್ತಿವೆ. ತೋಟ,ಮನೆಗಳು ಭಯದಿಂದ ಮುದುರಿ ಕುಳಿತಿವೆ. ಭೂಕುಸಿತದ ಸಂಪೂರ್ಣ ಚಿತ್ರಣವನ್ನು ಸೆರೆಹಿಡಿಯಲು ಡ್ರೋನ್ ಕ್ಯಾಮರಾದಿಂದ ಮಾತ್ರ ಸಾಧ್ಯ ಎಂಬಂತಿದೆ.

ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯತ್ಗೆ ಸಂಪರ್ಕ ಕಲ್ಪಿಸುವ ಸೇತುವೆ ಗಂಗಾವಳಿಯ ರಭಸಕ್ಕೆ ಕೊಚ್ಚಹೋಗಿದೆ. ಸದ್ಯ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ತಾತ್ಕಾಲಿಕ ವಾಗಿ ಸ್ಪೀಡ್ ಬೋಟ್ನ ವ್ಯವಸ್ಥೆ ಮಾಡಿದ್ದಾರೆ.

ಯಲ್ಲಾಪುರ ತಾಲೂಕಿನ ಅತ್ಯಂತ ಕಣಿವೆ ಪ್ರದೇಶ ಕಳಚೆಯೂ ಭೂಕುಸಿತದಿಂದ ನಲುಗಿಹೋಗಿದೆ. ಭೂಕುಸಿತದಿಂದ ಇಡೀ ಊರು ಮೂರು ಭಾಗಗಳಾಗಿ ವಿಭಜಿಸಲ್ಪಟ್ಟಿದೆ. ಕಾಳಿ ನದಿ ಕಣಿವೆಯ ಹಿನ್ನೀರಿನ ಭಾಗದಲ್ಲಿರುವ ಕಳಚೆ ಸಂಪೂರ್ಣ ತತ್ತರಿಸಿದೆ.
Published On - 6:47 pm, Sun, 25 July 21