ಬಾವಿ ತೋಡಲು ಗೌರಿ ನಾಯ್ಕ್​ಗೆ ಅಡ್ಡಿ: ಸ್ಪಷ್ಟನೆ ನೀಡಿದ ಉತ್ತರ ಕನ್ನಡ ಸಿಇಒ

| Updated By: ಗಂಗಾಧರ​ ಬ. ಸಾಬೋಜಿ

Updated on: Feb 12, 2024 | 7:50 PM

ಮಾಹಿತಿ ಪ್ರಕಾರ ಬಾವಿ ತೋಡಲು ಗೌರಿ ನಾಯ್ಕ್​ ಯಾವುದೇ ಪರವಾನಗಿ ಪಡೆದಿಲ್ಲ. ಗೌರಿ ನಾಯ್ಕ್ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಅದರಲ್ಲಿ ಎರಡು ಮಾತಿಲ್ಲ. ಆದರೆ ಸರ್ಕಾರಿ ಜಾಗದಲ್ಲಿ ಏನೇ ಮಾಡಬೇಕಾದರೂ ಪರವಾನಗಿ ಬೇಕು. ಸಂಬಂಧಪಟ್ಟ ಇಲಾಖೆಯಿಂದ ಪರವಾನಗಿ ಪಡೆಯಲೇಬೇಕು. ಗೌರಿ ನಾಯ್ಕ್ ಬಳಿ ಪರವಾನಗಿ ಇದ್ದರೆ ಅಧಿಕಾರಿಗಳಿಗೆ ತೋರಿಸಲಿ. ಪರವಾನಗಿ ಪಡೆದರೆ ಮಾತ್ರ ಬಾವಿ ತೆಗೆಯಲು ಅವಕಾಶ ಕೊಡುತ್ತೇವೆ ಎಂದು ಸಿಇಒ ಈಶ್ವರ ಕಾಂದೂ ಸ್ಪಷ್ಟನೆ ನೀಡಿದ್ದಾರೆ.

ಬಾವಿ ತೋಡಲು ಗೌರಿ ನಾಯ್ಕ್​ಗೆ ಅಡ್ಡಿ: ಸ್ಪಷ್ಟನೆ ನೀಡಿದ ಉತ್ತರ ಕನ್ನಡ ಸಿಇಒ
ಗೌರಿ ನಾಯ್ಕ್, ಸಿಇಒ ಈಶ್ವರ ಕಾಂದೂ
Follow us on

ಉತ್ತರ ಕನ್ನಡ, ಫೆಬ್ರವರಿ 12: ಏಕಾಂಗಿಯಾಗಿ ಬಾವಿ ತೋಡುತಿದ್ದ ಗೌರಿ ನಾಯ್ಕ್ (Gouri Nayk)​ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈಗಾಗಲೇ ನೋಟಿಸ್​ ನೀಡಿದೆ. ಸದ್ಯ ಈ ವಿಚರವಾಗಿ ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕಾಂದೂ ಪ್ರತಿಕ್ರಿಯಿಸಿದ್ದು, ಮಾಹಿತಿ ಪ್ರಕಾರ ಬಾವಿ ತೋಡಲು ಯಾವುದೇ ಪರವಾನಗಿ ಪಡೆದಿಲ್ಲ. ಗೌರಿ ನಾಯ್ಕ್ ಒಳ್ಳೇ ಕೆಲಸ ಮಾಡುತ್ತಿದ್ದಾರೆ ಅದರಲ್ಲಿ ಎರಡು ಮಾತಿಲ್ಲ. ಆದರೆ ಸರ್ಕಾರಿ ಜಾಗದಲ್ಲಿ ಏನೇ ಮಾಡಬೇಕಾದರೂ ಪರವಾನಗಿ ಬೇಕು. ಸಂಬಂಧಪಟ್ಟ ಇಲಾಖೆಯಿಂದ ಪರವಾನಗಿಯನ್ನು ಪಡೆಯಲೇಬೇಕು. ಗೌರಿ ನಾಯ್ಕ್ ಬಳಿ ಪರವಾನಗಿ ಇದ್ದರೆ ಅಧಿಕಾರಿಗಳಿಗೆ ತೋರಿಸಲಿ. ಪರವಾನಗಿ ಪಡೆದರೆ ಮಾತ್ರ ಬಾವಿ ತೆಗೆಯಲು ಅವಕಾಶ ಕೊಡುತ್ತೇವೆ. ಇಲ್ಲದಿದ್ರೆ ಬಾವಿ ತೆಗೆಯಲು ಅನುಮತಿ ಕೊಡಲು ಆಗಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಕುಡಿಯುವ ನೀರಿನ ಸಮಸ್ಯೆಯನ್ನು ಅಧಿಕಾರಿಗಳು ಬಗೆಹರಿಸುತ್ತಾರೆ. ನಾಳೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳ ವೀಕ್ಷಣೆಗೆ ಹೋಗಲಿದ್ದಾರೆ. ಅವರ ಮಾಹಿತಿ ಬಂದ ಬಳಿಕ ಪರವಾನಿಗೆ ಕೊಡಬೇಕೊ ಕೊಡಬಾರದು ಯೋಚನೆ ಮಾಡುತ್ತೆವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಾರವಾರ: ಮಕ್ಕಳ ದಾಹ ನೀಗಿಸಲು ಏಕಾಂಗಿಯಾಗಿ ಬಾವಿ ತೋಡುತಿದ್ದ ಮಹಿಳೆಗೆ ಅಧಿಕಾರಿಗಳಿಂದ ವಿಘ್ನ

ಜಿಲ್ಲೆಯ ಶಿರಸಿಯ ಗಣೇಶನಗರದಲ್ಲಿ ಅಂಗನವಾಡಿ ಮಕ್ಕಳಿಗೆ ಕುಡಿಯುವ ನೀರಿನ ಸಲವಾಗಿ ಏಕಾಂಗಿಯಾಗಿ ಗೌರಿ ಅವರು ಬಾವಿ ತೋಡುತ್ತಿದ್ದಾರೆ. ಆದರೆ ಬಾವಿ ತೋಡುವುದನ್ನು ನಿಲ್ಲಿಸಿ ಮುಚ್ಚುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿರಸಿ ವಿಭಾಗದ ಸಿಡಿಪಿಓ ವೀಣಾ ಶಿರ್ಸಿಕರ್​ ಸೂಚನೆ ನೀಡಿದ್ದಾರೆ. ಇಲಾಖೆಯ ವಿರುದ್ಧ ಸುದ್ದಿ ಬಂದಿದ್ದಕ್ಕೆ ಭದ್ರತೆ ನೆಪವೊಡ್ಡಿ ಬಾವಿ ಮುಚ್ಚಲು ಸೂಚನೆ ನೀಡಲಾಗಿದೆ.

ಮೊದಲೇ ಮಾಹಿತಿ ನೀಡಿ ಅನುಮತಿ ಪಡೆದರೂ ಮಾಧ್ಯಮದಲ್ಲಿ ಸುದ್ದಿ ಬಂದಿದ್ದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸೇಡು ತೀರಿಸಿಕೊಂಡರಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಮಕ್ಕಳಿಗೆ ಕುಡಿಯುವ ನೀರಿನ ಕೊರತೆ ಕುರಿತು ಇಲಾಖೆ ನಿರ್ಲಕ್ಷದ ಸುದ್ದಿ ಪ್ರಸಾರವಾಗಿದ್ದಕ್ಕೆ ಅಧಿಕಾರಿಗಳಿಂದ ಬಾವಿ ಮುಚ್ಚುವ ಸೂಚನೆ ಹಿನ್ನಲೆಯಲ್ಲಿ ಅರ್ಧಕ್ಕೆ ಬಾವಿ ತೋಡುವುದನ್ನು ನಿಲ್ಲಿಸಿದ್ದಾರೆ.

ಇದನ್ನೂ ಓದಿ: ನೀರು ಸಿಗುವವರೆಗೂ ಬಾವಿ ತೋಡುವೆ -ಅಂಗನವಾಡಿ ಮಕ್ಕಳ ದಣಿವು ತಣಿಸಲು ಮುಂದಾದ ಏಕಾಂಗಿ ಮಹಿಳೆ ಗೌರಿ

ಪ್ರತಿಫಲಾಪೆಕ್ಷಿಸದೆ ಸಮಾಜಕ್ಕೆ ಕೊಡುಗೆ ಕೊಡುವವರು ಬಹಳ ಕಡಿಮೆ.‌ ಅಂತಹದರಲ್ಲಿ ಮಕ್ಕಳ ನೀರಿನ ದಾಹ ನೀಗಿಸಲು, ತನ್ನ ನಿರಂತರ ಶ್ರಮದಿಂದ 60 ಅಡಿ ಬಾವಿ ತೊಡಲು ಮುಂದಾದ ಮಹಿಳೆಗೆ, ಅಧಿಕಾರಿಗಳು ಇಲ್ಲ ಸಲ್ಲದ ಕಟ್ಟಪ್ಪಣೆ ವಿಧಿಸುತ್ತಿರುವುದು ಸಾರ್ವಜನಿಕರ ಕಣ್ಣು ಕೆಂಪಗಾಗಿಸಿದ್ದು ಅಧಿಕಾರಿಗಳು ಮುಂದೆ ಯಾವ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.