ಉತ್ತರ ಕನ್ನಡ: ಸಮುದ್ರದ ಮಧ್ಯದಲ್ಲಿರುವ ಆ ತಾಣ ಅತಿ ಸುಂದರ; ಈ ಐತಿಹಾಸಿಕ ನಡುಗಡ್ಡೆಗೆ ಬೇಕಿದೆ ಇನ್ನಷ್ಟು ಅಭಿವೃದ್ಧಿ

ಉತ್ತರ ಕನ್ನಡ ಜಿಲ್ಲೆಯ ಅತ್ಯಾಕರ್ಷಣೀಯ ನೈಸರ್ಗಿಕ ತಾಣವನ್ನು ಹೊಂದಿದೆ. ಈ ಜಿಲ್ಲೆಯಲ್ಲಿ ಅನೇಕ ದೇವಸ್ಥಾನ, ಬೆಟ್ಟ ಕಾಡು ಅಷ್ಟೆ ಅಲ್ಲದೆ ಕೆಲವು ನಡುಗಡ್ಡೆಗಳಿದ್ದೂ, ಅವುಗಳ ಅಭಿವೃದ್ಧಿ ಮಾತ್ರ ಆಗಿಲ್ಲ. ಈ ಹಿಂದೆ ಬ್ರಿಟಿಷರು ತಮ್ಮ ವ್ಯಾಪಾರಕ್ಕಾಗಿ ಬಳಸುತ್ತಿದ್ದ ನಡುಗಡ್ಡೆಗಳು ಇಂದು ಹಾಳು ಕೊಂಪೆ ಆಗಿದೆ. ಆದ್ರೆ, ಸಮುದ್ರದ ಮಧ್ಯೆದಲ್ಲಿರುವ ಆ ನಡುಗಡ್ಡೆ ಮಾತ್ರ ಎಂತವರನ್ನು ಕೂಡ ಆಕರ್ಷಿಸುತ್ತದೆ.

ಉತ್ತರ ಕನ್ನಡ: ಸಮುದ್ರದ ಮಧ್ಯದಲ್ಲಿರುವ ಆ ತಾಣ ಅತಿ ಸುಂದರ; ಈ ಐತಿಹಾಸಿಕ ನಡುಗಡ್ಡೆಗೆ ಬೇಕಿದೆ ಇನ್ನಷ್ಟು ಅಭಿವೃದ್ಧಿ
ಉತ್ತರ ಕನ್ನಡ
Follow us
ಸೂರಜ್​, ಮಹಾವೀರ್​ ಉತ್ತರೆ
| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 10, 2024 | 10:16 PM

ಉತ್ತರ ಕನ್ನಡ, ಫೆ.10: ಪ್ರಕೃತಿ ಸೌಂದರ್ಯದಿಂದ ಆವೃತವಾಗಿರುವ ಉತ್ತರ ಕನ್ನಡ(uttara kannada) ಜಿಲ್ಲೆಯಲ್ಲಿ ಅರಣ್ಯ, ಜಲಪಾತ, ನದಿ ಹಾಗೂ ಸಮುದ್ರಗಳನ್ನು ಕಾಣಬಹುದು. ಆದರೆ, ಜಿಲ್ಲಾ ವ್ಯಾಪ್ತಿಯ ಅರಬ್ಬೀ ಸಮುದ್ರದಲ್ಲಿ ಸಾಕಷ್ಟು ಐಲ್ಯಾಂಡ್‌ಗಳಿದ್ದು, ಕೇವಲ ಬೆರಳೆಣಿಕೆಯ ಐಲ್ಯಾಂಡ್‌ಗಳಿಗೆ(Island)ಮಾತ್ರ ಜನರಿಗೆ ಪ್ರವೇಶಕ್ಕೆ ಅವಕಾಶವಿದೆ. ಜಿಲ್ಲೆಯ ಮುರುಡೇಶ್ವರದಲ್ಲಿ ನೇತ್ರಾಣಿ ದ್ವೀಪವಿದ್ದು, ಜನರು ಐಲ್ಯಾಂಡ್‌ನ ಸುತ್ತಮುತ್ತಲೂ ತಿರುಗಾಡಿ ಸ್ಕೂಬಾ ಡೈವ್ ನಡೆಸಿ ತೆರಳುತ್ತಾರೆ‌. ವರ್ಷಕ್ಕೊಮ್ಮೆ ಇಲ್ಲಿರುವ ದೇವರಿಗೆ ಪೂಜೆ ಸಲ್ಲಿಸಲು ಸ್ಥಳೀಯರು ಕೂಡ ಈ ಐಲ್ಯಾಂಡ್‌ಗೆ ತೆರಳುತ್ತಾರೆ. ಭಟ್ಕಳದ ಕಿರಿ ಕುಂದ, ಹೊನ್ನಾವರದ ಬಸವರಾಯ ದುರ್ಗ, ಖಾಸಗಿ ವ್ಯಕ್ತಿಗೆ ಸೇರಿದ ಕಾರವಾರದ ನರಸಿಂಹಗಢ ದ್ವೀಪವಿದ್ದು, ಆಗಾಗ ಕೊಂಚ ಪ್ರಮಾಣದಲ್ಲಿ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ.

ನರಸಿಂಹಗಢದಲ್ಲಂತೂ ಪ್ರತೀ ವರ್ಷ ನರಸಿಂಹ ದೇವರ ಜಾತ್ರೆ ನಡೆಯುತ್ತಿದ್ದು, ಅಂದು ಸಾವಿರಾರು ಸಂಖ್ಯೆಯಲ್ಲಿ ಜನರು ಬೋಟ್ ಮೂಲಕ ಸಮುದ್ರದಲ್ಲಿರುವ ದ್ವೀಪಕ್ಕೆ ತೆರಳಿ ದೇವರ ದರ್ಶನ ಮಾಡಿ, ಹರಕೆ ಸಲ್ಲಿಸಿ ಹಿಂತಿರುಗುತ್ತಾರೆ‌. ಇನ್ನು ಅಂಜುದೀವ್ ಅಂತೂ ನೇವಿಯ ಪಾಲಾಗಿದ್ದು, ಇಲ್ಲಿ ನೇವಿಯವರಿಗೆ ಹೊರತುಪಡಿಸಿ ಇತರರಿಗೆ ಯಾರಿಗೂ ಹೋಗಲು ಅವಕಾಶವಿಲ್ಲ. ಸ್ಥಳೀಯರು ಕರೆಯುವ ಸನ್ಯಾಸಿ ಗುಂಜ, ಮಿನಿಸ್ಟ್ರಿ ಆಫ್ ಶಿಪ್ಪಿಂಗ್‌ಗೆ ಸೇರಿದ ಲೈಟ್‌ಹೌಸ್ ಸೇರಿದಂತೆ ಹೆಸರು ಇರದ ಹತ್ತು ಹಲವು ಐಲ್ಯಾಂಡ್‌ಗಳು ಕಾರವಾರದಲ್ಲಿವೆ. ಇಲ್ಲಿಗೆ ತೆರಳಲು ಜಿಲ್ಲಾಧಿಕಾರಿಯಿಂದ ಅನುಮತಿ ಪಡೆಯಬೇಕೇ ಹೊರತು ನೇರವಾಗಿ ತೆರಳಲು ಸಾಧ್ಯವಿಲ್ಲ. ಈ ಐಲ್ಯಾಂಡ್‌ಗಳು ಕೇಂದ್ರ ಸರಕಾರದ ಅಡಿಯಲ್ಲಿದ್ದು, ರಾಜ್ಯ ಸರಕಾರ ಮನಸ್ಸು ಮಾಡಿದಲ್ಲಿ ಕೇಂದ್ರದ ಅನುಮತಿ ಪಡೆದು ಈ ಐಲ್ಯಾಂಡ್‌ಗಳನ್ನು ಅಭಿವೃದ್ಧಿಪಡಿಸಿ ಪ್ರವಾಸೋದ್ಯಮ ಬೆಳೆಸಬಹುದಾಗಿದೆ.‌

ಇದನ್ನೂ ಓದಿ:Bengaluru News: ಜನರ ಸುರಕ್ಷತೆಗಾಗಿ ಬಂದಿದೆ ಸೇಫ್ಟಿ ಐಲ್ಯಾಂಡ್, ಏನಿದರ ವಿಶೇಷತೆ ಇಲ್ಲಿದೆ ಮಾಹಿತಿ

ಕಾರವಾರ ನಗರದಿಂದ ಸಮುದ್ರ ಮಾರ್ಗವಾಗಿ 15ರಿಂದ 18ಕಿ.ಮೀ. ಸಾಗಿದಲ್ಲಿ ಮಿನಿಸ್ಟ್ರಿ ಆಫ್ ಶಿಪ್ಪಿಂಗ್‌ಗೆ ಸೇರಿದ ಲೈಟ್‌ ಹೌಸ್ ದ್ವೀಪಕ್ಕೆ ತಲುಪಬಹುದಾಗಿದೆ. ಸಮುದ್ರ ಮಾರ್ಗದಲ್ಲಿ ಸಾಗುವ ಬೋಟ್‌ಗಳಿಗೆ ಮಾರ್ಗದರ್ಶನ ಮಾಡಲು ಇಲ್ಲಿ ಬ್ರಿಟೀಷರ ಕಾಲದಲ್ಲೇ ಲೈಟ್ ಹೌಸ್ ನಿರ್ಮಾಣ ಮಾಡಲಾಗಿದೆ. ಅಲ್ಲದೇ, ಇಲ್ಲಿ ಬ್ರಿಟೀಷರ ಕಾಲದಲ್ಲಿ ತಂದಿರಿಸಲಾದ ದೊಡ್ಡ ಫಿರಂಗಿಯನ್ನು ಕೂಡಾ ಕಾಣಬಹುದಾಗಿದೆ. ಕಾರವಾರದ ಲೈಟ್ ಹೌಸ್ ಮಾತ್ರವಲ್ಲದೇ, ತದಡಿ, ಹೊನ್ನಾವರ, ಭಟ್ಕಳದ ಲೈಟ್ ಹೌಸ್ ಕೂಡಾಬ್ರೀಟೀಷರಿಂದಲೇ ನಿರ್ಮಾಣವಾಗಿದೆ. ಮುಂಬೈಯಲ್ಲಿ ಉಗ್ರಗಾಮಿಗಳ ದಾಳಿಯ ಬಳಿಕ ಈ ಲೈಟ್ ಹೌಸ್‌ಗಳನ್ನು ಮತ್ತಷ್ಟು ಬಲಯುತಗೊಳಿಸಲಾಗಿದೆ.

ಯಾವುದೇ ವಿದೇಶಿ ದ್ವೀಪಗಳಿಗೆ ಯಾವುದಕ್ಕೂ ಕಡಿಮೆಯಿಲ್ಲಂತಹ ಅದ್ಭುತ ಪ್ರಕೃತಿ ಸೌಂದರ್ಯವನ್ನು ಇಲ್ಲಿ ಕಾಣಬಹುದಾಗಿದ್ದು, ವಿವಿಧ ಸಮುದ್ರ ಜೀವಿಗಳು ಇಲ್ಲಿ ಕಾಣಿಸುತ್ತವೆ. ಆದರೆ, ಈ ದ್ವೀಪಗಳ ಸ್ಥಿತಿಯಂತೂ ಶೋಚನೀಯವಾಗಿದ್ದು, ಮೇಲೆ ಹತ್ತಲು ಸರಿಯಾದ ರಸ್ತೆಯಿಲ್ಲ, ಅಲ್ಲಿ ಸಿಬ್ಬಂದಿ ತಂಗಲು ಸರಿಯಾದ ಮನೆಯ ವ್ಯವಸ್ಥೆಯಿಲ್ಲ, ಪ್ರವಾಸಿಗರು ಯಾರಾದ್ರೂ ಭೇಟಿ ನೀಡಿದಲ್ಲಿ ಅಗತ್ಯಕ್ಕೆ ಬೇಕಾದ ಯಾವುದೇ ಸೌಲಭ್ಯ ಇಲ್ಲಿಲ್ಲ. ಸಿಬ್ಬಂದಿಗಳ ಮನೆ ನೋಡಿದ್ರೆ ಭೂತ ಬಂಗಲೆಯಂತೆ ಕಾಣುತ್ತಿದ್ದು, ತಿಂಗಳ ಕಾಲ ಇಬ್ಬರೇ ಸಿಬ್ಬಂದಿ ಇಲ್ಲಿದ್ದು, ಎಲ್ಲವನ್ನೂ ನೋಡಿಕೊಳ್ಳಬೇಕಾಗಿದೆ.

ಈ ದ್ವೀಪಗಳು ಅತ್ಯುತ್ತಮ ಪ್ರವಾಸಿ ಕೇಂದ್ರಗಳಾಗುವ ಸಾಧ್ಯತೆಗಳಿದ್ದು, ರಾಜ್ಯ ಸರಕಾರ ಕೇಂದ್ರ ಸರಕಾರದ ಅನುಮತಿ ಪಡೆದು ಈ ದ್ವೀಪಗಳನ್ನು ಅಭಿವೃದ್ಧಿಪಡಿಸಿದಲ್ಲಿ ಇವುಗಳು ಅತ್ಯುತ್ತಮ ಪ್ರವಾಸಿ ಕೇಂದ್ರಗಳಾಗುವ ಸಾಧ್ಯತೆಗಳಿದ್ದು, ಜನರು ಕೂಡ ವಿದೇಶಿಗಳಿಗೆ ಭೇಟಿ ನೀಡುವ ಬದಲು ಉತ್ತರಕನ್ನಡ ಜಿಲ್ಲೆಯ ದ್ವೀಪಗಳಿಗೆ ಭೇಟಿ ನೀಡಿ ಅತ್ಯುತ್ತಮ ಕ್ಷಣಗಳನ್ನು ಕಳೆಯಬಹುದಾಗಿದೆ. ಒಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ದ್ವೀಪಗಳಿದ್ದು, ರಾಜ್ಯ ಹಾಗೂ ಕೇಂದ್ರ ಸರಕಾರ ಈ ದ್ವೀಪಗಳನ್ನು ಅಭಿವೃದ್ಧಿಪಡಿಸಿದಲ್ಲಿ ಜಿಲ್ಲೆಯ ಅತ್ಯುತ್ತಮ ಪ್ರವಾಸಿ ಕೇಂದ್ರವಾಗುವುದಲ್ಲದೇ, ಪ್ರವಾಸಿ ಪ್ರಿಯರು ವಿದೇಶಗಳಿಗೆ ಮುಖ ಮಾಡುವ ಬದಲು ರಾಜ್ಯದಲ್ಲೇ ಸಂತೋಷಯುವ ಕ್ಷಣಗಳನ್ನು ಕಳೆಯಬಹುದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM