Bengaluru News: ಜನರ ಸುರಕ್ಷತೆಗಾಗಿ ಬಂದಿದೆ ಸೇಫ್ಟಿ ಐಲ್ಯಾಂಡ್, ಏನಿದರ ವಿಶೇಷತೆ ಇಲ್ಲಿದೆ ಮಾಹಿತಿ
ಬೆಂಗಳೂರಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿತ್ತು ತಡೆಗಟ್ಟುವ ನಿಟ್ಟಿನಲ್ಲಿ ನಗರದ ಪೊಲೀಸರು ಅನೇಕ ಕ್ರಮಗಳನ್ನು ಕೈಗೊಂಡಿದ್ದಾರೆ. ಇದೀಗ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಪೊಲೀಸರು ಹೊಸ ತಂತ್ರಜ್ಞಾನವೊಂದು ನಗರಕ್ಕೆ ಪರಿಚಯಿಸಿದ್ದಾರೆ.
ಬೆಂಗಳೂರು: ನಗರದಲ್ಲಿ ಅಪರಾಧ (Crime) ಪ್ರಕರಣಗಳು ಹೆಚ್ಚುತ್ತಿತ್ತು ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರು (Bengaluru Police) ಅನೇಕ ಕ್ರಮಗಳನ್ನು ಕೈಗೊಂಡಿದ್ದಾರೆ. ಇದೀಗ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಪೊಲೀಸರು ಹೊಸ ತಂತ್ರಜ್ಞಾನವೊಂದು ನಗರಕ್ಕೆ ಪರಿಚಯಿಸಿದ್ದಾರೆ. ಸಂಕಷ್ಟದಲ್ಲಿರುವವರು ತುರ್ತು ಸಮಯದಲ್ಲಿ ಪೊಲೀಸರನ್ನು ಸಂಪರ್ಕಿಸಲು ಬೆಂಗಳೂರು ಪೊಲೀಸರು ನಗರದಾದ್ಯಂತ ಸುಮಾರು 30 “ಸುರಕ್ಷತಾ ದ್ವೀಪ” (Safety Island) ಸಾಧನಗಳನ್ನು ಸ್ಥಾಪಿಸಿದ್ದಾರೆ. ಮಹಿಳೆಯರ ಮೇಲೆ ಹೆಚ್ಚಾಗಿ ದೌರ್ಜನ್ಯವಾದ ಪ್ರದೇಶಗಳಲ್ಲಿ ಪೊಲೀಸರು ಈ ಮಷೀನ್ ಅನ್ನು ಅಳವಡಿಸಿದ್ದಾರೆ.
ಸೇಫ್ಟಿ ಐಲ್ಯಾಂಡ್ ಸಾಧನ ಹೇಗಿರುತ್ತೆ?
ಈ (Safety Island) ನಗರದ ವಿವಿಧ ಜಂಕ್ಷನ್‌ಗಳಲ್ಲಿ ಸ್ಥಾಪಿಸಲಾಗಿದೆ. ಮಷೀನ್ ನೀಲಿ ಬಣ್ಣದಿಂದ ಕೂಡಿದ್ದು ಟೆಲಿಫೋನ್ ಬೂತ್‌ನಂತೆ ಕಾಣುತ್ತದೆ. ಯಾರಾದರೂ ತೊಂದರೆಯಲ್ಲಿದ್ದಾಗ ದೂರು ನೀಡಲು ಸಾಧ್ಯವಾಗದಿದ್ದರೇ ಅಥವಾ ಪೊಲೀಸರಿಗೆ ಕರೆ ಮಾಡಲು ಸಾಧ್ಯವಾಗದಿದ್ದರೇ ಅವರು ಹತ್ತಿರದ ಪೊಲೀಸ್ ಠಾಣೆಗಳನ್ನು ಸಂಪರ್ಕಿಸಲು ಈ ಸುರಕ್ಷತಾ ದ್ವೀಪಗಳನ್ನು ಬಳಸಬಹುದು. ಪ್ರತಿ ಸುರಕ್ಷತಾ ದ್ವೀಪದ ಬಳಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದು ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿಯ ಬಗ್ಗೆ ನೈಜ ಸಮಯದ ಮಾಹಿತಿ ನೀಡುತ್ತದೆ.
ಇದನ್ನೂ ಓದಿ: 4 ದಿನಗಳಲ್ಲಿ 38 ಡ್ರಗ್ ಪೆಡ್ಲರ್ಗಳನ್ನು ಬಂಧಿಸಿದ ಬೆಂಗಳೂರು ಪೊಲೀಸ್
ಸೇಫ್ಟಿ ಐಲ್ಯಾಂಡ್ ಸಾಧನವನ್ನು ಹೇಗೆ ಬಳಸುವುದು?
ನಿಮಗೆ ತೊಂದರೆಯಾದಾಗ ಹತ್ತಿರದ ಮಷೀನ್ ಬಳಿ ಹೋಗಿ SOS ಬಟನ್ ಒತ್ತಿರಿ. ಇದು ಸಮೀಪದ ಪೊಲೀಸ್ ಠಾಣೆಗೆ ಸಂಪರ್ಕ ಕಲ್ಪಿಸುತ್ತದೆ ಮತ್ತು ಕರೆ ಮಾಡಿದ ವ್ಯಕ್ತಿಯ ಪರಿಸ್ಥಿತಿಯನ್ನು ಅವಲಂಬಿಸಿ, ಪೊಲೀಸ್ ಸಿಬ್ಬಂದಿ ಸಾಧ್ಯವಾದಷ್ಟು ಬೇಗ ಸ್ಥಳವನ್ನು ತಲುಪುತ್ತಾರೆ. ತೊಂದರೆಯಲ್ಲಿರುವ ವ್ಯಕ್ತಿಯು ಮೊಬೈಲ್ ಫೋನ್ ಬಳಸುತ್ತಿಲ್ಲದಿದ್ದರೂ ಸಹ ಪೊಲೀಸರು ವ್ಯಕ್ತ ಬಳಿ ತಲುಪಬಹುದಾಗಿದೆ.
30 emergency S.O.S booths in Bengaluru are set up to directly call the police for women’s safety, traffic harassment, etc. Good initiative by @BlrCityPolice.#EIIRInteresting #safety #engineering #Police #Bengaluru Video Credit: Unknown, ViaWeb pic.twitter.com/IokyqN6ybl
— Pareekh Jain (@pareekhjain) June 22, 2023
ಬೆಂಗಳೂರಿನಲ್ಲಿ ಎಲ್ಲಾ ರೀತಿಯ ತುರ್ತು ಪರಿಸ್ಥಿತಿಗಳಿಗಾಗಿ, ನಗರ ಪೊಲೀಸರು ಈಗಾಗಲೇ ತುರ್ತು ಟೋಲ್ ಫ್ರೀ ಸಂಖ್ಯೆ 112 ಅನ್ನು ನಿರ್ವಹಿಸುತ್ತಿದ್ದಾರೆ. ಆದಾಗ್ಯೂ, ರಾಜಧಾನಿಯಲ್ಲಿ ಸಾರ್ವಜನಿಕ ಸುರಕ್ಷತೆಗಾಗಿ ಸುರಕ್ಷತಾ ದ್ವೀಪಗಳು ಹೆಚ್ಚುವರಿ ರಸ್ತೆ ಸಾಧನಗಳಾಗಿವೆ ಎಂದು ಹೇಳಲಾಗುತ್ತದೆ.
ಸೇಫ್ ಸಿಟಿ ಪ್ರಾಜೆಕ್ಟ್ ಅಡಿಯಲ್ಲಿ ಸೇಫ್ಟಿ ಐಲ್ಯಾಂಡ್ ಹಾಗು ಸಿಸಿಟಿವಿಗಳನ್ನು ಹಾಕಲಾಗಿದೆ. ನಗರದ ವಿವಿಧ ಭಾಗದಲ್ಲಿ ಸೇಫ್ಟಿ ಐಲ್ಯಾಂಡ್ ಹಾಕಲಾಗಿದೆ. ಕ್ಯಾಮೆರಾ ಮೂಲಕ ಹಾಗು ಮಾತನಾಡಿ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಲಾಗುತ್ತೆ. ಇದನ್ನು ಜಾರಿಗೆ ತಂದ ಮೇಲೆ ಮೊದಲ ಬಾರಿಗೆ ಒರ್ವ ವಿದೇಶಿ ಪ್ರಜೆಗೆ ಸಹಾಯ ಆಗಿದೆ. ಇದು ಸೇಫ್ಟಿ ಐಲ್ಯಾಂಡ್ನ ಮೊದಲ ಸಕ್ಸಸ್ ಸ್ಟೋರಿ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್ ಹೇಳಿದ್ದಾರೆ.
ಆಟೋದಲ್ಲಿ ವಿದೇಶಿ ಪ್ರಜೆ ಬಂದಿದ್ದಾರೆ. ಆಟೋದಲ್ಲಿ ವಿದೇಶಿ ಕರೆನ್ಸಿ ಲ್ಯಾಪ್ ಟಾಪ್ ಹಾಗೂ ಇತರ ವಸ್ತುಗಳನ್ನು ಮರೆತಿದ್ದರು. ಆಗ ವಿದೇಶಿ ಪ್ರಜೆ ಸೇಫ್ಟಿ ಐಲ್ಯಾಂಡ್ ಮೂಲಕ ಮಾಹಿತಿ ನೀಡಿದರು. ನಂತರ ಸಿಸಿಟಿವಿ ಕ್ಯಾಮರಾ ಪರಿಶೀಲನೆ ಮಾಡಿ ಅಧಿಕಾರಿಗಳು ಸ್ಪಂದಿಸಿದ್ದಾರೆ. ಬಳಿಕ ಆಟೋ ಡ್ರೈವರ್ ಅನ್ನು ಪತ್ತೆ ಮಾಡಿ ವಸ್ತುಗಳನ್ನು ಮರಳಿ ನೀಡಲಾಗಿದೆ. ಮೊಬೈಲ್ ಸಹ ಇಲ್ಲದೆ ಸೇಫ್ಟಿ ಐಲ್ಯಾಂಡ್ ಉಪಯೋಗ ಮಾಡಿದ್ದಾರೆ. ಘಟನೆ ಆಗಿದ್ದ ನಂತರ ಕೆಲವೇ ಘಂಟೆ ಯಲ್ಲಿ ಪತ್ತೆಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:49 pm, Tue, 27 June 23