ಉತ್ತರಕನ್ನಡ: ಹೆಚ್ಚಾಗುತ್ತಿವೆ ಮಹಿಳೆಯರು, ಯುವತಿಯರ ನಾಪತ್ತೆ ಪ್ರಕರಣಗಳು!; ಈ ಕುರಿತ ವರದಿ ಇಲ್ಲಿದೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಿಳೆಯರು ಹಾಗೂ ಯುವತಿಯರ ನಾಪತ್ತೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆತಂಕ ಸೃಷ್ಟಿಸಿದೆ. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ.

ಉತ್ತರಕನ್ನಡ: ಹೆಚ್ಚಾಗುತ್ತಿವೆ ಮಹಿಳೆಯರು, ಯುವತಿಯರ ನಾಪತ್ತೆ ಪ್ರಕರಣಗಳು!; ಈ ಕುರಿತ ವರದಿ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: shivaprasad.hs

Updated on: Dec 03, 2021 | 5:00 PM

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದೀಚಿಗೆ ನಾಪತ್ತೆ ಪ್ರಕರಣಗಳು ಹೆಚ್ಚಾಗತೊಡಗಿವೆ. ಅದರಲ್ಲೂ ಈ ವರ್ಷದ 10 ತಿಂಗಳಲ್ಲೇ ಬರೋಬ್ಬರಿ 232 ನಾಪತ್ತೆ ಪ್ರಕರಣಗಳು ದಾಖಲಾಗಿವೆ‌. ಈ ಪೈಕಿ ಮಹಿಳೆಯರು, ಯುವತಿಯರು ಹೆಚ್ಚಾಗಿದ್ದಾರೆನ್ನುವುದು ಆತಂಕದ ಸಂಗತಿಯಾಗಿದೆ. ಜಿಲ್ಲೆಯಲ್ಲಿ ಕೋವಿಡ್​ಗೂ ಮುಂಚೆ, ಅಂದರೆ 2019ರಲ್ಲಿ 257 ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ 236 ಪ್ರಕರಣಗಳಲ್ಲಿ ನಾಪತ್ತೆಯಾದವರನ್ನು ಪೊಲೀಸರು ಹುಡುಕಿದ್ದರೆ, 21 ಪ್ರಕರಣಗಳು ಇನ್ನೂ ತನಿಖೆಯ ಹಂತದಲ್ಲಿದ್ದವು. ಕೋವಿಡ್ ಸಮಯದಲ್ಲಿ (2020) ಲಾಕ್ ಡೌನ್ ಇದ್ದರೂ ಕೂಡ 212 ನಾಪತ್ತೆ ಪ್ರಕರಣ ದಾಖಲಾಗಿತ್ತು. ಅದರಲ್ಲಿ 197 ಮಂದಿ ಪತ್ತೆಯಾಗಿದ್ದು, 15 ಮಂದಿಗಾಗಿ ಇನ್ನೂ ಹುಡುಕಾಟ ಮುಂದುವರಿದಿದೆ. ಈ ಎರಡು ವರ್ಷದಲ್ಲಿ ನಾಪತ್ತೆ ಪ್ರಕರಣದ ಅಂಕಿ- ಅಂಶ ಸಾಧಾರಣವಾಗಿತ್ತೆಂದು ಪರಿಗಣಿಸಿದರೆ, 2021 ಅಂದರೆ ಪ್ರಸ್ತುತ ವರ್ಷದ ಅಂಕಿ- ಅಂಶ ಗಾಬರಿ ಹುಟ್ಟಿಸುವಂಥದ್ದು!

2021ರ ವರ್ಷ ಮುಗಿಯಲು ಇನ್ನೂ ಒಂದು ತಿಂಗಳು ಬಾಕಿ ಇದೆ. ಆದರೆ ಪ್ರಸ್ತುತ ನವೆಂಬರ್ ತಿಂಗಳನ್ನು ಹೊರತುಪಡಿಸಿ ಜನವರಿಯಿಂದ ಅಕ್ಟೋಬರ್ ವರೆಗೆ 232 ನಾಪತ್ತೆ ಪ್ರಕರಣ ದಾಖಲಾಗಿದೆ. ಇದು ಹತ್ತು ತಿಂಗಳ ಅಂಕಿ- ಅಂಶವಾದರೆ, ನವೆಂಬರ್ ಒಂದೇ ತಿಂಗಳಲ್ಲಿ 20ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎನ್ನುತ್ತವೆ ಪೊಲೀಸ್ ಮೂಲಗಳು. ಈ ಹತ್ತು ತಿಂಗಳಲ್ಲಿ ದಾಖಲಾದ 232 ಪ್ರಕರಣಗಳ ಪೈಕಿ 194 ಮಂದಿ ಪತ್ತೆಯಾಗಿದ್ದಾರೆ. 38 ಮಂದಿಯದ್ದು ಇನ್ನೂ ಸುಳಿವಿಲ್ಲ‌. ಇನ್ನು ಈ ತಿಂಗಳಿನದ್ದೂ ಸೇರಿದರೆ 50ಕ್ಕೂ ಹೆಚ್ಚು ಮಂದಿ ಎಲ್ಲಿದ್ದಾರೆ, ಹೇಗೆ ನಾಪತ್ತೆಯಾಗಿದ್ದಾರೆಂಬ ಕಾರಣವೇ ನಿಗೂಢವಾಗಿದೆ.

ನಾಪತ್ತೆಗೆ ಕಾರಣ ಏನಿರಬಹುದು? ಇಷ್ಟೊಂದು ಪ್ರಕರಣಗಳಲ್ಲಿ ಬಹುತೇಕವು ಒಪ್ಪಿತ ನಾಪತ್ತೆ ಪ್ರಕರಣಗಳಾಗಿವೆ. ಅಂದರೆ ಪ್ರೀತಿ- ಪ್ರೇಮ, ಅನೈತಿಕ ಸಂಬಂಧ ಇತ್ಯಾದಿ ವೈಯಕ್ತಿಕ ಕಾರಣಗಳಿಂದಾಗಿ ಮನೆ ಬಿಟ್ಟು ಹೋದವರಾಗಿದ್ದಾರೆ‌. ಬೆರಳೆಣಿಕೆಯಷ್ಟು ಪ್ರಕರಣಗಳಲ್ಲಿ ಅಪಹರಣದ ಶಂಕೆ ಇದ್ದು, ಇನ್ನೂ ಕೆಲವು ಮಾನಸಿಕವಾಗಿ ಅಸ್ವಸ್ಥಗೊಂಡು ನಾಪತ್ತೆಯಾದವರಾಗಿದ್ದಾರೆ ಎನ್ನುತ್ತವೆ ಪೊಲೀಸ್ ಮೂಲಗಳು.

ಈ ನಾಪತ್ತೆ ಪ್ರಕರಣಗಳಲ್ಲಿ ವಿವಾಹಿತ ಮಹಿಳೆಯರು, ಶಾಲಾ- ಕಾಲೇಜು ಯುವತಿಯರು ಹೆಚ್ಚಾಗಿದ್ದು, ಇದಕ್ಕೆ ಸಾಮಾಜಿಕ ಜಾಲತಾಣಗಳೇ ಹೆಚ್ಚು ಕಾರಣವಾಗಿದೆ. ಫೇಸ್​ಬುಕ್, ವಾಟ್ಸಪ್​ನಂಥ ಸಾಮಾಜಿಕ ಜಾಲತಾಣಗಳಲ್ಲಿ ಪ್ರೀತಿಯ ಬಲೆಗೆ ಬಿದ್ದು ಮನೆ ತೊರೆದವರು ಹೆಚ್ಚಿದ್ದು, ಕೋವಿಡ್ ಲಾಕ್ ಡೌನ್ ಕಾರಣದಿಂದಾಗಿ ಸಾಮಾಜಿಕ ಜಾಲತಾಣಗಳ ಬಳಕೆ ಅತಿಯಾಗಿರುವುದು ಇದಕ್ಕೆಲ್ಲ ಕಾರಣ ಎನ್ನುತ್ತವೆ ಬಲ್ಲ ಮೂಲಗಳು.

ಪೊಲೀಸ್ ವರಿಷ್ಠಾಧಿಕಾರಿಗಳು ಏನಂತಾರೆ? ಇನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್ ಅವರು ವರ್ಗಾವಣೆಗೊಂಡು ಜಿಲ್ಲೆಗೆ ನಿಯುಕ್ತಿಗೊಂಡು ಅರ್ಧ ತಿಂಗಳಾಗಿದೆ. ನಾಪತ್ತೆ ಪ್ರಕರಣಗಳ ಬಗ್ಗೆ ಅಧೀನ ಅಧಿಕಾರಿಗಳಿಂದ ಮಾಹಿತಿ ಪಡೆದಿರುವ ಅವರು, ಇನ್ನೂ ಪತ್ತೆಯಾಗದವರ ಬಗ್ಗೆ ಅಧ್ಯಯನ ನಡೆಸಿದ್ದಾರೆ. ನಾಪತ್ತೆ ಪ್ರಕರಣಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘‘ಈ ಕುರಿತು ಚರ್ಚೆ ನಡೆಸಿದ್ದೇನೆ. ಇನ್ನೂ ಪತ್ತೆಯಾಗದ ಹಳೆಯ ಪ್ರಕರಣಗಳು ಸಾಕಷ್ಟಿವೆ ಎಂಬುದು ಗಮನಕ್ಕೆ ಬಂದಿದೆ. ಕೆಲವು ಪ್ರಕರಣಗಳಲ್ಲಿ ಮಹಿಳೆಯರು ಪರಿಚಿತರೊಂದಿಗೆ ನಾಪತ್ತೆಯಾಗಿರುವುದು ಇದೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಯುವತಿಯರು ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾದ ಅಪರಿಚಿತರೊಂದಿಗೆ ನಾಪತ್ತೆಯಾದ ಪ್ರಕರಣಗಳೂ ಇವೆ. ಹೆಚ್ಚು ವರ್ಷಗಳಿಂದ ಇನ್ನೂ ಪತ್ತೆಯಾಗದ ಪ್ರಕರಣಗಳಿಗೆ ಹೆಚ್ಚು ಮಹತ್ವ ನೀಡಿ, ಅವರನ್ನು ಪತ್ತೆ ಮಾಡುವ ಕಾರ್ಯ ಮಾಡಲಾಗುವುದು. ಜೊತೆಗೆ ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡಲಾಗುವುದು’’ ಎಂದಿದ್ದಾರೆ.

Uttara Kannada women missing cases stats

ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ನಾಪತ್ತೆಯಾದವರ ಅಂಕಿಅಂಶ ಇಲ್ಲಿದೆ

ವರದಿ: ದೇವರಾಜ ನಾಯ್ಕ್

ಇದನ್ನೂ ಓದಿ:

ಕೈ ತುಂಬ ಸಂಬಳ ಕೊಟ್ಟರೂ ಲಂಚ ತಗೊಂಡು ನಾಯಿ ಹಾಗೆ ಬಿದ್ದಿರುತ್ತಾರೆ; ಪೊಲೀಸರ ವಿರುದ್ಧ ಕೂಗಾಡಿದ ಆರಗ ಜ್ಞಾನೇಂದ್ರ

ರೌಡಿಸಂ ದೃಶ್ಯಕ್ಕೆ ಮಾದೇಶ್ವರನ ಹಾಡು; ‘ಗರುಡ ಗಮನ..’ ಬಗ್ಗೆ ಶಾಂತಮಲ್ಲಿಕಾರ್ಜುನ ಸ್ವಾಮಿ ಬಹಿರಂಗ ಪತ್ರ

ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ