ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮುಗೆ ಯಕ್ಷಗಾನ ಪದ್ಯದ ಮೂಲಕ ಕಲಾವಿದೆಯ ಅಭಿನಂದನೆ

| Updated By: ನಯನಾ ರಾಜೀವ್

Updated on: Jul 24, 2022 | 12:44 PM

ಭಾರತದ ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮು ಅವರಿಗೆ ಯಕ್ಷಗಾನ ಪದ್ಯದ ಮೂಲಕ ಕಲಾವಿದೆ ಚಿಂತನಾ ಹೆಗಡೆ ಅಭಿನಂದನೆ ಸಲ್ಲಿಸಿದ್ದಾರೆ.

ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮುಗೆ ಯಕ್ಷಗಾನ ಪದ್ಯದ ಮೂಲಕ ಕಲಾವಿದೆಯ ಅಭಿನಂದನೆ
Chintana
Follow us on

ಭಾರತದ ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮು ಅವರಿಗೆ ಯಕ್ಷಗಾನ ಪದ್ಯದ ಮೂಲಕ ಕಲಾವಿದೆ ಚಿಂತನಾ ಹೆಗಡೆ ಅಭಿನಂದನೆ ಸಲ್ಲಿಸಿದ್ದಾರೆ. ಚಿಂತನಾ ಹೆಗಡೆ  ಮಾಳಕೋಡ್ 17 ವರ್ಷದ ಕಲಾವಿದೆಯಾಗಿದ್ದು,  ಸುಬ್ರಹ್ಮಣ್ಯ ಪದವಿ ಪೂರ್ವ ಕಾಲೇಜು, ಕವಲಕ್ಕಿಯಲ್ಲಿ ಕಲಾ ವಿಭಾಗದಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಾರೆ, ಸುಮಾರು 5 ವರ್ಷಗಳಿಂದ ಯಕ್ಷಗಾನ ಅಭ್ಯಾಸ ಮಾಡುತ್ತಿದ್ದಾರೆ.

ಯಕ್ಷ ಮಾಣಿಕ್ಯ ಎಂದೇ ಖ್ಯಾತಿ ಪಡೆದಿರುವ ಅವರು ನಿರಂತರವಾಗಿ 4 ಗಂಟೆ ಕಾಲ ಯಕ್ಷಗಾನ ಬಡಗು ವಿಭಾಗದಲ್ಲಿ ಪ್ರಧಾನ ಭಾಗವತಿಕೆ ಮಾಡಿರುವ ಹೆಗ್ಗಳಿಕೆ ಇದೆ.

ಈಗ ಹೊನ್ನಾವರದ ಮಾಳಗೋಡಿನ ಯಕ್ಷಪಲ್ಲವಿ ಮೇಳ (ಮಂಡಳಿ) ದಲ್ಲಿ ಪ್ರಧಾನ ಭಾಗವತರಾದ ಚಿಂತನಾ ಅವರ ತಂದೆ ಉದಯ್ ಹೆಗಡೆಯವರು ಅವರೇ ಆಕೆಗೆ ಗುರುಗಳಾಗಿದ್ದಾರೆ. ಚಿಂತನಾ ಅವರಿಗೆ ಅವರ ತಂದೆಯವರೇ ಗುರುಗಳು, ಉದಯ್ ಅವರು 35 ವರ್ಷಗಳಿಂದ ಯಕ್ಷಗಾನ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.

ಮೊಟ್ಟ ಮೊದಲ ಬಾರಿಗೆ ಬುಡಕಟ್ಟು ಜನಾಂಗದ ಮಹಿಳೆ ದ್ರೌಪದಿ ಮುರ್ಮು ರವರು ದೇಶದ ಪ್ರತಿಷ್ಟಿತ ರಾಷ್ಟ್ರಪತಿ ಸ್ಥಾನ ಅಲಂಕರಿಸಿರುವುದಕ್ಕೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಮಾಳಕೋಡ್ ಗ್ರಾಮದ ಬಾಲಕಿ ಕು.ಚಿಂತನಾ ಹೆಗಡೆ ಯಕ್ಷಗಾನದ ಭಾಗವತಿಕೆ ಮೂಲಕ ದ್ರೌಪದಿ ಮುರ್ಮು ರವರಿಗೆ ಸ್ವಾಗತ ಕೋರುವ ಮೂಲಕ ಇದೀಗ ಸುದ್ದಿಯಾಗಿದ್ದಾರೆ. ಹೆಜ್ಜೆ ಇಟ್ಟಿಹಳು ದ್ರೌಪದಿ. ರಾಷ್ಟ್ರಪತಿಯ ಭವನದಲಿ.

ಭಾರತ ಮಹಾಭಾರತವಾಗಲಿ..ಧರ್ಮರಾಯನ ನ್ಯಾಯಾಂಗ ಸಂವಿಧಾನ ವಿಹುದು..ಭೀಮ ಬಲದ ಸೇನಾಬಲ ವಿಹುದು ಎಂದು ಬಡಗು ತಿಟ್ಟು ಶೈಲಿಯಲ್ಲಿ ಕು.ಚಿಂತನ ಹೆಗಡೆ ಹಾಡಿದ್ದಾರೆ.ಉಡುಪಿಯ ಅರವಿಂದ ಚಿಪ್ಳೂಣ್ಕರ್ ರವರು ಈ ಹಾಡನ್ನು ರಚಿಸಿದ್ದು ಇದೀಗ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ

ಯಕ್ಷಗಾನ : ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ-ಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ. ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಕರ್ನಾಟಕದ ಕರಾವಳಿ ಜಿಲ್ಲೆಗಳು (ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ), ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಯಕ್ಷಗಾನವು ಮನೆ ಮಾತಾಗಿದೆ.

 

Published On - 12:34 pm, Sun, 24 July 22