AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Draupadi Murmu: ಸಾಂಪ್ರದಾಯಿಕ ಸಂತಾಲಿ ಸೀರೆಯುಟ್ಟು ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ದ್ರೌಪದಿ ಮುರ್ಮು

ಭಾರತದ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಸಾಂಪ್ರದಾಯಿಕ ಸಂತಾಲಿ ಶೈಲಿಯ ಸೀರೆಯುಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Draupadi Murmu: ಸಾಂಪ್ರದಾಯಿಕ ಸಂತಾಲಿ ಸೀರೆಯುಟ್ಟು ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ದ್ರೌಪದಿ ಮುರ್ಮು
Draupadi murmuImage Credit source: NDTV
TV9 Web
| Updated By: ನಯನಾ ರಾಜೀವ್|

Updated on:Jul 24, 2022 | 12:10 PM

Share

ಭಾರತದ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಸಾಂಪ್ರದಾಯಿಕ ಸಂತಾಲಿ ಶೈಲಿಯ ಸೀರೆಯುಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆಕೆಯ ಅತ್ತಿಗೆ ಸುಕ್ರಿ ತುಡು ಪೂರ್ವ ಭಾರತದಲ್ಲಿ ಸಂತಾಲ್ ಮಹಿಳೆಯರು ಬಳಸುವ ವಿಶೇಷ ಸೀರೆಯೊಂದಿಗೆ ದೆಹಲಿಗೆ ಪ್ರಯಾಣಿಸುತ್ತಿದ್ದಾರೆ.

ಸಂಸತ್ತಿನ ಕೇಂದ್ರ ಸಭಾಂಗಣದಲ್ಲಿ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ವೀಕ್ಷಿಸಲು ಸುಕ್ರಿ ಅವರು ತಮ್ಮ ಪತಿ ತಾರಿನಿಸೇನ್ ತುಡು ಅವರೊಂದಿಗೆ ಶನಿವಾರ ದೆಹಲಿಗೆ ತೆರಳಿದ್ದಾರೆ.

ನಾನು ಅಕ್ಕನಿಗಾಗಿ ಸಂತಾಲಿ ಸಾಂಪ್ರದಾಯಿಕ ಸೀರೆಯನ್ನು ಒಯ್ಯುತ್ತಿದ್ದೇನೆ ಮತ್ತು ಪ್ರಮಾಣ ವಚನ ಸ್ವೀಕಾರದ ಸಮಯದಲ್ಲಿ ಅವರು ಅದನ್ನು ಧರಿಸಬೇಕೆಂದು ಪ್ರಾರ್ಥಿಸುತ್ತೇನೆ. ಈ ಸಂದರ್ಭದಲ್ಲಿ ಅವರು ನಿಜವಾಗಿ ಏನು ಧರಿಸುತ್ತಾರೆ ಎಂದು ನನಗೆ ಖಚಿತವಿಲ್ಲ. ರಾಷ್ಟ್ರಪತಿ ಭವನವು ಹೊಸ ಅಧ್ಯಕ್ಷರ ಉಡುಗೆಯನ್ನು ನಿರ್ಧರಿಸುತ್ತದೆ, ಎಂದು ಸುಕ್ರಿ ಹೇಳಿದ್ದಾರೆ.

ದೇಶದ ನೂತನ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆಯಾಗಿದ್ದಾರೆ. ಅವರು ಬುಡಕಟ್ಟು ಸಮುದಾಯದ ಮೊದಲ ಮಹಿಳಾ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಾಮಾನ್ಯ ಬುಡಕಟ್ಟು ಮಹಿಳೆಯಿಂದ ದೇಶದ ರಾಷ್ಟ್ರಪತಿ ಹುದ್ದೆಗೆ ಮುರ್ಮು ಅವರ ಪ್ರಯಾಣ ಖಂಡಿತವಾಗಿಯೂ ಸುಲಭವಲ್ಲ. ದ್ರೌಪದಿ ಮುರ್ಮು ಅವರದು ಸರಳ ಜೀವನ. ಆಕೆಯ ಉಡುಗೆಯಾದ ಸಂತಾಲಿ ಸೀರೆ ಕೂಡ ಇದೀಗ ಸುದ್ದಿಯಲ್ಲಿದೆ.

ದ್ರೌಪದಿ ಮುರ್ಮು ಅವರ ಶೈಲಿ ದ್ರೌಪದಿ ಮುರ್ಮು ಅಥವಾ ಪೀಚ್, ಕೆನೆ ಅಥವಾ ಗುಲಾಬಿಯಂತಹ ತೆಳು ಬಣ್ಣಗಳಲ್ಲಿ ಸಂತಾಲಿ ಸೀರೆಯನ್ನು ಧರಿಸುತ್ತಾರೆ. ಕೈಮಗ್ಗ ಸೀರೆ: ಹಿಂದಿನ ಕಾಲದಲ್ಲಿ, ಸಂತಾಲಿ ಸೀರೆಗಳನ್ನು ಬಿಲ್ಲು ಮತ್ತು ಬಾಣದ ವಿನ್ಯಾಸಗಳೊಂದಿಗೆ ಕಸೂತಿ ಮಾಡಲಾಗಿತ್ತು. ಸೀರೆಯ ಮೇಲಿನ ಈ ವಿನ್ಯಾಸವು ಮಹಿಳೆಯರ ಸ್ವಾತಂತ್ರ್ಯದ ಬಯಕೆಯ ಸಂಕೇತವಾಗಿತ್ತು.

ಸೀರೆಯನ್ನು ಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸಲಾಗುತ್ತದೆ. ಬಣ್ಣಬಣ್ಣದ ಎಳೆಗಳನ್ನು ಹೊಂದಿರುವ ಬಿಳಿ ಹತ್ತಿ ಬಟ್ಟೆಯ ಮೇಲೆ ‘ಚೆಕ್ಸ್’ (ವಿನ್ಯಾಸ) ನೇಯಲಾಗುತ್ತದೆ.

ಆದರೆ, ಸೀರೆಯನ್ನು ವಿಶೇಷ ಸಂದರ್ಭಗಳಲ್ಲಿ ಅಥವಾ ಸಮಾರಂಭಗಳಲ್ಲಿ ಮಾತ್ರ ಧರಿಸಲಾಗುತ್ತದೆ. ಸಂತಾಲಿ ಬುಡಕಟ್ಟು ಸಮಾಜವು ಲಗ್ನ ಸಮಾರಂಭದಲ್ಲಿ ಈ ಸೀರೆಯನ್ನು ಧರಿಸುವುದಿಲ್ಲ. ಹಳದಿ ಅಥವಾ ಕೆಂಪು ಸೀರೆಯನ್ನು ಧರಿಸಲಾಗುತ್ತದೆ ಅಥವಾ ಉಡುಗೊರೆಯಾಗಿ ನೀಡಲಾಗುತ್ತದೆ.

ಒಡಿಶಾದ ಸ್ಥಳೀಯ ಮಾರುಕಟ್ಟೆಯಲ್ಲಿ ಈ ಸೀರೆಗಳ ಬೆಲೆ 1000 ರಿಂದ 5000 ರೂಪಾಯಿಗಳವರೆಗೆ ಇರುತ್ತದೆ. ಆದರೆ ಸೀರೆಯನ್ನು ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಮಾತ್ರ ಖರೀದಿಸಿದರೆ, ಬ್ರ್ಯಾಂಡ್ ಅನ್ನು ಅವಲಂಬಿಸಿ, ಅದರ ಬೆಲೆ ಹೆಚ್ಚಾಗುತ್ತದೆ.

Published On - 12:04 pm, Sun, 24 July 22