Ram Nath Kovind: ಸಂಜೆ 7 ಗಂಟೆಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ವಿದಾಯ ಭಾಷಣ
ರಾಮ್ ನಾಥ್ ಕೋವಿಂದ್ ಅವರ ಭಾಷಣವನ್ನು ಆಲ್ ಇಂಡಿಯಾ ರೇಡಿಯೊ (AIR) ಸೇರಿದಂತೆ, ರಾಷ್ಟ್ರೀಯ ನೆಟ್‌ವರ್ಕ್ ಚಾನೆಲ್ನಲ್ಲಿ ಸಂಜೆ 7 ಗಂಟೆಯಿಂದ ನೇರ ಪ್ರಸಾರ ಮಾಡಲಾಗುತ್ತಿದ್ದು, ದೂರದರ್ಶನದ ಎಲ್ಲಾ ಚಾನಲ್‌ಗಳಲ್ಲಿ ಪ್ರಸಾರವಾಗಲಿದೆ.
ನವ ದೆಹಲಿ: ಭಾರತದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ (Ramnath Kovind) ಅವರು ಅಧಿಕಾರ ತ್ಯಜಿಸುವ ಮುನ್ನಾದಿನ ಅಂದರೆ ಭಾನುವಾರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ರಾಷ್ಟ್ರಪತಿ ಕಚೇರಿ ತಿಳಿಸಿದೆ. ರಾಮ್ ನಾಥ್ ಕೋವಿಂದ್ ಅವರ ಭಾಷಣವನ್ನು ಆಕಾಶವಾಣಿ (AIR) ರಾಷ್ಟ್ರೀಯ ನೆಟ್‌ವರ್ಕ್ ಚಾನೆಲ್ನಲ್ಲಿ ಸಂಜೆ 7 ಗಂಟೆಯಿಂದ ನೇರ ಪ್ರಸಾರ ಮಾಡಲಾಗುತ್ತಿದ್ದು, ದೂರದರ್ಶನದ ಎಲ್ಲಾ ಚಾನಲ್‌ಗಳಲ್ಲಿ ಪ್ರಸಾರವಾಗಲಿದೆ. ಶುಕ್ರವಾರದಂದು ದ್ರೌಪದಿ ಮುರ್ಮು ಅವರು ವಿರೋಧ ಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಸೋಲಿಸಿದ ನಂತರ ಭಾರತದ ಮುಂದಿನ ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆಯಾಗಿದ್ದರು. ಅವರು ಸೋಮವಾರ (ಜುಲೈ 25) ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇದನ್ನೂ ಓದಿ: Draupadi Murmu: ದ್ರೌಪದಿ ಮುರ್ಮು ನೂತನ ರಾಷ್ಟ್ರಪತಿ; ಶಿಕ್ಷಕಿಯಿಂದ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆವರೆಗಿನ ಪಯಣ
64 ವರ್ಷ ವಯಸ್ಸಿನ ದ್ರೌಪದಿ ಮುರ್ಮು ಯಶವಂತ್ ಸಿನ್ಹಾ ವಿರುದ್ಧ 64 ಪ್ರತಿಶತಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ್ದಾರೆ. ರಾಮ್ ನಾಥ್ ಕೋವಿಂದ್ ಅವರ ನಂತರ ದೇಶದ 15ನೇ ರಾಪ್ಟ್ರಪತಿಯಾಗಿದ್ದಾರೆ. ದ್ರೌಪದಿ ಮುರ್ಮು ಬುಡಕಟ್ಟು ಹಿನ್ನೆಲೆಯಿಂದ ಬಂದು, ರಾಷ್ಟ್ರಪತಿಯಾದ ಮೊದಲ ವ್ಯಕ್ತಿಯಾಗಿದ್ದಾರೆ. ಹಾಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಅಧಿಕಾರಾವಧಿ ಜುಲೈ 24 ರಂದು ಕೊನೆಗೊಳ್ಳಲಿದ್ದು, ಮುರ್ಮು ಅವರು ಜುಲೈ 25 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 64 ವರ್ಷ ವಯಸ್ಸಿನ ಮುರ್ಮು ಅವರು ರಾಷ್ಟ್ರಪತಿ ಸ್ಥಾನಕ್ಕೇರಿದ ಎರಡನೇ ಮಹಿಳೆಯಾಗಿದ್ದಾರೆ.
ದ್ರೌಪದಿ ಮುರ್ಮ ಗೆಲುವಿಗೆ ದೇಶದಾದ್ಯಂತ ಸಂಭ್ರಮಾಚರಣೆ ಮಾಡಿದ್ದು, ನಾಯಕರಿಂದ ಅಭಿನಂದನೆಗಳ ಮಹಾಪೂರವೇ ಹರದು ಬಂದಿವೆ. ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿರುವ ದ್ರೌಪದಿ ಮುರ್ಮ ಅವರ ಮನೆಗೆ ಭೇಟಿ ನೀಡಿ ಶುಭ ಹಾರೈಸಿದ್ದಾರೆ. ಭಾರತವು ಇತಿಹಾಸವನ್ನು ಬರೆಯುತ್ತಿದೆ. 1.3 ಶತಕೋಟಿ ಭಾರತೀಯರು ಆಜಾದಿ ಕಾ ಅಮೃತ ಮಹೋತ್ಸವವನ್ನು ಗುರುತಿಸುತ್ತಿರುವ ಸಮಯದಲ್ಲಿ, ಪೂರ್ವ ಭಾರತದ ದೂರದ ಭಾಗದಲ್ಲಿ ಜನಿಸಿದ ಬುಡಕಟ್ಟು ಸಮುದಾಯದಿಂದ ಬಂದ ಭಾರತದ ಮಗಳು ನಮ್ಮ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದಕ್ಕಾಗಿ ಶ್ರೀಮತಿ ದ್ರೌಪದಿ ಮುರ್ಮು ಜಿ ಅವರ ಸಾಧನೆಗೆ ಅಭಿನಂದನೆಗಳು ಎಂದು ಅವರು ಟ್ವಿಟರ್‌ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಬೀಳ್ಕೊಡುಗೆ ಸಮಾರಂಭದ ಚಿತ್ರಗಳು ಇಲ್ಲಿವೆ
ದೇಶದ ಉನ್ನತ ಹುದ್ದೆಯನ್ನಲಂಕರಿಸಿದ ಬುಡಕಟ್ಟು ಜನಾಂಗದ ಮೊದಲ ಮತ್ತು ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದ ಎರಡನೇ ಎಂಬ ಹೆಗ್ಗಳಿಕೆಗೆ ಮುರ್ಮು ಪಾತ್ರವಾಗಿದ್ದಾರೆ. 2007 ಜುಲೈ 25ರಂದು ಪ್ರತಿಭಾ ಪಾಟೀಲ್ ರಾಷ್ಟ್ರಪತಿ ಆಗಿದ್ದರು. ಒಡಿಶಾದ ಬುಡಕಟ್ಟು ಜನಾಂಗದವರು ಮುರ್ಮು. ನಿರ್ದಿಷ್ಟವಾಗಿ ಹೇಳಬೇಕಾದರೆ ಸಂತಾಲರು. ಸಂತಾಲಿಗಳು ಒಡಿಶಾ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ನಿಂದ ಬಂದವರು. ಆದರೆ ಅವರು ತಮ್ಮ ರಾಜ್ಯದಲ್ಲಿನ ಗುರುತಿನಿಂದಾಗಿ ತಮ್ಮ ಅಸ್ಮಿತೆ ಕಳೆದುಕೊಂಡಿದ್ದಾರೆ. ದ್ರೌಪದಿ ಮುರ್ಮು ವಿಷಯದಲ್ಲೂ ಇದೇ ಆಗಿದೆ. ಆಕೆ ಒಡಿಶಾದ ಕಡಿಮೆ ಪರಿಚಿತ ಮಯೂರ್‌ಭಂಜ್ ಜಿಲ್ಲೆಯ ಸಂತಾಲ ಆಗಿದ್ದಾರೆ. ಮೂಲತಃ, ಅವರು ಬರಿಪಾದದಿಂದ 82 ಕಿಮೀ ಮತ್ತು ರಾಜ್ಯದ ರಾಜಧಾನಿ ಭುವನೇಶ್ವರದಿಂದ 287 ಕಿಮೀ ದೂರದಲ್ಲಿರುವ ತಹಸಿಲ್ ಪ್ರಧಾನ ಕಚೇರಿಯಾದ ರಾಯಿರಂಗಪುರದವರು. ಆಕೆಯ ಮನೆ ಈ ಹಿಂದೆ ಉಪರಬೇಡ ಗ್ರಾಮದಲ್ಲಿತ್ತು, ಇದು ಇತ್ತೀಚಿನವರೆಗೂ ವಿದ್ಯುತ್ ಸಂಪರ್ಕವನ್ನು ಹೊಂದಿಲ್ಲ.