‘ಬಸವ ಜಯಂತಿ ಆಚರಣೆಗೆ, ಸರ್ಕಾರಿ ಕಚೇರಿಯಲ್ಲಿ ಬಸವೇಶ್ವರರ ಫೋಟೋ ಇಡಲು ಸಿದ್ದರಾಮಯ್ಯ ಬರಬೇಕಾಯ್ತು’

ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಶ್ರೀಗಳು ಕಿಡಿ ಕಾರಿದ್ದಾರೆ. ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ನಾಯಕ. ಯಡಿಯೂರಪ್ಪ ಲಿಂಗಾಯತ ಸಮುದಾಯದ ನಾಯಕ ಆದ್ರೆ ಬಸವ ಜಯಂತಿ ಆಚರಿಸಲು, ಸರ್ಕಾರಿ ಕಚೇರಿಯಲ್ಲಿ ಬಸವೇಶ್ವರರ ಫೋಟೋ ಇಡಲು ಸಿದ್ದರಾಮಯ್ಯ ಬರಬೇಕಾಯಿತು ಎಂದಿದ್ದಾರೆ.

‘ಬಸವ ಜಯಂತಿ ಆಚರಣೆಗೆ, ಸರ್ಕಾರಿ ಕಚೇರಿಯಲ್ಲಿ ಬಸವೇಶ್ವರರ ಫೋಟೋ ಇಡಲು ಸಿದ್ದರಾಮಯ್ಯ ಬರಬೇಕಾಯ್ತು’
ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಶ್ರೀಗಳು
Updated By: KUSHAL V

Updated on: Nov 29, 2020 | 3:52 PM

ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ನಾಯಕ. ಯಡಿಯೂರಪ್ಪ ಲಿಂಗಾಯತ ಸಮುದಾಯದ ನಾಯಕ ಆದ್ರೆ ಬಸವ ಜಯಂತಿ ಆಚರಿಸಲು, ಸರ್ಕಾರಿ ಕಚೇರಿಯಲ್ಲಿ ಬಸವೇಶ್ವರರ ಫೋಟೋ ಇಡಲು ಸಿದ್ದರಾಮಯ್ಯ ಬರಬೇಕಾಯಿತು. ನೀವು ಈಗ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸಿ ನಿಮ್ಮ ಬದ್ಧತೆ ಪ್ರದರ್ಶಿಸಿ ಎಂದು ಮೈಸೂರಿನಲ್ಲಿ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ.

ಪಂಚಮಸಾಲಿ ಲಿಂಗಾಯತರಿಗೆ ಸಚಿವ ಸ್ಥಾನ ನೀಡಬೇಕೆಂದು ಸ್ವಾಮೀಜಿ ಮತ್ತೆ ಒತ್ತಾಯ ಮಾಡಿದ್ದಾರೆ. ಪಂಚಮಸಾಲಿ ಲಿಂಗಾಯತರಲ್ಲಿ ಸಾಕಷ್ಟು ಜನರು ಶಾಸಕರಾಗಿದ್ದಾರೆ. ಅವರಲ್ಲಿ ಒಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದೆ. ಕಳೆದ ಹರ ಜಾತ್ರೆಯಲ್ಲಿ ನೇರವಾಗಿ ಇದನ್ನು ಕೇಳಿದ್ದೆ. ಹೈಕಮಾಂಡ್ ಮುಂದಿನ ದಿನದಲ್ಲಿ ಸ್ಥಾನ ನೀಡುವ ಭರವಸೆ ನೀಡಿತ್ತು. ಈಗ ಆ ಭರವಸೆ ಈಡೇರಿಸಬೇಕು ಎಂದು ಆಗ್ರಹಿಸಿದ್ದಾರೆ.

ಲಿಂಗಾಯತ ಉಪಪಂಗಡದವರು ಕಡಿಮೆ ಸಂಖ್ಯೆಯಲ್ಲಿ ಶಾಸಕರಿದ್ದಾರೆ. ಅವರಿಗೆ ಹೆಚ್ಚಿನ ಸಚಿವ ಸ್ಥಾನ ಸಿಕ್ಕಿದೆ. ಈ ಅಸಮಾನತೆ ಈ ಬಾರಿ ನಿವಾರಣೆ ಆಗಬೇಕು ಎಂದರು.

ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಸೂಕ್ತ ವೇದಿಕೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗುವುದು. ಸದ್ಯ ಸರ್ಕಾರದಲ್ಲಿ ಬಹಳಷ್ಟು ಗೊಂದಲಗಳಿವೆ. ಗೊಂದಲ ಬಗೆಹರಿಸುವಂತೆ ರಾಷ್ಟ್ರೀಯ ನಾಯಕರಿಗೆ ತಿಳಿಸಿದ್ದೇನೆ. ರಾಜಕಾರಣಿಗಳು ತಪ್ಪು ಮಾಡಿದಾಗ ತಿದ್ದುವ ಶಕ್ತಿ, ಒಳ್ಳೆಯದು ಮಾಡಿದಾಗ ಬೆನ್ನು ತಟ್ಟುವ ಶಕ್ತಿ ನಮಗೆ ಇದೆ ಎಂದು ತಮ್ಮ ಸಮಾಜ ತನ್ನ ಬೇಡಿಕೆಯನ್ನು ಸಿಎಂ ಮುಂದಿಟ್ಟಿದೆ ಎಂದರು.

ಇದನ್ನೂ ಓದಿ: ಮೈಕೊರೆಯುವ ಚಳಿಯಲ್ಲಿ ಮನುಕುಲದ ಒಳಿತಿಗಾಗಿ ವಚನಾನಂದ ಸ್ವಾಮೀಜಿ ಪ್ರಾರ್ಥನೆ!

Published On - 3:30 pm, Sun, 29 November 20