ಹಳ್ಳಿ ಹೈದ ರೂಪಿಸಿದ ಸೋಲಾರ್ ಟ್ರಾಪ್​ ಈಗ ವಿದೇಶಿ ಕೃಷಿ ವಿವಿಗಳಲ್ಲಿ ಪಠ್ಯ: ಸರಳ ವಿನ್ಯಾಸ, ಅದ್ಭುತ ಕೆಲಸ

ಜಗತ್ತಿನ 22 ದೇಶದಲ್ಲಿ ಈತನ ಪ್ರಯೋಗದ ಬಗ್ಗೆ ಚರ್ಚೆ ಶುರುವಾಗಿದೆ. ಈಗಾಗಲೇ ಆರು ದೇಶಗಳಿಗೆ ಈತನ ಸೋಲಾರ್ ಟ್ರಾಪ್ ಹೋಗಿವೆ. ತರಕಾರಿ, ಹೂವು, ಹಣ್ಣು ಬೆಳೆಗಾರಿಗೆ ಇದು ಹೇಳಿ ಮಾಡಿಸಿದ ಯಂತ್ರವಾಗಿದೆ.

ಹಳ್ಳಿ ಹೈದ ರೂಪಿಸಿದ ಸೋಲಾರ್ ಟ್ರಾಪ್​ ಈಗ ವಿದೇಶಿ ಕೃಷಿ ವಿವಿಗಳಲ್ಲಿ ಪಠ್ಯ: ಸರಳ ವಿನ್ಯಾಸ, ಅದ್ಭುತ ಕೆಲಸ
Follow us
ಪೃಥ್ವಿಶಂಕರ
|

Updated on:Nov 29, 2020 | 6:39 PM

ದಾವಣಗೆರೆ: ಅವರು ಓದಿದ್ದೇ ಅಲ್ಪಸ್ವಲ್ಪ. ಆದ್ರೆ ಬುದ್ಧಿಶಕ್ತಿ ಮಾತ್ರ ಅದ್ಭುತ. ತಮ್ಮ ಜಮೀನಿನಲ್ಲಿಯೇ ಕುಳಿತು ರೂಪಿಸಿದ ಯಂತ್ರ, ಇಂದು ಜಗತ್ತಿನ 22 ದೇಶಗಳಲ್ಲಿ ರೈತರ ಗಮನ ಸೆಳೆದಿದೆ. ರಾಜ್ಯ ಕೃಷಿ ಇಲಾಖೆಯು ಇವರು ರೂಪಿಸಿರುವ ಯಂತ್ರವನ್ನು ಖರೀದಿಸಿ, 13 ಜಿಲ್ಲೆಗಳಲ್ಲಿ ಪ್ರಯೋಗ ಮಾಡುತ್ತಿದೆ. ಈ ರೈತ ಕುಶಲಿಯದ್ದು ಬೆಟ್ಟದಷ್ಟು ಸಾಧನೆ. ಇವರ ಪ್ರಯೋಗವನ್ನು ವಿದೇಶಿ ವಿವಿಗಳು ತಮ್ಮ ಪಠ್ಯಕ್ಕೆ ಅಳವಡಿಸುವ ಯೋಜನೆ ರೂಪಿಸಿಕೊಂಡಿವೆ.

ಪಟಪಟ ಅರಳು ಹುರಿದಂತೆ ಮಾತಾಡುವ ಈ ರೈತರ ಹೆಸರು ಕರಿಬಸಪ್ಪ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಜಿಗಳಿ ಗ್ರಾಮ. ಓದಿದ್ದು ಕೇವಲ ಹತ್ತನೇ ತರಗತಿ. ಇವರ ಬಳಿ ಈಗ ಸಾಪ್ಟವೇರ್ ಎಂಜಿನಿಯರ್ ಹಾಗೂ ಎಂಬಿಎ ಮಾಡಿದ ಹತ್ತು ಹುಡುಗರು ಕೆಲಸ ಮಾಡುತ್ತಿದ್ದಾರೆ.

ಜೀವನ ಬದಲಿಸಿದ ಆ ದೃಶ್ಯ ಇವರ ಸಾಧನೆಗಾಗಿ ಹಲವು ಕೃಷಿ ವಿಶ್ವವಿದ್ಯಾಲಯಗಳು ಇವರನ್ನು ಪುರಸ್ಕರಿಸಿವೆ. ಇಷ್ಟಕ್ಕೂ ಈತನ ಸಾಧನೆ ಏನು ಎಂಬುದನ್ನ ಹೇಳಲೇ ಇಲ್ವಲ್ಲಾ ಎನ್ನಬೇಡಿ. ಒಂದು ರಾತ್ರಿ ಮನೆಯಲ್ಲಿ ಕುಳಿತಿದ್ದಾಗ ಗ್ರಾಮದಲ್ಲಿ ವಿದ್ಯುತ್ ಇರಲಿಲ್ಲ. ಮನೆಗೆ ಬೆಳಕಿಗೆಂದು ಕಟ್ಟಿದ್ದ ಸೋಲಾರ್ ದೀಪಕ್ಕೆ ನೂರಾರು ಹುಳುಗಳು ಮುತ್ತಿಕೊಂಡಿದ್ದವು. ಈ ದೃಶ್ಯ ರೈತ ಕರಿಬಸಪ್ಪ ಅವರ ಜೀವನವನ್ನೇ ಬದಲಿಸಿತು. ಮೇಲಾಗಿ ಸಾವಿರಾರು ರೈತರಿಗೆ ದಾರಿದೀಪವಾಯಿತು.

ಅದೇನು ಅಂದ್ರಾ? ಅದೊಂದು ಸೋಲಾರ್ ಕೀಟನಾಶಕ ಯಂತ್ರ. ಸಣ್ಣದೊಂದು ಸೋಲಾರ್ ಪ್ಲೇಟ್ ಬಾಕ್ಸ್​ನ ಕೆಳಗೆ ಒಂದು ಲೈಟ್ ಹಾಕಿ, ಪ್ಲಾಸ್ಟಿಕ್ ಇಳಿಬಿಟ್ಟಿದ್ದಾರೆ. ಆ ಬುಟ್ಟಿಯಲ್ಲಿ ರಾಶಿರಾಶಿ ಕೀಟಗಳು ಬಿದ್ದಿವೆ. ಇಂತಹ ಯಂತ್ರವನ್ನ ನಿಮ್ಮ ಜಮೀನಿನಲ್ಲಿ ಹಾಕಿದರೂ ಕೀಟಗಳ ಬಾಧೆಯಿಂದ ತಪ್ಪಿಸಿಕೊಳ್ಳಬಹುದು. ಯಾವುದೇ ಕೀಟನಾಶಕ ಬಳಸದೇ ಕೀಟ ನಾಶ ಮಾಡಬಹುದು. ಈ ಸೋಲಾರ್ ಸ್ಟಾಂಡ್​ ಅನ್ನು ರಾತ್ರಿ ವೇಳೆ ಆನ್ ಮಾಡಿ ಇಟ್ಟರೇ ಬಹುತೇಕ ಕೀಟಗಳು ಲೈಟ್ ಸುತ್ತ ಸುತ್ತಾಡುತ್ತವೆ. ಕೆಳಗೆ ಇಡಲಾದ ಪ್ಲಾಸ್ಟಿಕ್ ಬುಟ್ಟಿಯಲ್ಲಿ ಸ್ವಲ್ಪ ಶಾಂಪು ಹಾಕಿದ ಅರ್ಧ ನೀರು ತುಂಬಿಟ್ಟರೆ ಸಾಕು. ನೀವು ಬೆಳೆಗೆ ಜಮೀನಿಗೆ ಹೋದ್ರೆ ಅದರಲ್ಲಿ ಸಾವಿರಾರು ಕೀಟಗಳು ಸುತ್ತು ಬಿದ್ದಿರುತ್ತವೆ.

ಪೇಟೆಂಟ್ ಸಿಕ್ಕಿದೆ ರೈತ ಕರಿಬಸಪ್ಪ ಕಳೆದ ಒಂದು ವರ್ಷದಲ್ಲಿ ಸುಮಾರು ಎಳು ಸಾವಿರ ರೈತರ ಜಮೀನಿನಲ್ಲಿ ಪ್ರಯೋಗ ಮಾಡಿದ್ದಾರೆ. ಮೇಲಾಗಿ ನೀವು ಒಂದು ಲೀಟರ್ ಕ್ರಿಮಿನಾಶಕ ಖರೀದಿಸಲು ಮಾರುಕಟ್ಟೆಯಲ್ಲಿ ನಾಲ್ಕು ಸಾವಿರ ರೂಪಾಯಿ ಕೊಡಬೇಕು. ಆದ್ರೆ ಇದೇ ಹಣದಲ್ಲಿ ಅಂದ್ರೆ ಕೇವಲ ₹ 4500 ರೂಪಾಯಿಯಲ್ಲಿ ರೈತ ಕರಿಬಸಪ್ಪ ಯಂತ್ರ ರೆಡಿ ಮಾಡಿ ನಿಮ್ಮ ಜಮೀನಿಗೆ ಫಿಟ್ ಮಾಡಿಕೊಡುತ್ತಾರೆ. ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಕೆಲ ರಾಜ್ಯದ ರೈತರು ಈ ಯಂತ್ರ ಖರೀದಿಸಿದ್ದಾರೆ. ಇವರು ಈ ಯಂತ್ರಕ್ಕೆ ಪೆಟೆಂಟ್ ಸಹ ಪಡೆದಿದ್ದಾರೆ. ರಾಜ್ಯ ಕೃಷಿ ಇಲಾಖೆಯು ಗದಗ ಜಿಲ್ಲೆಯ ರೋಣ ಮತ್ತು ನರಗುಂದ ತಾಲೂಕಿನಲ್ಲಿ ಇಂಥ 90 ಸೋಲಾರ್ ಸ್ಟಾಂಡ್ ಅಳವಡಿಸಲು ಮುಂದಾಗಿದೆ.

ಈ ಯಂತ್ರಕ್ಕೆ ರೈತರಿಂದ ಭಾರೀ ಬೇಡಿಕೆ ಬಂದಿದೆ. ಬೆಂಗಳೂರು ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯಗಳು ಇವರಿಗೆ ಉತ್ತಮ ಸಂಶೋಧಕ ಎಂದು ಪ್ರಶಸ್ತಿ ಸಹ ನೀಡಿವೆ. ಜಗತ್ತಿನ 22 ದೇಶದಲ್ಲಿ ಇವರ ಪ್ರಯೋಗದ ಬಗ್ಗೆ ಚರ್ಚೆ ಶುರುವಾಗಿದೆ. ಈಗಾಗಲೇ ಆರು ದೇಶಗಳಿಗೆ ಸೋಲಾರ್ ಟ್ರಾಪ್ ಹೋಗಿದೆ. ತರಕಾರಿ, ಹೂವು, ಹಣ್ಣು ಬೆಳೆಗಾರಿಗೆ ಇದು ಹೇಳಿ ಮಾಡಿಸಿದ ಯಂತ್ರವಾಗಿದೆ. ಮೇಲಾಗಿ ಕೀಟನಾಶಕ ಸಿಂಪಡಿಸದೆ ಬೆಳೆಗಳನ್ನು ಬೆಳೆದರೆ ಆಹಾರವೂ ವಿಷಮುಕ್ತವಾಗುತ್ತದೆ.

ಇನ್ಪೋಸಿಸ್ ಆವರಣದಲ್ಲಿ ಸೋಲಾರ್ ಟ್ರಾಪ್ ಈ ಯಂತ್ರದಿಂದ ರೈತರು ಬೆಳೆ ಉತ್ಪಾದನಾ ವೆಚ್ಚವನ್ನು ಶೇ 30ರಷ್ಟು ಕಡಿಮೆ ಮಾಡಿಕೊಳ್ಳಬಹುದು. ಪ್ರಸಿದ್ಧ ಸಾಫ್ಟ್​ವೇರ್ ಸಂಸ್ಥೆ ಇನ್ಫೋಸಿಸ್ ಸಹ ಇವರು ರೂಪಿಸಿರುವ ಸೋಲಾರ್ ಟ್ರಾಪ್​ಗಳನ್ನು ಸಂಸ್ಥೆಯ ಆವರಣದಲ್ಲಿ ಅಳವಡಿಸಲು ಮುಂದಾಗಿದೆ. ಈ ಹಿಂದೆ ಕರಿಬಸಪ್ಪ ತಾವೊಬ್ಬರೇ ಕೆಲಸ ಮಾಡುತ್ತಿದ್ದರು. ಈಗ ಸಂಬಳ ಕೊಟ್ಟು ಹತ್ತು ಹುಡುಗರನ್ನು ಕೆಲಕ್ಕೆ ಇಟ್ಟುಕೊಂಡಿದ್ದಾರೆ. ನಿತ್ಯ ಆದ ಬದಲಾವಣೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಾರೆ.

ಇವರ ಸಂಶೋಧನೆಯು ಈಗ ಜಾಗತಿಕ ಮಟ್ಟದಲ್ಲಿ ಸದ್ದುಮಾಡುತ್ತಿದೆ. ಕೆಲ ವಿದೇಶಿ ವಿವಿಗಳು ಇವರ ಪ್ರಯೋಗವನ್ನು ಪಠ್ಯದಲ್ಲಿ ಸೇರಿಸಲು ಮುಂದಾಗಿವೆ. ತಾವು ರೂಪಿಸಿರುವ ಯಂತ್ರವನ್ನು ವಿದೇಶಕ್ಕೆ ರಫ್ತು ಮಾಡಲು ಪರವಾನಗಿಯನ್ನೂ ಕರಿಬಸಪ್ಪ ಪಡೆದಿದ್ದಾರೆ. ಕರಿಬಸಪ್ಪ ಅವರಿಗೆ ಪ್ರಶಸ್ತಿಯ ಜೊತೆಗೆ, ₹ 5 ಲಕ್ಷ ನಗದು ಪುರಸ್ಕಾರ ನೀಡಿದ್ದಾರೆ.

-ಬಸವರಾಜ ದೊಡ್ಮನಿ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ರೈತ ಕರಿ ಬಸಪ್ಪ: 9880973218

Published On - 6:29 pm, Sun, 29 November 20

ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ