ತೀವ್ರ ಸ್ವರೂಪ ಪಡೆದುಕೊಂಡ ವಾಲ್ಮೀಕಿ ನಿಗಮ ಹಗರಣ: ಇಡಿ ಮೊರೆ ಹೋದ ಬಿಜೆಪಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 06, 2024 | 3:17 PM

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅವ್ಯವಹಾರ ಆರೋಪ ಕೇಸ್​​ ಸರ್ಕಾರಕ್ಕೆ, ಅದ್ರಲ್ಲೂ ಸಿಎಂ ಸಿದ್ದರಾಮಯ್ಯಗೆ ತಲೆನೋವಾಗಿ ಪರಿಣಮಿಸಿತ್ತು. ಸರ್ಕಾರ ಎಸ್​ಐಟಿಗೆ ವಹಿಸಿತ್ತು ಮತ್ತು ಇಬ್ಬರ ಬಂಧನ ಕೂಡ ಆಗಿದೆ. ಇದೀಗ ಪ್ರಕರಣದ ತನಿಖೆ ನಡೆಸುವಂತೆ ಇಡಿಗೆ ಬಿಜೆಪಿ ಮುಖಂಡ ಎನ್.ಆರ್.ರಮೇಶ್​ ಮತ್ತು ಕರ್ನಾಟಕ ರಾಷ್ಟ್ರ ಸಮಿತಿ ಇಡಿಗೆ ದೂರು ನೀಡಿದೆ.

ತೀವ್ರ ಸ್ವರೂಪ ಪಡೆದುಕೊಂಡ ವಾಲ್ಮೀಕಿ ನಿಗಮ ಹಗರಣ: ಇಡಿ ಮೊರೆ ಹೋದ ಬಿಜೆಪಿ
ತೀವ್ರ ಸ್ವರೂಪ ಪಡೆದುಕೊಂಡ ವಾಲ್ಮೀಕಿ ನಿಗಮ ಹಗರಣ: ಇಡಿ ಮೊರೆ ಹೋದ ಬಿಜೆಪಿ
Follow us on

ಬೆಂಗಳೂರು, ಜೂನ್​ 06: ರಾಜ್ಯ ಸರ್ಕಾರದ ಕಾಲಿಗೆ ಹಗರಣದ ಸುಳಿ ಸುತ್ತಿಕೊಂಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅವ್ಯವಹಾರ ಆರೋಪ ಕೇಸ್ (Valmiki Corporation Scam)​​ ಸರ್ಕಾರಕ್ಕೆ, ಅದ್ರಲ್ಲೂ ಸಿಎಂ ಸಿದ್ದರಾಮಯ್ಯಗೆ ತಲೆನೋವಾಗಿ ಪರಿಣಮಿಸಿತ್ತು. ಈ ಹಗರಣದ ತನಿಖೆಯನ್ನು ಇತ್ತೀಚೆಗೆ ಅಧಿಕೃತವಾಗಿ ಸರ್ಕಾರ ಎಸ್​ಐಟಿಗೆ ವಹಿಸಿತ್ತು ಮತ್ತು ಇಬ್ಬರ ಬಂಧನ ಕೂಡ ಆಗಿದೆ. ಇದೀಗ ಪ್ರಕರಣದ ತನಿಖೆ ನಡೆಸುವಂತೆ ಇಡಿಗೆ ಬಿಜೆಪಿ (bjp) ಮುಖಂಡ ಎನ್.ಆರ್.ರಮೇಶ್​ ಮತ್ತು ಕರ್ನಾಟಕ ರಾಷ್ಟ್ರ ಸಮಿತಿ ಇಡಿಗೆ ದೂರು ನೀಡಿದೆ.

ಸಚಿವರಷ್ಟೇ ಅಲ್ಲ, ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು: ಬಿ.ವೈ.ವಿಜಯೇಂದ್ರ ಆಗ್ರಹ

ಪ್ರಕರಣದ ಬಗ್ಗೆ ರಾಜಪಾಲರಿಗೂ ದೂರು ನೀಡಲಾಗಿದೆ. ಈ ಕುರಿತಾಗಿ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಸಚಿವರಷ್ಟೇ ಅಲ್ಲ, ಸಿಎಂ ಸಿದ್ದರಾಮಯ್ಯ ರಾಜೀನಾಮೆ ಪಡೆಯಲು ಆಗ್ರಹಿಸಿದ್ದೇವೆ. ಹಣಕಾಸು ಖಾತೆ ಸಿಎಂ ಬಳಿ ಇದೆ, ಅವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ ಪ್ರಕರಣ: ಸಹಕಾರಿ ಬ್ಯಾಂಕ್​ನಲ್ಲಿದ್ದ 45 ಕೋಟಿ ರೂ. ಜಪ್ತಿ

ಈ ಅಕ್ರಮ ಸಂಬಂಧ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ. ವಾಲ್ಮೀಕಿ ನಿಗಮದ ಹಣ ಲೋಕಸಭೆ ಚುನಾವಣೆಗೂ ಬಳಸಿದ್ದಾರೆ. ಸಿದ್ದರಾಮಯ್ಯ ಹಾರಿಕೆ ಉತ್ತರ ಕೊಟ್ಟರೆ ಸುಮ್ಮನೆ ಇರುವುದಿಲ್ಲ. ಆನೆ ನಡೆದಿದ್ದೇ ದಾರಿ ಎಂಬ ವರ್ತನೆ ತೋರಿದರೆ ಸುಮ್ಮನೆ ಇರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಂ ಜೇಬಿಗೆ ಹಣ ಹೋಗಿದೆ, ಚುನಾವಣೆಗೂ ಹಣ ಬಳಸಿದ್ದಾರೆ: R.ಅಶೋಕ್​ ಆರೋಪ

ವಿರೋಧ ಪಕ್ಷದ ನಾಯಕ R.ಅಶೋಕ್​ ಮಾತನಾಡಿದ್ದು, ಸಿಎಂ ಜೇಬಿಗೆ ಹಣ ಹೋಗಿದೆ, ಚುನಾವಣೆಗೂ ಹಣ ಬಳಸಿದ್ದಾರೆ. ಸಿಎಂ ಸಿದ್ದರಾಮಯ್ಯ ಮೂಗಿನ ಅಡಿಯಲ್ಲಿ ಈ ಹಗರಣ ನಡೆದಿದೆ. ಸಿಎಂ ಸಿದ್ದರಾಮಯ್ಯ ಪ್ರಪಂಚದಲ್ಲಿ ನಾನೇ ಬುದ್ಧಿವಂತ ಎನ್ನುತ್ತಾರೆ. ನಿನ್ನ ಮೂಗಿನ ಅಡಿಯಲ್ಲೇ ಹಗರಣ ಆಗಿದೆ, ಸಿಎಂ ಆಗಲು ಲಾಯಕ್ಕಾ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ ಪ್ರಕರಣ: ಆರೋಪಿ ನೆಕ್ಕಂಟಿ ನಾಗರಾಜ್ ಯಾರು? ಹಿನ್ನೆಲೆ ಏನು? ಇಲ್ಲಿದೆ ಮಾಹಿತಿ

ಸಚಿವ ಬಿ.ನಾಗೇಂದ್ರಗೆ 20% ಹಣ, ಸಿಎಂಗೆ 80% ಹಣ ಹೋಗಿದೆ. ಸಿದ್ದರಾಮಯ್ಯ ಇದರಲ್ಲಿ ಪಾಲು ಪಡೆದಿಲ್ಲ ಅಂದರೆ ಸಿಬಿಐಗೆ ಕೊಡಲಿ. 187 ಕೋಟಿ ರೂ. ಟಕಾಟಕ್ ವರ್ಗಾವಣೆ ಮಾಡಿದ ಎಟಿಎಂ ಸರ್ಕಾರ. ಚುನಾವಣೆ ವೇಳೆ ಬೇರೆ ಬೇರೆ ನಿಗ‌ಮದ ಹಣ ಬಳಸಿಕೊಂಡಿದ್ದಾರೆ. ಹೈದರಾಬಾದ್​ ಐಟಿ ಕಂಪನಿಗೆ ಹಣ ಹೇಗೆ ಹೋಯಿತು ಉತ್ತರಿಸಲಿ ಎಂದು ವಾಗ್ದಾಳಿ ಮಾಡಿದ್ದಾರೆ. ಮಾನ, ಮರ್ಯಾದೆ ಇದ್ರೆ ಸಿಎಂ ರಾಜೀನಾಮೆ ಕೊಟ್ಟು ಹೋಗಬೇಕು. ಮೊದಲು ನಾಗೇಂದ್ರ ವಿಕೆಟ್ ಬೀಳಬೇಕು. ಗಾಂಧಿ ಪ್ರತಿಮೆ ಮುಂದೆ ಪ್ರತಿಭಟಿಸಿ ಸಿಎಂ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.