ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ ಪ್ರಕರಣ: ಸಹಕಾರಿ ಬ್ಯಾಂಕ್​ನಲ್ಲಿದ್ದ 45 ಕೋಟಿ ರೂ. ಜಪ್ತಿ

ಹೈದರಾಬಾದ್​ನ ಫಸ್ಟ್ ಫೈನಾನ್ಸ್ ಸಹಕಾರಿ ಬ್ಯಾಂಕ್​ಗೆ ವರ್ಗಾವಣೆಯಾಗಿದ್ದ 94.73 ಕೋಟಿ ರೂ. ಪೈಕಿ ಬಹುಪಾಲು ಹಣ ಡ್ರಾ ಆಗಿತ್ತು. ಇನ್ನುಳಿದ ಹಣ ಎಲ್ಲಿಗೆ ಹೋಗಿದೆ ಎಂಬುದರ ಕುರಿತು ಎಸ್​ಐಟಿ ತನಿಖೆ ನಡೆಸುತ್ತಿದೆ. ಪ್ರಕರಣ ಸಂಬಂಧ ಈವರೆಗೆ ಐವರನ್ನು ಎಸ್​ಐಟಿ ಬಂಧಿಸಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ ಪ್ರಕರಣ: ಸಹಕಾರಿ ಬ್ಯಾಂಕ್​ನಲ್ಲಿದ್ದ 45 ಕೋಟಿ ರೂ. ಜಪ್ತಿ
ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ ಪ್ರಕರಣ: ಸಹಕಾರಿ ಬ್ಯಾಂಕ್​ನಲ್ಲಿದ್ದ 45 ಕೋಟಿ ರೂ. ಜಪ್ತಿ
Follow us
| Updated By: ವಿವೇಕ ಬಿರಾದಾರ

Updated on:Jun 09, 2024 | 7:59 AM

ಬೆಂಗಳೂರು, ಜೂನ್ 6: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಹಗರಣದ ಪ್ರಕರಣ (Valmiki corporation scam) ತನಿಖೆ ಚುರುಕುಗೊಳಿಸಿರುವ ಎಸ್​ಐಟಿ (SIT) ಹೈದರಾಬಾದ್​ನ ಫಸ್ಟ್ ಫೈನಾನ್ಸ್ ಸಹಕಾರಿ ಬ್ಯಾಂಕ್​ನಲ್ಲಿದ್ದ 45 ಕೋಟಿ ರೂ. ಹಣ ಜಪ್ತಿ ಮಾಡಿದೆ. ಬಂಧಿತ ಆರೋಪಿ ಸತ್ಯನಾರಾಯಣ್‌ ಒಡೆತನದ ಸಹಕಾರಿ ಬ್ಯಾಂಕ್ ಇದಾಗಿದ್ದು, ಇದೇ ಬ್ಯಾಂಕ್‌ ಖಾತೆಗೆ 94.73 ಕೋಟಿ ರೂ. ವರ್ಗಾವಣೆಯಾಗಿತ್ತು. ಬ್ಯಾಂಕ್​ನ 18 ನಕಲಿ ಖಾತೆಗಳಿಗೆ 94.73 ಕೋಟಿ ರೂ. ವರ್ಗಾವಣೆಯಾಗಿತ್ತು.

ವರ್ಗಾವಣೆಯಾಗಿದ್ದ 94.73 ಕೋಟಿ ರೂ. ಪೈಕಿ ಬಹುಪಾಲು ಹಣ ಡ್ರಾ ಆಗಿತ್ತು. ಇನ್ನುಳಿದ ಹಣ ಎಲ್ಲಿಗೆ ಹೋಗಿದೆ ಎಂಬುದರ ಕುರಿತು ಎಸ್​ಐಟಿ ತನಿಖೆ ನಡೆಸುತ್ತಿದೆ. ಪ್ರಕರಣ ಸಂಬಂಧ ಐವರೆಗೆ ಐವರನ್ನು ಎಸ್​ಐಟಿ ಬಂಧಿಸಿದೆ. ಪರಶುರಾಮ್, ನೆಕ್ಕುಂಟಿ ನಾಗರಾಜ್, ನಾಗೇಶ್ವರ ರಾವ್, ಪದ್ಮನಾಭ, ಸತ್ಯನಾರಾಯಣ ಬಂಧಿತರು. ಐವರನ್ನು ಕಸ್ಟಡಿಗೆ ಪಡೆದು ಎಸ್​ಐಟಿ ವಿಚಾರಣೆ ನಡೆಸುತ್ತಿದೆ.

ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರನ್​ ಆತ್ಮಹತ್ಯೆ ಪ್ರಕರಣ ಸಚಿವರಿಗೂ ಕಂಟಕ ತಂದಿಟ್ಟಿದೆ. ಕೇಸ್​ ಸಂಬಂಧ ಸಿಬಿಐ ಯಾವಾಗ ಎಫ್ಐಆರ್​ ದಾಖಲಿಸಿಕೊಂಡಿತೋ, ಖುದ್ದು ಸಿಎಂ ಸಿದ್ದರಾಮಯ್ಯ ಸಚಿವ ನಾಗೇಂದ್ರ ಕರೆಸಿಕೊಂಡು ಒಂದಿಷ್ಟು ಮಾಹಿತಿ ಸಂಗ್ರಹಿಸಿದ್ದಾರೆ. ಸಭೆಯಲ್ಲಿ ರಾಜೀನಾಮೆ ಕೊಡೋದು ಅನಿವಾರ್ಯ ಅಂತ ಹೇಳಿದ್ದಾರಂತೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ: ಸಿಬಿಐ ಎಂಟ್ರಿ ಬೆನ್ನಲ್ಲೇ ನಾಗೇಂದ್ರರನ್ನ ಕರೆಸಿಕೊಂಡು ಚರ್ಚಿಸಿದ ಸಿಎಂ, ಸಚಿವರ ತಲೆದಂಡ ಫಿಕ್ಸ್?

ನಾಗೇಂದ್ರ ವಿಚಾರವನ್ನು ಬಿಜೆಪಿ ಯಾವಾಗ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಅಸ್ತ್ರವನ್ನಾಗಿಸಿತೋ, ಸಿಬಿಐ ಎಂಟ್ರಿ ಯಾವಾಗ ಆಯ್ತೋ, ಸರ್ಕಾರ ಫುಲ್​ ಅಲರ್ಟ್ ಆಯ್ತು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​ ಹಗರಣ ಆರೋಪದ ಬಗ್ಗೆ ಮಾಹಿತಿ ಪಡೆದುಕೊಂಡು ಚರ್ಚೆ ಮಾಡಿದರು. ಇಷ್ಟೇ ಅಲ್ಲ ಖುದ್ದು ನಾಗೇಂದ್ರರನ್ನ ಕಾವೇರಿ ನಿವಾಸಕ್ಕೆ ಕರೆಸಿಕೊಂಡ ಸಿಎಂ ಸಿದ್ದರಾಮಯ್ಯ ಮತ್ತೆ ಮಾಹಿತಿ ಪಡೆದುಕೊಂಡಿದ್ದಾರೆ. ಹೀಗಾಗಿ ನಾಗೇಂದ್ರ ಇಂದು ಮಧ್ಯಾಹ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:38 am, Thu, 6 June 24

ತಾಜಾ ಸುದ್ದಿ
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು