ವಾಲ್ಮೀಕಿ ನಿಗಮದ ಹಣ ಹರಿದು ಹಂಚಿದ್ದು, ಭ್ರಷ್ಟ ಕುಳಗಳ ಹೊಟ್ಟೆ ಸೇರಿದ್ದು ಹೇಗೆ? ಇಲ್ಲಿದೆ ವಿವರ

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ 187 ಕೋಟಿ. ರೂ ಹಗರಣ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ನಿಗಮದ ಹಣ ಯಾರ ಯಾರ ಪಾಲಾಗಿದೆ? ಯಾರ ಸೂಚನೆಯಂತೆ ವರ್ಗಾವಣೆಯಾಗಿದೆ? ಹಗರಣ ನಡೆದಿದ್ದು ಹೇಗೆ? ಎಂಬುವುದರ ಸಂಪೂರ್ಣ ಡೀಟೈಲ್ಸ್​ ಇಲ್ಲಿದೆ.

ವಾಲ್ಮೀಕಿ ನಿಗಮದ ಹಣ ಹರಿದು ಹಂಚಿದ್ದು, ಭ್ರಷ್ಟ ಕುಳಗಳ ಹೊಟ್ಟೆ ಸೇರಿದ್ದು ಹೇಗೆ? ಇಲ್ಲಿದೆ ವಿವರ
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ
Follow us
|

Updated on:Jul 11, 2024 | 1:10 PM

ಬೆಂಗಳೂರು, ಜುಲೈ 10: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Valmiki Scheduled Tribes Development Corporation) 187 ಕೋಟಿ ರೂ. ಹಗರಣ ದೇಶ್ಯಾದಂತ ಸದ್ದು ಮಾಡಿದೆ. ಹಗರಣದ ತನಿಖೆ ದಿಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ದೊಡ್ಡ ದೊಡ್ಡ ಕುಳಗಳ ಹೆಸರು ಆಚೆ ಬರುತ್ತಿವೆ. ಹಗರಣಕ್ಕೆ ಸಂಬಂಧಿಸಿದಂತೆ ಎಸ್​ಐಟಿ, ಸಿಬಿಐ ತನಿಖೆ ನಡೆಸುತ್ತಿದ್ದು, ಇದೀಗ ಜಾರಿ ನಿರ್ದೇಶನಾಲಯ (ED) ರಂಗ ಪ್ರವೇಶಿಸಿದೆ. ಹಗರಣಕ್ಕೆ ಸಂಬಂಧಿಸಿದಂತೆ ಈವರಗೆ ತನಿಖಾಧಿಕಾರಿಗಳು 11 ಜನರನ್ನು ಬಂಧಿಸಿದ್ದಾರೆ. ಇವರೆಲ್ಲರ ಆಟ ಮಾಜಿ ಸಚಿವ ಬಿ. ನಾಗೇಂದ್ರ ಸೂಚನೆ ನಂತರ ಆರಂಭವಾಯ್ತು. ಇವರ ಆಟ ಹೇಗೆ ಆರಂಭಯ್ತು? ನಿಗಮದ ಖಾತೆಯಲ್ಲಿದ್ದ ಹಣ ಹೇಗೆ? ಎಲ್ಲೆಲ್ಲಿ? ಯಾವ್ಯಾವ ಖಾತೆಗಳಿಗೆ ವರ್ಗಾವಣೆಯಾಗಿದೆ ಎಂಬ ಮಾಹಿತಿ ಟಿವಿ9ಗೆ ಡಿಜಿಟಲ್​ಗೆ ಲಭ್ಯವಾಗಿದೆ.

ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ವಸಂತನಗರ ಶಾಖೆಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಎರಡು ಖಾತೆಗಳಿರುತ್ತವೆ. ಎರಡು ಖಾತೆಗಳಲ್ಲಿ ಒಂದು ಖಾತೆಯನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ್ ಸರ್ಕಾರದ ಅನುಮತಿ ಪಡೆಯದೇ ಫೆ.19ರಂದು ಎಂ.ಜಿ.ರಸ್ತೆಯ ಶಾಖೆಗೆ ವರ್ಗಾವಣೆ ಮಾಡುತ್ತಾನೆ. ಬೇರೆ ಬ್ಯಾಂಕ್​ನಲ್ಲಿದ್ದ ಹಾಗೂ ಟ್ರೆಜರಿ ಹೂಜುರ್ -2 ನಲ್ಲಿದ್ದ 187 ಕೋಟಿ ರೂ.ಗಳನ್ನು ಹೊಸ ಖಾತೆಗೆ ವರ್ಗಾವಣೆ ಮಾಡುತ್ತಾನೆ.

187 ಕೋಟಿ ರೂ.ನಲ್ಲಿ 94 ಕೋಟಿ ಹಣವನ್ನ ಬ್ಯಾಂಕ್​ನ ಅಧಿಕಾರಿಗಳು ಹೈದರಾಬಾದ್​ನ ಫಸ್ಟ್ ಬ್ಯಾಂಕ್​ನ 18 ನಕಲಿ ಖಾತೆಗಳಿಗೆ ವರ್ಗಾವಣೆ ಮಾಡುತ್ತಾರೆ. ಇದೆಲ್ಲ ಬಂಧಿತ ನೆಕ್ಕುಂಟೆ ನಾಗರಾಜ್, ನಾಗೇಶ್ವರ್ ರಾವ್ ಸೂಚನೆಯಂತೆ ನಡೆಯುತ್ತಿರುತ್ತೆ. ಹೀಗೆ ನಕಲಿ ಖಾತೆಗಳಿಗೆ ವರ್ಗಾವಣೆಯಾದ ಹಣವನ್ನ ಮಧ್ಯವರ್ತಿ, ಬಂಧಿತ ಸತ್ಯನಾರಾಯಣ ವರ್ಮಾ ಡ್ರಾ ಮಾಡಿಕೊಳ್ಳುತ್ತಾನೆ.

ನಕಲಿ ಖಾತೆಯಿಂದ ಬೇರೆ ಖಾತೆಗಳಿಗೆ ನೆಟ್ ಬ್ಯಾಂಕ್, RTGS, ಫೋನ್ ಪೇ, ಗೂಗಲ್ ಪೇ ಮೂಲಕ ವರ್ಗಾವಣೆಯಾಗುತ್ತದೆ. ಹೀಗೆ ಡ್ರಾ ಮಾಡಿಕೊಂಡ ಹಣವನ್ನು ಸತ್ಯನಾರಾಯಣ ವರ್ಮಾ, ನೆಕ್ಕುಂಟಿ ನಾಗರಾಜ್, ನಾಗೇಶ್ವರ್ ರಾವ್ ಆರೋಪಿಗಳಿಗೆ ಹಂಚಿದ್ದರು.

ಈ 94 ಕೋಟಿಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಬ್ ಜೇಬಿಗೆ 5 ಕೋಟಿ ರೂ. ಸೇರಿದೆ. ತನ್ನ ಪಾಲಿಗೆ ಬಂದ ಈ ಹಣದಲ್ಲಿ ಪದ್ಮನಾಬ್ ಅರ್ಧ ಹಣವನ್ನು ತನ್ನ ಮಗನ ಸ್ನೇಹಿತನ ಮನೆಯಲ್ಲಿ ಇಟ್ಟಿದ್ದನು.

ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ: ಆಂಧ್ರದ ಫಸ್ಟ್ ಫೈನಾನ್ಸ್ ಮೂಲಕವೂ ಅವ್ಯವಹಾರ, ನಾಗೇಂದ್ರಗೆ ಇ.ಡಿ ಗ್ರಿಲ್

ನೆಲಮಂಗಲದ ಗೋವಿನಹಳ್ಳಿಯ ಕೆಂಪೇಗೌಡ ಎಂಬುವರ ಮನೆಯಲ್ಲಿ 2 ಸೂಟ್ ಕೇಸ್, 2 ಹ್ಯಾಂಡ್ ಬ್ಯಾಗ್​ನಲ್ಲಿ ಒಟ್ಟು 3.64 ಕೋಟಿ ಹಣ ಇಟ್ಟಿದ್ದನು. ಈ ಹಣವನ್ನು ಎಸ್​ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಮತ್ತೆ ಪದ್ಮನಾಬ್ ಸ್ನೇಹಿತರೊಬ್ಬರ ಕಾರಿನಲ್ಲಿ ಬಚ್ಚಿಟ್ಟಿದ್ದ 30 ಲಕ್ಷ ರೂ. ಹಣ ಸಿಗುತ್ತದೆ. ಹಾಗೆ ಪದ್ಮನಾಭ್, ಮಾಜಿ ಸಚಿವ ನಾಗೇಂದ್ರ ಆಪ್ತ ಹರೀಶ್​ಗೆ 25 ಲಕ್ಷ, ಶಾಸಕ ದದ್ದಲ್ ಆಪ್ತ ಪಂಪಣ್ಣಗೆ 55 ಲಕ್ಷ ನೀಡಿದ್ದಾನೆ. ಇದೇ ರೀತಿ ನೆಕ್ಕುಂಟಿ ನಾಗರಾಜ್, ನಾಗೇಶ್ವರ್ ರಾವ್, ಸತ್ಯನಾರಾಯಣ ವರ್ಮಾ ಇತರೆ ಆರೋಪಿಗಳಿಗೂ ಹಣ ಹಂಚಿದ್ದಾನೆ.

ಹೈದರಾಬಾದ್​ಗೆ ಹಣ ವರ್ಗಾವಣೆಯಾಗಿದ್ದು ಹೇಗೆ

ನಿಗಮದ ಹಣ ವರ್ಗವಾಣೆಯಾಗಿದ್ದ ಹೈದರಾಬಾದ್​ನ ಫಸ್ಟ್ ಫೈನಾನ್ಸ್ ಕೋ ಅಪರೇಟಿವ್ ಸೊಸೈಟಿ ಬ್ಯಾಂಕ್ ಅನ್ನು ಆರ್​ಬಿಎಲ್​ ಬ್ಯಾಂಕ್ ನಿರ್ವಹಣೆ ಮಾಡುತ್ತದೆ. ಮಧ್ಯವರ್ತಿಗಳಾದ ಸತ್ಯನಾರಾಯಣ ವರ್ಮಾ ಮತ್ತು ಚಂದ್ರಮೋಹನ್ ಎಂಬುವರು ಫಸ್ಟ್ ಫೈನಾನ್ಸ್ ಬ್ಯಾಂಕ್​ನಲ್ಲಿ ನಕಲಿ ಖಾತೆಗಳನ್ನು ತೆರೆದಿದ್ದಾರೆ. ಈ ಇಬ್ಬರು ಮಧ್ಯವರ್ತಿಗಳು 2024ರ ಜನವರಿಯಲ್ಲಿ 10 ಕ್ಕೂ ಹೆಚ್ಚು ನಕಲಿ ಖಾತೆಗಳನ್ನ ಹೈದರಾಬಾದ್ ಮತ್ತು ವಿಜಯವಾಡದಲ್ಲಿ ನಕಲಿ ಖಾತೆ ತೆರೆದಿದ್ದರು.

ಬಳಿಕ ಬೆಂಗಳೂರು ಯೂನಿಯನ್ ಬ್ಯಾಂಕ್​ನಿಂದ ನಕಲಿ ಖಾತೆಗಳಿಗೆ 89 ಕೋಟಿ ರೂ. ಹಣ ವರ್ಗಾವಣೆಯಾಗಿದೆ. ಬಳಿಕ ಫಸ್ಟ್ ಫೈನಾನ್ಸ್ ಕೋ ಅಪರೇಟಿವ್ ಸೊಸೈಟಿ ಬ್ಯಾಂಕ್​ ನಕಲಿ ಖಾತೆಗಳಿಂದ ಬೇರೆ ಬೇರೆ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ. ಆದರೆ 3-4 ತಿಂಗಳಲ್ಲೇ ಮಿನಿಮಮ್ ಬ್ಯಾಲೆನ್ಸ್ ಇಲ್ಲದೆ ಈ ಎರಡು ನಕಲಿ ಖಾತೆಗಳು ಬಂದ್​ ಆದವು.

ಈ ರೀತಿಯಾಗಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಹರಿದು ಹಂಚಲಾಗಿತ್ತು. ಇದೀಗ ಎಸ್​ಐಟಿ ತನಿಖೆಯಲ್ಲಿ ಯಾರ್‍ಯಾರು ಹಣ ತಿಂದಿದ್ದಾರೆ ಎಂಬುವುದು ಬಯಲಾಗುತ್ತಿದೆ. ಆರೋಪಿಗಳ, ಆಪ್ತರ ಬಳಿ ಸಿಕ್ಕ ಹಣವನ್ನು ಎಸ್​ಐಟಿ ಅಧಿಕಾರಿಗಳು ಜಪ್ತಿ ಮಾಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:36 pm, Thu, 11 July 24

ತಾಜಾ ಸುದ್ದಿ
ವಿಜಯಲಕ್ಷ್ಮೀ ಜೊತೆಗೆ ಬಂದು ಡಿಕೆಶಿನ ಮೀಟ್ ಮಾಡಿದ್ದೇಕೆ ಜೋಗಿ ಪ್ರೇಮ್?
ವಿಜಯಲಕ್ಷ್ಮೀ ಜೊತೆಗೆ ಬಂದು ಡಿಕೆಶಿನ ಮೀಟ್ ಮಾಡಿದ್ದೇಕೆ ಜೋಗಿ ಪ್ರೇಮ್?
ಶಿರೂರು ದುರಂತ: ರಕ್ಷಣಾ ತಂಡಗಳಿಂದ ತಾರತಮ್ಯ ಆಗೋದು ಸಾಧ್ಯವೇ ಇಲ್ಲ
ಶಿರೂರು ದುರಂತ: ರಕ್ಷಣಾ ತಂಡಗಳಿಂದ ತಾರತಮ್ಯ ಆಗೋದು ಸಾಧ್ಯವೇ ಇಲ್ಲ
ವಿಡಿಯೋ: ವಿಜಯಲಕ್ಷ್ಮಿ ದರ್ಶನ್ ಭೇಟಿಯ ಬಗ್ಗೆ ಡಿಕೆ ಶಿವಕುಮಾರ್ ಮಾತು
ವಿಡಿಯೋ: ವಿಜಯಲಕ್ಷ್ಮಿ ದರ್ಶನ್ ಭೇಟಿಯ ಬಗ್ಗೆ ಡಿಕೆ ಶಿವಕುಮಾರ್ ಮಾತು
ಮುಡಾ ಹಗರಣ ಚರ್ಚೆಗೆ ಅವಕಾಶ ಸಿಗದ್ದಕ್ಕೆ ಸಿಟ್ಟಿಗೆದ್ದ ಬಿಜೆಪಿ ಶಾಸಕರು
ಮುಡಾ ಹಗರಣ ಚರ್ಚೆಗೆ ಅವಕಾಶ ಸಿಗದ್ದಕ್ಕೆ ಸಿಟ್ಟಿಗೆದ್ದ ಬಿಜೆಪಿ ಶಾಸಕರು
ಶಿರೂರು ಗುಡ್ಡ ಕುಸಿತ; ಉಳುವೆರೆ ಗ್ರಾಮದಲ್ಲಿ ದಿಕ್ಕಾಪಾಲಾಗಿ ಓಡಿದ ಜನ
ಶಿರೂರು ಗುಡ್ಡ ಕುಸಿತ; ಉಳುವೆರೆ ಗ್ರಾಮದಲ್ಲಿ ದಿಕ್ಕಾಪಾಲಾಗಿ ಓಡಿದ ಜನ
ನಗುವನ ತೋಟದ ತಡೆಗೋಡೆ ಕುಸಿತಕ್ಕೆ ಕಾರಣರಾದ ಅಧಿಕಾರಿಗಳಿಗೆ ಶಿಕ್ಷೆಯಾಗಬಾರದೇ?
ನಗುವನ ತೋಟದ ತಡೆಗೋಡೆ ಕುಸಿತಕ್ಕೆ ಕಾರಣರಾದ ಅಧಿಕಾರಿಗಳಿಗೆ ಶಿಕ್ಷೆಯಾಗಬಾರದೇ?
ಉಪ ಮುಖ್ಯಮಂತ್ರಿ ಶಿವಕುಮಾರ್ ಮನೆಗೆ ಬಂದ ಚಿತ್ರನಟ ದರ್ಶನ್ ಪತ್ನಿ, ಸಹೋದರ
ಉಪ ಮುಖ್ಯಮಂತ್ರಿ ಶಿವಕುಮಾರ್ ಮನೆಗೆ ಬಂದ ಚಿತ್ರನಟ ದರ್ಶನ್ ಪತ್ನಿ, ಸಹೋದರ
ಹಾಸನ: ಧಾರಾಕಾರ ಮಳೆಗೆ ಬಿದ್ದ ಬೃಹತ್ ಗಾತ್ರದ ಮರ, ಮಠದ ಕಟ್ಟಡ ಹಾನಿ
ಹಾಸನ: ಧಾರಾಕಾರ ಮಳೆಗೆ ಬಿದ್ದ ಬೃಹತ್ ಗಾತ್ರದ ಮರ, ಮಠದ ಕಟ್ಟಡ ಹಾನಿ
Karnataka Assembly Session Live: ವಿಧಾನ ಮಂಡಲ ಅಧಿವೇಶನ ನೇರ ಪ್ರಸಾರ
Karnataka Assembly Session Live: ವಿಧಾನ ಮಂಡಲ ಅಧಿವೇಶನ ನೇರ ಪ್ರಸಾರ
ನಾರಾಯಣಪುರ ಜಲಾಶಯಯದಿಂದ ಕೃಷ್ಣಾ ನದಿಗೆ ನೀರು, ನದಿಪಾತ್ರದಲ್ಲಿ ಪ್ರವಾಹದ ಭಯ
ನಾರಾಯಣಪುರ ಜಲಾಶಯಯದಿಂದ ಕೃಷ್ಣಾ ನದಿಗೆ ನೀರು, ನದಿಪಾತ್ರದಲ್ಲಿ ಪ್ರವಾಹದ ಭಯ