ಬಸವರಾಜ್ ಬೊಮ್ಮಾಯಿ ಭೇಟಿ ಮಾಡಿ ತನಗೆ ಜೀವ ಬೆದರಿಕೆ ಇದೆಯೆಂದ ವರ್ತೂರು , ಗೃಹ ಸಚಿವರ ಪ್ರತಿಕ್ರಿಯೆ ಏನು?

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 02, 2020 | 12:44 PM

ನನ್ನ ಅಪಹರಣದ ಸಂಪೂರ್ಣ ವಿವರಗಳನ್ನು ಗೃಹ ಸಚಿವರಿಗೆ ತಿಳಿಸಿದ್ದೇನೆ. ಆರೋಪಿಗಳನ್ನು ಕೂಡಲೇ ಬಂಧಿಸಲು ಮನವಿ ಮಾಡಿದ್ದೇನೆ. ನನಗೆ ಮತ್ತು ನನ್ನ ಕುಟುಂಬದವರಿಗೆ ಜೀವ ಬೆದರಿಕೆ ಇದೆ. ಹಾಗಾಗಿ ಭದ್ರತೆ ನೀಡಲು ಕೋರಿದ್ದೇನೆ ಎಂದು ವರ್ತೂರು ಪ್ರಕಾಶ್​ ತಿಳಿಸಿದ್ದಾರೆ.

ಬಸವರಾಜ್  ಬೊಮ್ಮಾಯಿ  ಭೇಟಿ ಮಾಡಿ ತನಗೆ ಜೀವ ಬೆದರಿಕೆ ಇದೆಯೆಂದ  ವರ್ತೂರು , ಗೃಹ ಸಚಿವರ ಪ್ರತಿಕ್ರಿಯೆ  ಏನು?
ವರ್ತೂರು ಪ್ರಕಾಶ್​ ಮತ್ತು ಬಸವರಾಜ್ ಬೊಮ್ಮಾಯಿ
Follow us on

ಬೆಂಗಳೂರು: ನನ್ನನ್ನು ಅಪಹರಣ ಮಾಡಲಾಗಿತ್ತು.. ಹಣಕ್ಕಾಗಿ ಹಲ್ಲೆ ಮಾಡಿದ್ದಾರೆ ಎಂದು ನವೆಂಬರ್​ 25ರಂದು ನಡೆದ ಘಟನೆಯ ಸಂಪೂರ್ಣ ವಿವರಣೆ ಬಿಚ್ಚಿಟ್ಟ ಮಾಜಿ ಸಚಿವ ವರ್ತೂರು ಪ್ರಕಾಶ್​, ಇಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.

ನಂತರ ಮಾತನಾಡಿ, ನನ್ನ ಅಪಹರಣದ ಸಂಪೂರ್ಣ ವಿವರಗಳನ್ನು ಗೃಹ ಸಚಿವರಿಗೆ ತಿಳಿಸಿದ್ದೇನೆ. ಆರೋಪಿಗಳನ್ನು ಕೂಡಲೇ ಬಂಧಿಸಲು ಮನವಿ ಮಾಡಿದ್ದೇನೆ. ನನಗೆ ಮತ್ತು ನನ್ನ ಕುಟುಂಬದವರಿಗೆ ಜೀವ ಬೆದರಿಕೆ ಇದೆ. ಹಾಗಾಗಿ ಭದ್ರತೆ ನೀಡಲು ಕೋರಿದ್ದೇನೆ ಎಂದು ತಿಳಿಸಿದ್ದಾರೆ.

ಅದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲ, ನನ್ನ ಎದುರಲ್ಲೇ ಪೊಲೀಸ್ ಆಯುಕ್ತರ ಜತೆಯೂ ಚರ್ಚಿಸಿದ್ದಾರೆ. ನನಗೆ ಭದ್ರತೆ ನೀಡುವುದಾಗಿಯೂ ಹೇಳಿದ್ದಾರೆ. ಖಂಡಿತ ಆದಷ್ಟು ಬೇಗ ಕ್ರಮ ಕೈಗೊಳ್ಳುತ್ತಾರೆಂಬ ಭರವಸೆ ಇದೆ ಎಂದು ವರ್ತೂರು ಪ್ರಕಾಶ್​ ಹೇಳಿದ್ದಾರೆ.

ವರ್ತೂರು ಪ್ರಕಾಶ್​ ಅಪಹರಣದ ಹಿಂದೆ ಮಹಿಳೆ? ಮಾಜಿ ಸಚಿವರು ಹೇಳಿದ ಕಿಡ್ನಾಪ್​ ಪ್ರಸಂಗದ ಸುತ್ತ ಅನುಮಾನದ ಹುತ್ತ!

 

Published On - 11:02 am, Wed, 2 December 20