ಕೊರೊನಾ ಟೆಸ್ಟ್ ವೇಳೆ ಎಸ್ಕೇಪ್ ಆಗಿದ್ದ ಮರಗಳ್ಳ ಮತ್ತೆ ಸಿಕ್ಕಿಬಿದ್ದ
ಬಂಧಿತನಿಂದ 9 ಬೀಟೆ ಮರದ ನಾಟ, ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನ ವಶಕ್ಕೆ ಪಡೆಯಲಾಗಿದೆ.
ಕೊಡಗು: ಮರಗಳ್ಳತನ ಮಾಡುವಾಗ ಸಿಕ್ಕಿಬಿದ್ದು ಅರಣ್ಯ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿ ಓಡಿಹೋಗಿದ್ದ ಖತರ್ನಾಕ್ ಮರಗಳ್ಳ ಮತ್ತೆ ಬಲೆಗೆ ಬಿದ್ದಿದ್ದಾನೆ. ಸೋಮವಾರಪೇಟೆ ತಾಲೂಕಿನ ವಾಲ್ನೂರು ತ್ಯಾಗತ್ತೂರಿನ ತೋಟದಲ್ಲಿ ಬೀಟೆ ಮರ ಕಳ್ಳತನ ಮಾಡುತ್ತಿದ್ದ ಹುಣಸೂರು ಮೂಲದ ಜುನೈದ್ ಪಾಷಾ (24) ಕಟಾವು ಮಾಡಿದ್ದ ಮರಗಳ ಸಮೇತ ಸಿಕ್ಕಿಬಿದ್ದಿದ್ದ.
ಕೊರೊನಾ ಟೆಸ್ಟ್ ಮಾಡಿಸಲು ಕರೆದೊಯ್ದ ವೇಳೆ ಎಸ್ಕೇಪ್ ಜುನೈದ್ನನ್ನು ವಶಕ್ಕೆ ಪಡೆದ ಅಧಿಕಾರಿಗಳು ಕೊವಿಡ್ ಟೆಸ್ಟ್ ಮಾಡಿಸಲು ಕುಶಾಲನಗರ ಆಸ್ಪತ್ರೆಗೆ ಕರೆದೊಯ್ದಿದ್ದರು. ಈ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳಾದ ಆಲ್ಬರ್ಟ್ ಡಿಸೋಜ, ದುರ್ಗೇಶ್ ಎಂಬುವವರ ಮೇಲೆ ಹಲ್ಲೆ ನಡೆಸಿದ ಪಾಷಾ ಆಸ್ಪತ್ರೆಯಿಂದ ಪರಾರಿಯಾಗಿದ್ದ.
ಬಳಿಕ ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಜುನೈದ್ ಪಾಷಾನನ್ನು ಬಂಧಿಸಿದ್ದಾರೆ. ಬಂಧಿತನಿಂದ 9 ಬೀಟೆ ಮರದ ನಾಟ, ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಶಾಸಕರ ಮನೆ ಆವರಣದಲ್ಲಿದ್ದ ಗಂಧದ ಮರಕ್ಕೇ ಕೊಡಲಿ ಹಾಕುವ ಯತ್ನ
Published On - 11:49 am, Wed, 2 December 20